ಇಂಡಿಯಾ – ಕಿವಿಸ್ ಟೆಸ್ಟ್ ಸರಣಿ : ಆಟಗಾರರ ಕಳಪೆ ಪ್ರದರ್ಶನ, ಸೋಲಿನ ಸುಳಿಯಲ್ಲಿ ಭಾರತ

0

ಟ್ರೆಂಟ್ ಬೌಲ್ಟ್ : ನ್ಯೂಜಿಲೆಂಡ್ ವಿರುದ್ದ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಸೋತಿದ್ದ ಭಾರತ ಎರಡನೇ ಪಂದ್ಯದಲ್ಲಿಯೂ ಅದೇ ಹಾದಿ ಹಿಡಿದಿದೆ.

Ind 2
ಇಂಡಿಯಾ - ಕಿವಿಸ್ ಟೆಸ್ಟ್ ಸರಣಿ : ಆಟಗಾರರ ಕಳಪೆ ಪ್ರದರ್ಶನ, ಸೋಲಿನ ಸುಳಿಯಲ್ಲಿ ಭಾರತ 5

ದ್ವಿತೀಯ ಟೆಸ್ಟ್ ನಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದ್ದ ಭಾರತ ಎರಡೇ ಇನ್ಸಿಂಗ್ಸ್ ನಲ್ಲಿ ಕಳಪೆ ಆಟ ಪ್ರದರ್ಶಿಸಿದೆ. ಟ್ರೆಂಟ್ ಬೌಲ್ಟ್ ಮಾರಕ ದಾಳಿಗೆ ನಲುಗಿರುವ ಭಾರತ ಸೋಲಿನ ಸುಳಿಗೆ ಸಿಲುಕಿದೆ.

Rahane
ಇಂಡಿಯಾ - ಕಿವಿಸ್ ಟೆಸ್ಟ್ ಸರಣಿ : ಆಟಗಾರರ ಕಳಪೆ ಪ್ರದರ್ಶನ, ಸೋಲಿನ ಸುಳಿಯಲ್ಲಿ ಭಾರತ 6

ಮೊದಲ ಇನ್ನಿಂಗ್ಸ್ ನಲ್ಲಿ 7 ರನ್ ಮುನ್ನಡೆ ಪಡೆದಿದ್ದ ಭಾರತ ಎರಡನೇ ದಿನದಾಟ ಆರಂಭಿಸಿತ್ತು. ಆದರೆ ಭಾರತದ ಪರ ಆಟಗಾರರಾದ ಪ್ರಥ್ವಿಶಾ, ಮಾಯಂಕ್ ಅಗರ್ ವಾಲ್, ವಿರಾಟ್ ಕೊಯ್ಲಿ, ಅಜಿಂಕ್ಯಾ ರಹಾನೆ, ಉಮೇಶ್ ಯಾದವ್ ನಿರಾಸೆ ಅನುಭವಿಸಿದ್ರು.

Idn
ಇಂಡಿಯಾ - ಕಿವಿಸ್ ಟೆಸ್ಟ್ ಸರಣಿ : ಆಟಗಾರರ ಕಳಪೆ ಪ್ರದರ್ಶನ, ಸೋಲಿನ ಸುಳಿಯಲ್ಲಿ ಭಾರತ 7

ಚೇತೇಶ್ವರ ಪೂಜಾರ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಹನುಮ ವಿಹಾರಿ 5 ಮತ್ತು ರಿಷಬ್ ಪಂತ್ 1 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿದೆ.

Ind new
ಇಂಡಿಯಾ - ಕಿವಿಸ್ ಟೆಸ್ಟ್ ಸರಣಿ : ಆಟಗಾರರ ಕಳಪೆ ಪ್ರದರ್ಶನ, ಸೋಲಿನ ಸುಳಿಯಲ್ಲಿ ಭಾರತ 8

ಈ ಮೂಲಕ ಟೆಸ್ಟ್ ಸರಣಿಯಲ್ಲಿ ಭಾರತ 97 ರನ್ ಮುನ್ನಡೆಯಲ್ಲಿದೆ. ಟ್ರೆಂಟ್ ಬೋಲ್ಟ್ 12ರನ್ ನೀಡಿ 3 ವಿಕೆಟ್ ಪಡೆದ್ರೆ, ಗ್ರ್ಯಾಂಡ್ ಹೋಮ್, ನೈಲ್ ವಾಗ್ನರ್, ಟೀಮ್ ಸೌಥಿ ತಲಾ ಒಂದು ವಿಕೆಟ್ ಪಡೆದಿದ್ದಾರೆ.

Leave A Reply

Your email address will not be published.