ಟಾಲಿವುಡ್ ಗೆ ಸ್ಯಾಂಡಲ್ ವುಡ್ ಸುಂದರಿ…! ತೆಲುಗಿನಲ್ಲಿ ಅದೃಷ್ಟಪರೀಕ್ಷೆಗೆ ಮುಂದಾದ ಕಿಸ್ ಬೆಡಗಿ…!!

ಸ್ಯಾಂಡಲ್ ವುಡ್ ನಟಿಯರ ಅದೃಷ್ಟ ಖಲಾಯಿಸಿದಂತಿದೆ. ಮೊನ್ನೆ ಮೊನ್ನೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ಹಾರಿದ ಬೆನ್ನಲ್ಲೇ ಈಗ ಕಿಸ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ನಟಿ ಶ್ರೀಲೀಲಾ ಈಗ ಟಾಲಿವುಡ್ ಅಂಗಳಕ್ಕೆ ಹಾರಿದ್ದಾರೆ.

ಪೆಳ್ಳಿಸಂದದಿ ಸಿನಿಮಾಕ್ಕಾಗಿ ತೆಲುಗಿನ ಖ್ಯಾತ ನಟ ಶ್ರೀಕಾಂತ್ ಪುತ್ರನಿಗೆ ಶ್ರೀಲೀಲಾ ನಾಯಕಿಯಾಗಲಿದ್ದಾರೆ.

 ನಟ ಶ್ರೀಕಾಂತ್ ಪುತ್ರ ರೋಶನ್ ಈ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, 25 ವರ್ಷದ ಹಿಂದೆ ಪೆಳ್ಳಿ ಸಂದದಿ ಚಿತ್ರದಲ್ಲಿ ಶ್ರೀಕಾಂತ ಕೂಡ ನಟಿಸಿದ್ದರು.

ಆದರೆ ಈಗ ತಂದೆ ನಟಿಸಿದ ಪೆಳ್ಳಿಸಂದದಿ ಚಿತ್ರದ ಟೈಟಲ್ ನಲ್ಲೇ ವಿಭಿನ್ನ ಕತೆಯೊಂದಿಗೆ ಮಗನು ತೆರೆಗೆ ಬರಲಿದ್ದಾನೆ. ಈ  ಚಿತ್ರದ ಕತೆ ಕೇಳಿ ಇಂಪ್ರೆಸ್ ಆಗಿ ಶ್ರೀಲೀಲಾ ನಟಿಸಲು ಒಪ್ಪಿಕೊಂಡಿದ್ದಾರಂತೆ.

ಇತ್ತೀಚಗಷ್ಟೇ ಸಿನಿಮಾ ತಂಡವನ್ನು ಭೇಟಿ ಮಾಡಿದ ಶ್ರೀಲೀಲಾ ಶೂಟಿಂಗ್ ಗೆ ಸಿದ್ಧವಾಗಿದ್ದಾರೆ.

ಪೆಳ್ಳಿ ಸಂದದಿ ಗೌರಿ ನಿರ್ದೇಶನದಲ್ಲಿ ಮೂಡಿ ಬರಲಿದ್ದು, ಎಂಎಂಕೀರವಾಣಿ ಸಂಗೀತ ನೀಡಿದ್ದಾರೆ. ಇದೇ ತಿಂಗಳು ಶೂಟಿಂಗ್ ಆರಂಭಿಸಲಿರುವ ಚಿತ್ರತಂಡಕ್ಕೆ ಶ್ರೀಲೀಲಾ ಜೊತೆಯಾಗಲಿದ್ದು, ದುಬಾರಿಗೂ ಮುನ್ನ  ಈ ಶೂಟಿಂಗ್ ಮುಗಿಸಿ ಮರಳುವ ಲೆಕ್ಕಾಚಾರದಲ್ಲಿದ್ದಾರೆ.

ಕನ್ನಡದಲ್ಲಿ ಧ್ವನೀರ್ ಜೊತೆ ಬೈಟ್ ಟೂ ಲವ್ ನಲ್ಲಿ ಬ್ಯುಸಿಯಾಗಿರುವ ಶ್ರೀಲೀಲಾಗೆ ಒಂದು ಸಿನಿಮಾ ಮುಗಿಸೋ ಹೊತ್ತಿಗೆ ಮತ್ತೊಂದು ಸಿನಿಮಾ ಸಿದ್ಧವಾಗುತ್ತಿದ್ದು, ಸಖತ್ ಬ್ಯುಸಿಯಾಗಿದ್ದಾರೆ.

Comments are closed.