ಮಂಗಳೂರು : ತಾಂಟ್ರೆ ಬಾ ತಾಂಟು.. ಸದ್ಯ ಕರಾವಳಿ ಭಾಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಡೈಲಾಗ್. ಈ ಡೈಲಾಗ್ ಇದೀಗ ಯಕ್ಷಗಾನದಲ್ಲಿಯೂ ಕೇಳಿಬಂದಿದ್ದು, ವಿಡಿಯೋ ಭಾರೀ ವೈರಲ್ ಆಗಿದೆ.

ಎಸ್ ಡಿಪಿಐ ಮುಖಂಡರೋರ್ವರು ತಾಂಟ್ರೆ ಬಾ ತಾಂಟ್ ಅಂತಾ ಭಾಷಣದಲ್ಲಿ ಹೇಳಿದ್ದ ತುಳು ಡೈಲಾಗ್ ಸಾಕಷ್ಟು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಬಪ್ಪನಾಡು ಮೇಳದ ಯಕ್ಷಗಾನದ ಪ್ರದರ್ಶನವೊಂದರಲ್ಲಿ ಕಲಾವಿದರೋರ್ವರು ಇದೇ ಡೈಲಾಗ್ ಪುನರುಚ್ಚರಿಸಿದ್ದಾರೆ. ಪ್ರೇಕ್ಷಕರೋರ್ವರು ಈ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ತಾಂಟ್ರೆ ಬಾ ತಾಂಟ್ ಯಕ್ಷಗಾನದ ವಿಡಿಯೋ ವೈರಲ್ ಆಗಿದೆ.
