ಸುದೀಪ್, ಕೊಹ್ಲಿ,ಗಂಗೂಲಿ ಸೇರಿ ಸೆಲಿಬ್ರೆಟಿಗಳಿಗೆ ಶಾಕ್…! ನೋಟಿಸ್ ಜಾರಿ ಮಾಡಿದ ಮದ್ರಾಸ್ ಹೈಕೋರ್ಟ್…!!

ಮದ್ರಾಸ್: ನಟ-ನಟಿಯರು ಸೆಲಿಬ್ರೆಟಿಗಳು ಸಾಮಾಜದ ಮುಖವಾಣಿ ಇದ್ದಂತೆ. ಆದರೆ ಅವರೇ ಜವಾಬ್ದಾರಿ ಮರೆತರೇ ಜನಸಾಮಾನ್ಯರು ಏನ ಮಾಡಬೇಕು? ಇಂತಹುದೇ ಸಾಮಾಜಿಕ ಜವಾಬ್ದಾರಿ ಮರೆತ ಜಾಹೀರಾತಿನ ಭಾಗವಾಗಿದ್ದಕ್ಕೆ ಮದ್ರಾಸ್ ಹೈಕೋರ್ಟ್  ಸೆಲಿಬ್ರೆಟಿಗಳಿಗೆ  ನೊಟೀಸ್ ಜಾರಿ ಮಾಡಿದ್ದು, ಖುದ್ದು ಹಾಜರಾತಿಗೆ ಸೂಚಿಸಿದೆ.

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ  ಸುದೀಪ್, ನಟರಾದ ರಾಣಾ ದಗ್ಗುಬಾಟಿ, ನಟಿ ತಮನ್ನಾ,ಬಹುಭಾಷಾ ನಟ ಪ್ರಕಾಶ ರೈ, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗೆ ಮದ್ರಾಸ್ ಹೈಕೋರ್ಟ್ ನೊಟೀಸ್  ಜಾರಿ ಮಾಡಿದೆ. ಅಷ್ಟೇ ಅಲ್ಲ, ನವೆಂಬರ್ 19 ರೊಳಗೆ ವಿವರಣೆಯೊಂದಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.

ಆನ್ಲೈನ್ ಜೂಜು ಅಥವಾ ಗ್ಲ್ಯಾಂಬ್ಲಿಂಗ್ ಗೆ ಪ್ರೋತ್ಸಾಹಿಸುವಂತ ಜಾಹೀರಾತುಗಳಲ್ಲಿ ಭಾಗವಹಿಸಿ ಸಮಾಜಕ್ಕೆ ಆನ್ಲೈನ್ ಜೂಜಿನ ಭಾಗವಾಗುವಂತೆ ಪ್ರೇರೆಪಣೆ ನೀಡಿದ ಆರೋಪದ ಮೇರೆಗೆ ಈ ಸೆಲಿಬ್ರೆಟಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲರಾದ ಸೂರ್ಯಪ್ರಕಾಶ್ ಎಂಬುವವರು ಜನರು ಹಣ ಕಳೆದುಕೊಳ್ಳಲು ಕಾರಣವಾಗುತ್ತಿರುವ ಹಾಗೂ ಜನರು ಆತ್ಮಹತ್ಯೆಗೆ ಶರಣಾಗುವಂತೆ ಮಾಡುತ್ತಿರುವ ಜಾಹೀರಾತಿನಲ್ಲಿ ನಟ-ನಟಿಯರು ಪಾಲ್ಗೊಳ್ಳುತ್ತಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸೆಲಿಬ್ರೆಟಿಗಳಿಗೆ ನೊಟೀಸ್ ಜಾರಿ ಮಾಡಿದೆ. ಅಲ್ಲದೇ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಆದೇಶಿಸಿದೆ. ಸೆಲಿಬ್ರೆಟಿಗಳು ಈ ರೀತಿಯ ಸಮಾಜದ ಬೆಳವಣಿಗೆಗೆ ಮಾರಕವಾದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಈ ಹಿಂದೆಯೂ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

Comments are closed.