ಹಾಲು ತರಲು ಹೋಗಿದ್ದ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಗ್ವಾಲಿಯರ್ : ಹಾಲು ತರಲು ತೆರಳಿದ್ದ 9ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಮೂವರು ಸಾಮೂಹಿಕವಾಗಿ ಅತ್ಯಾಚಾರ ವೆಸಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

14 ವರ್ಷ ಪ್ರಾಯದ ಬಾಲಕಿ ರಾತ್ರಿ 8 ಗಂಟೆಯ ಸುಮಾರಿಗೆ ಅಂಗಡಿಯೊಂದಕ್ಕೆ ಹಾಲು ಖರೀದಿಸಲು ತೆರಳಿದ್ದಳು. ಹಾಲು ಖರೀದಿಸಿ ಮನೆಗೆ ವಾಪಾಸ್ ಮರಳುತ್ತಿದ್ದ ವೇಳೆಯಲ್ಲಿ ಬಾಲಕಿಯ ಸಂಬಂದಿ ಸೇರಿದಂತೆ ಮೂವರು ಬಾಲಕಿಯನ್ನು ಬಲವಂತವಾಗಿ ಉದ್ಯಾನವನಕ್ಕೆ ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ.

ಘಟನೆಯ ಕುರಿತು ಬಾಲಕಿ ತನ್ನ ಪೋಷಕರ ಜೊತೆಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆತ್ಮರಾಮ್ ಶರ್ಮಾ ತಿಳಿಸಿದ್ದಾರೆ. ಅತ್ಯಾಚಾರವೆಸಗಿದ ಕಾಮುಕರ ಪೈಕಿ ಓರ್ವ ಸಂಬಂಧಿಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Comments are closed.