ಹುಣಸೋಡು ಸ್ಪೋಟ ಪ್ರಕರಣ : ಅಂತರಗಂಗೆಯಿಂದ ಸಪ್ಲೈ ಆಗಿತ್ತು ಜಿಲೆಟಿನ್, ಡೈನಮೇಟ್ …!

ಶಿವಮೊಗ್ಗ : ಹುಣಸೋಡು ಸ್ಪೋಟ ಪ್ರಕರಣ ನಡೆದು ಒಂದು ದಿನ ಕಳೆದರೂ ಕೂಡ ಸಾವಿನ್ನಪ್ಪಿದವರ ನಿಖರ ಸಂಖ್ಯೆ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ. ಈ ನಡುವಲ್ಲೇ ಸ್ಪೋಟಕ್ಕೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಅಂತರಗಂಗೆಯಿಂದ ಸ್ಪೋಟಕ ಸಾಗಾಟ ಮಾಡಲಾಗಿತ್ತು ಅನ್ನೋ ಮಾಹಿತಿ ಲಭ್ಯವಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹುಣಸೋಡು ಸುತ್ತಮುತ್ತಿನ ಪ್ರದೇಶದಲ್ಲಿ ಬರೋಬ್ಬರಿ 50ಕ್ಕೂ ಅಧಿಕ ಕ್ರಷರ್ ಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಕ್ರಷರ್ ಗಳಿಗೆ ಅಂತರಗಂಗೆಯಿಂದಲೇ ಸ್ಪೋಟಕ ವಸ್ತುಗಳಾದ ಜಿಲೆಟಿನ್ ಹಾಗೂ ಡೈನಮೇಟ್ ಗಳನ್ನು ಸಪ್ಲೈ ಮಾಡಲಾಗುತ್ತಿದೆ. ಅಂತರಗಂಗೆಯ ಪ್ರಭಾವಿ ವ್ಯಕ್ತಿಯೋರ್ವ ತಮಿಳುನಾಡಿನಿಂದ ಸ್ಪೋಟಕಗಳನ್ನು ತಂದು ಮಾರಾಟ ಮಾಡುತ್ತಿದ್ದ ಅನ್ನೋದು ಬಯಲಾಗಿದೆ.

ಹುಣಸೋಡು ಸ್ಪೋಟ ಪ್ರಕರಣಕ್ಕೂ ಇದೇ ಅಂತರಗಂಗೆಯಿಂದಲೇ ಜಿಲೆಟಿನ್ ಹಾಗೂ ಡೈನಮೇಟ್ ಸಪ್ಲೈ ಮಾಡಲಾಗಿತ್ತು. ಮಹೇಂದ್ರ ಪಿಕ್ ಅಪ್ ವಾಹನದಲ್ಲಿ ಸ್ಪೋಟಕ ಸಾಗಾಟದ ವೇಳೆಯಲ್ಲಿ ಸ್ಪೋಟ ಸಂಭವಿಸಿ 5 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಸಾವನ್ನಪ್ಪಿರುವ ಮಂಜುನಾಥ್ ಹಾಗೂ ಪ್ರವೀಣ್ ಕೂಡ ಇದೇ ಅಂತರಗಂಗೆಯವರು. ತಮಿಳುನಾಡಿನಿಂದ ಭಾರೀ ಪ್ರಮಾಣದಲ್ಲಿ ರಾಜ್ಯದಲ್ಲಿ ಸ್ಪೋಟಕಗಳನ್ನು ತರಲಾಗುತ್ತಿದೆ ಅನ್ನೋದು ಬಯಲಾಗಿದೆ. ಈ ಹಿನ್ನೆಲೆಯಲ್ಲೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.