‘ನೀ ತಾಂಟ್ರೆ ಬಾ ತಾಂಟ್’ಟ್ರೋಲ್ : ಕಾನೂನು ಕ್ರಮಕ್ಕೆ ಮುಂದಾದ ಖಾಕಿ ಪಡೆ

ಮಂಗಳೂರು : ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನೀ ತಾಂಟ್ರೆ ಬಾ ತಾಂಟ್ ಹೆಸರಲ್ಲಿ ಸಾಕಷ್ಟು ಟ್ರೋಲ್ ನಡೆಯುತ್ತಿದೆ. ಆದ್ರೆ ಇದೀಗ ಟ್ರೋಲ್ ಮೂಲಕ ಗುಂಪು ಘರ್ಷಣೆಗೆ ಹುನ್ನಾರ ನಡೆಸುತ್ತಿರುವವರ ವಿರುದ್ಗ ಮಂಗಳೂರು ನಗರ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

‘ನೀ ತಾಂಟ್ರೆ ಬಾ ತಾಂಟ್’ ಟ್ರೋಲ್ ಹೆಸರಿನಲ್ಲಿ ಗುಂಪು ಘರ್ಷಣೆ ನಡೆಸಲು ಹುನ್ನಾರ ನಡೆಯುತ್ತಿದೆ ಅನ್ನೋ ಮಾಹಿತಿಯ ಹಿನ್ನೆಲೆಯಲ್ಲಿ ಅಂತಹ ಯೂಟ್ಯೂಬ್ ಖಾತೆ ಹಾಗೂ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ನೀ ತಾಂಟ್ರೆ ಬಾ ತಾಂಟ್’ ಟ್ರೋಲ್ ವಿಡಿಯೋವನ್ನು ಎಡಿಟ್ ಮಾಡಿ ಅಥವಾ ಹೊಸದಾಗಿ ಚಿತ್ರಣವನ್ನು ಮಾಡಿ ಯೂಟ್ಯೂಬ್ ನಲ್ಲಿ ಹರಿಯಬಿಟ್ಟಿರುವುದು ಪತ್ತೆಯಾಗಿದೆ. ಅಲ್ಲದೇ ನಕಲಿ ಖಾತೆಗಳ ಮುಲಕ ಗುಂಪು ಘರ್ಷಣೆಗೆ ಹುನ್ನಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಕಲಿ ಖಾತೆ ಹಾಗೂ ಪುಟ ನಿರ್ವಹಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಸುವ್ಯವಸ್ಥೆ ಹದಗೆಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

Comments are closed.