KPSC Exams : ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ರದ್ದು! ಪೇಚಿಗೆ ಸಿಲುಕಿದ ಸಾವಿರಾರು ಅಭ್ಯರ್ಥಿಗಳು

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು (KPSE) ಸಹಾಯಕರು/ಪ್ರಥಮ ದರ್ಜೆ ಸಹಾಯಕರ ನೇಮಕಾತಿಗೆ ನಡೆಸಿದ್ದ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ರದ್ದು ಗೊಳಿಸಲಾಗಿದೆ. ಕೆಪಿಎಸ್‌ಸಿ ಎಡವಟ್ಟು ನಿರ್ಧಾರದಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಪೇಚಿಗೆ ಸಿಲುಕಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗ 2020 ರ ಜನವರಿಯಲ್ಲಿ ಸಹಾಯಕರು ಹಾಗೂ ಪ್ರಥಮ ದರ್ಜೆ ಸಹಾಯಕರ ಒಟ್ಟು 1,140 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಗಡಿನಾಡಿನ ಹಾಗೂ ಹೊರ ರಾಜ್ಯದ ಅಭ್ಯರ್ಥಿಗಳು ಈ ವರ್ಷ ಜನವರಿ 23 ರಂದು ಕಡ್ಡಾಯ ಕನ್ನಡ ಪರೀಕ್ಷೆ ಬರೆದಿದ್ದರು. ಆದ್ರೀಗ ಕೆಪಿಎಸ್‌ಸಿ ಪರೀಕ್ಷೆ ಯನ್ನೇ ರದ್ದು ಮಾಡಿದೆ.

ಆದರೆ ಕೆಪಿಎಸ್‌ಇ ತಾಂತ್ರಿಕ ದೋಷದ ಕಾರಣವನ್ನು ನೀಡಿದೆ. ಪ್ರಶ್ನೆ ಸಹಿತ ಉತ್ತರ ಪತ್ರಿಕೆಯಲ್ಲಿ ಬಾರ್ ಕೋಡ್/ತಾಂತ್ರಿಕ ದೋಷ ಉಂಟಾಗಿರುವುದರಿಂದ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಪರೀಕ್ಷೆಯನ್ನು ರದ್ದುಪಡಿಸಲು ಜುಲೈ 6 ರಂದು ನಡೆದ ಸಭೆಯಲ್ಲಿ ತೀರ್ಮಾನಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಕೆಪಿಎಸ್‌ಸಿ ಕನ್ನಡ ಪರೀಕ್ಷೆ ರದ್ದು ಮಾಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳೀಗ ಗೊಂದಲಕ್ಕೆ ಸಿಲುಕಿದ್ದಾರೆ. ಈಗಾಗಲೇ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಯನ್ನು ಎದುರಿಸಬೇಕಾಗುತ್ತದೆ. ಹೊಸದಾಗಿ ಪರೀಕ್ಷೆಯನ್ನು ಬರೆದು ಅರ್ಹತೆಯನ್ನು ಪಡೆದ್ರೆ ಮಾತ್ರ ಮುಂದಿನ ಹಂತದ ಆಯ್ಕೆ ಪರಿಗಣಿಸಲಾಗುವುದು ಎಂದಿದೆ.

Comments are closed.