ಮಲ್ಪೆ : ಮೀನುಗಾರಿಕೆಗೆ ನಡೆಸುತ್ತಿದ್ದ ವೇಳೆ ದುರಂತ : ಬೋಟಿನಿಂದ ಬಿದ್ದು ಮೀನುಗಾರ ಸಾವು

ಉಡುಪಿ : ಆಳ ಸಮುದ್ರಕ್ಕೆ ಮೀನುಗಾರಿಕೆ ತೆರಳಿದ್ದ ವೇಳೆಯಲ್ಲಿ ಬೋಟಿನಿಂದ ಕಾಲು ಜಾರಿ ಕೆಳಗೆ ಬಿದ್ದು ಮೀನುಗಾರರೋರ್ವರು ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಮಲ್ಪೆಯ ಕಡಲತೀರದಿಂದ ಸುಮಾರು 13 ನಾಟಿಕಲ್ ಮೈಲಿ ದೂರದಲ್ಲಿ ನಡೆದಿದೆ.

ಮೀನುಗಾರ ಸುಧಾಕರ ವೆಂಕಣ್ಣ ಹೊಸಕಟ್ಟಿ (39 ವರ್ಷ) ಎಂಬವರೇ ಮೃತ ಮೀನುಗಾರರು. ಜನವರಿ 10ರಂದು ಸಂಜೆ 4 ಗಂಟೆಗೆ ಮಲ್ಪೆ ಬಂದರಿನಿಂದ ತ್ರಿಜಲ್ ಎಂಬ ಆಳಸಮುದ್ರ ಬೋಟಿನ ಮೂಲಕ ಮೀನುಗಾರಿಕೆಗೆ ತೆರಳಿದ್ದರು. ಸುಧಾಕರ ವೆಂಕಣ್ಣ ಹೊಸಕಟ್ಟಿ ಅವರ ಜೊತೆಗೆ ಉಮೇಶ್, ರಾಮ, ಶರತ್ ಹಾಗೂ ಚುಡಾಮಣಿ ಅವರು ತೆರಳಿದ್ದಾರೆ.

ಮಲ್ಪೆ ಬಂದರಿನಿಂದ ಸುಮಾರು 13 ನಾಟಿಕಲ್ ಮೈಲ್ ದೂರದಲ್ಲಿ ಜನವರಿ 13ರಂದು ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಮೀನುಗಾರಿಕೆ ನಡೆಸುತ್ತಿದ್ದ ವೇಳೆಯಲ್ಲಿ ಜನವರಿ 13ರಂದು ಮಧ್ಯರಾತ್ರಿ 1ಗಂಟೆಯ ಸುಮಾರಿಗೆ 13 ನಾಟಿಕಲ್ ಮೈಲು ದೂರದಲ್ಲಿರುವ ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದರು. ಈ ವೇಳೆಯಲ್ಲಿ ಸುಧಾಕರ ವೆಂಕಣ್ಣ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ. ಈ ವೇಳೆಯಲ್ಲಿ ಜೊತೆಗಿದ್ದ ಮೀನುಗಾರರು ಅವರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಸುಧಾಕರ ವೆಂಕಣ್ಣ ನಾಪತ್ತೆಯಾಗಿದ್ದರು.

https://kannada.newsnext.live/7minutes-of-tearing-cake-came-to-kundapur-7th-heaven/

ಸುಮಾರು ಒಂದೂವರೆ ದಿನಗಳ ಕಾಲ ತ್ರಿಜಲ್ ಬೋಟಿನಲ್ಲಿದ್ದ ಮೀನುಗಾರರು ಇತರ ಬೋಟುಗಳ ಸಹಾಯದೊಂದಿಗೆ ಹುಡುಕಾಟ ನಡೆಸಿದ್ದಾರೆ. ಆದರೆ ಜನವರಿ 15ರಂದು ಮಧ್ಯಾಹ್ನದ ವೇಳೆಗೆ ಸುಮಾರು 10 ನಾಟಿಕಲ್ ಮೈಲ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಮಲ್ಪೆ ಠಾಣೆಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.