ನಕಲಿ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂ. ವಂಚನೆ: ಚಿನ್ನ ಪರೀಕ್ಷಿಸದೆ ಸಾಲ ಕೊಟ್ಟ ಹಣಕಾಸು ಸಂಸ್ಥೆಗಳು ..!

ಉಪ್ಪಿನಂಗಡಿ : ಶ್ರೀಮಂತ ಗ್ರಾಹಕರ ಸೋಗಿನಲ್ಲಿ ಖತರ್ ನಾಕ್ ಆಸಾಮಿಯೋರ್ವ ನಕಲಿ ಚಿನ್ನಾಭರಣವನ್ನು ಅಡವಿಟ್ಟು ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ.

b

ಕೇರಳ ನೋಂದಣಿಯ ಕಾರಿನಲ್ಲಿ ಸಹಕಾರಿ ಸೊಸೈಟಿಗಳಿಗೆ ಎಂಟ್ರಿ ಕೊಡ್ತಿದ್ದ ಆಸಾಮಿ ತಾನು ತುಂಬಾ ಗಡಿಬಿಡಿಯಲ್ಲಿದ್ದೇನೆ. ನನ್ನ ಬಳಿಯಲ್ಲಿದ್ದ ಚಿನ್ನವನ್ನು ಇಟ್ಟುಕೊಂಡು ಸಾಲ ಕೊಡುವಂತೆ ತಿಳಿಸುತ್ತಿದ್ದ. ಹಣಕಾಸು ಸಂಸ್ಥೆಯ ಸಿಬ್ಬಂದಿಗಳು ಚಿನ್ನವನ್ನು ಪರೀಕ್ಷಿಸದಯೇ ಲಕ್ಷಾಂತರ ರೂಪಾಯಿ ಸಾಲವನ್ನು ಕೊಟ್ಟು ಕಳುಹಿಸುತ್ತಿದ್ದವು. ನಂತರ ಚಿನ್ನ ಪರೀಕ್ಷಕರು ಬಂದು ಪರೀಕ್ಷೆ ನಡೆಸಿದಾಗ ಅದು ಅಸಲಿ ಅಲ್ಲಾ ನಕಲಿ ಅನ್ನೋದು ಬಯಲಾಗಿದೆ.

b

ಸೋಮವಾರ ಒಂದೇ ದಿನ ಉಪ್ಪಿನಂಗಡಿ ಸುತ್ತಮುತ್ತಲಿನ ಸುಮಾರು 4 ಹಣಕಾಸು ಸಂಸ್ಥೆಗಳಿಗೆ ಈತನ ನಕಲಿ ಚಿನ್ನವನ್ನ ಅಡವಿಟ್ಟು ವಂಚನೆ ನಡೆಸಿರೋದು ಬೆಳಕಿಗೆ ಬಂದಿದೆ. ಆಸಾಮಿ ಹೊಸದಾಗಿ ಆರಂಭವಾಗಿದ್ದ ಸೊಸೈಟಿಗೆ ನಕಲಿ ಚಿನ್ನವಿಟ್ಟು ಸಾಲ ಪಡೆಯಲು ಹೋದಾಗ ನಕಲಿ ಸಾಲದಾಟ ಬೆಳಕಿಗೆ ಬಂದಿದೆ. ಆದರೆ ಆರೋಪಿ ಮಾತ್ರ ಪರಾರಿಯಾಗಿದ್ದಾನೆ.

ಇದೀಗ ನಕಲಿ ಚಿನ್ನ ಅಡವಿಟ್ಟುಕೊಂಡು ಸಾಲಕೊಟ್ಟ ಹಣಕಾಸು ಸಂಸ್ಥೆಗಳು ಉಪ್ಪಿನಂಗಡಿ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಉಪ್ಪಿನಂಗಡಿ ಠಾಣೆಯ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

Comments are closed.