ಮಿಥುನ್ ರೈ, ನಲಪಾಡ್ ಅನರ್ಹ : ರಕ್ಷ ರಾಮಯ್ಯಗೆ ಒಲಿದ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ

ಬೆಂಗಳೂರು : ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ತೀವ್ರ ಕುತೂಹಲ ಮೂಡಿಸಿದ್ದು, ಯುವನಾಯಕ ರಕ್ಷಾ ರಾಮಯ್ಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ ಆಕಾಂಕ್ಷಿಗಳಾಗಿದ್ದ ಮಿಥುನ್ ರೈ ಹಾಗೂ ನಲಪಾಡ್ ಅವರನ್ನು ಎಐಸಿಸಿ ಅನರ್ಹಗೊಳಿಸಿದೆ.

ಈ ಬಾರಿಯ ರಾಜ್ಯ ಕಾಂಗ್ರೆಸ್ ಯುವ ಘಟಕದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮಾಜಿ ಸಚಿವ ಎಂ.ಆರ್. ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ 56,271 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ್ರೆ, ಎಚ್.ಎಸ್.ಮಂಜುನಾಥ್ 18,137 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 7 ಮಂದಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಮಿಥುನ್ ರೈ ಕೊನೆಯ ಹಂತದಲ್ಲಿ ನಾಮಪತ್ರವನ್ನು ವಾಪಾಸ್ ಪಡೆದಿದ್ದರು. ಅಂತಿಮ ಹಂತದಲ್ಲಿ ಒಟ್ಟು 6 ಮಂದಿ ಸ್ಪರ್ಧಾ ಕಣದಲ್ಲಿದ್ದರೂ ಕೂಡ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಬರೋಬ್ಬರಿ 64,203 ಮತಗಳನ್ನು ಪಡೆಯುವ ಮೂಲಕ ಅತೀ ಹೆಚ್ಚುಮತಗಳನ್ನು ಪಡೆದಿದ್ದರು.

ಆದರೆ ಎಐಸಿಸಿ ಮೊಹಮದ್ ಹ್ಯಾರಿಸ್ ನಲಪಾಡ್ ಹಾಗೂ ಮಿಥುನ್ ರೈ ಇಬ್ಬರನ್ನೂ ಅನರ್ಹಗೊಳಿಸಿದ್ದು, ಇಬ್ಬರ ಅನರ್ಹತೆಗೆ ಎಐಸಿಸಿ ಒಂದೇ ಕಾರಣವನ್ನೂ ನೀಡಿ, ಯುವ ಕಾಂಗ್ರೆಸ್ ಘಟಕದ ಫಲಿತಾಂಶವನ್ನು ಪ್ರಕಟಿಸಿದೆ.

Comments are closed.