BigBoss Ghost : ಬಿಗ್ ಬಾಸ್ ಮನೆಯಲ್ಲಿ ಭೂತ ..!! ಶಮಂತ್ ಬಿಚ್ಚಿಟ್ಟ ಆ ಘಟನೆ ಏನು ಗೊತ್ತಾ ..??

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಕುತೂಹಲವನ್ನು ಸೃಷ್ಟಿಸುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೆ ಆರಂಭಗೊಂಡಿದೆ.  ಮೊದಲ ದಿನವೇ ಶಮಂತ್ ಬಿಗ್‌ಬಾಸ್ ಮನೆಯ ಭೂತಕ್ಕೆ ಬೆಚ್ಚಿಬಿದ್ದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ರೂಮ್ ಇದೆ. ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗುವವರಿಗೆ ಈ ರೂಮ್ ನೀಡಲಾಗುತ್ತದೆ. ಆ ರೂಮ್ ಬಲ್ಲಿ ಲಕ್ಸುರಿ ಸೌಲಭ್ಯ ದೊರೆಯಲಿದೆ. ಈ ರೂಮ್‌ನಲ್ಲಿರೋ ಇರೋದಕ್ಕೆ ಮನೆಯಲ್ಲಿರುವ ಎಲ್ಲರೂ ಕೂಡ ಇಷ್ಟ ಪಡ್ತಾರೆ. ಆದ್ರೀಗ ಕ್ಯಾಪ್ಟನ್ ‌ರೂಮ್ ನಲ್ಲಿ ಕಪ್ಪು ಆಕೃತಿಯೊಂದು ಕಾಣಿಸಿಕೊಂಡು, ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ಶಂಮತ್ ಹಾಗೂ ಪ್ರಿಯಾಂಕ ಮಾತನಾಡುವ ವೇಳೆಯಲ್ಲಿ ಕ್ಯಾಪ್ಟನ್ ರೂಮಿನಲ್ಲಿ ಭೂತ ನೋಡಿದ್ದೇನೆ ಎಂದಿದ್ದಾರೆ. ಅಲ್ಲದೇ ಕ್ಯಾಪ್ಟನ್ ಆದವರು ಯಾರೂ ಕೂಡ ಆ ರೂಮ್ ನಲ್ಲಿ ಸರಿಯಾಗಿ ನಿದ್ದೆ ಮಾಡಿಲ್ಲ. ನಾನು ಕ್ಯಾಪ್ಟನ್ ಆದಾಗ ಆ ರೂಮಿನಲ್ಲಿ ಹೇಗೆ ಕಳೆದಿದ್ದೇನೋ ಅಂತಾ ಮಾತು ಮುಗಿಸಿದ್ದಾರೆ. ಶಂಮತ್ ತನ್ನ ಮನಸಿನ ತೊಳಲಾಟವನ್ನು ಚಕ್ರವರ್ತಿ ಚಂದ್ರಚೂಡ್ ಮುಂದೆಯೂ ಹೇಳಿಕೊಂಡಿದ್ದಾರೆ.

ಇದೀಗ ಬಿಗ್ ಬಾಸ್ ‌ಮನೆಯ ತುಂಬೆಲ್ಲಾ ಕ್ಯಾಪ್ಟನ್ ರೂಮ್ ಭೂತದ ಚರ್ಚೆ ಶುರುವಾಗಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಕಂಡ ಕಪ್ಪು ಆಕೃತಿ ಕುತೂಹಲವನ್ನು ಹುಟ್ಟುಹಾಕಿದೆ.

Comments are closed.