ಸೋಮವಾರ, ಜೂನ್ 16, 2025
HomeBreakingವಿದೇಶಿ ಉದ್ಯೋಗ ಬಿಟ್ಟು ಬೇಕರಿ ಉದ್ಯಮಕ್ಕಿಳಿದ ಪದವೀಧರರು..! ಕುಂದಾಪುರದಲ್ಲಿಂದು 7th ಹೆವೆನ್ ಶುಭಾರಂಭ

ವಿದೇಶಿ ಉದ್ಯೋಗ ಬಿಟ್ಟು ಬೇಕರಿ ಉದ್ಯಮಕ್ಕಿಳಿದ ಪದವೀಧರರು..! ಕುಂದಾಪುರದಲ್ಲಿಂದು 7th ಹೆವೆನ್ ಶುಭಾರಂಭ

- Advertisement -

ಕುಂದಾಪುರ : ಕೇವಲ 7 ನಿಮಿಷಗಳಲ್ಲಿ ನಿಮ್ಮಿಷ್ಟದ ಕೇಕ್ ಗಳನ್ನ ನಿಮ್ಮ ಕಣ್ಣೆದುರಲ್ಲೇ ಸಿದ್ದಪಡಿಸಿಕೊಡುವ 7th ಹೆವೆನ್ ಇನ್ಮುಂದೆ ಕುಂದಾಪುರದಲ್ಲಿ ಲಭ್ಯವಾಗಲಿದೆ. ಅಂತರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರುವ 7th Heaven ವಿಶ್ವದ ಹಲವು ರಾಷ್ಟ್ರಗಳಲ್ಲಿ ತನ್ನ ರುಚಿಯಿಂದಲೇ ಮನೆ ಮಾತಾಗಿದೆ.

ಕುಂದಾಪುರದ ಹೊಸ ಬಸ್ ನಿಲ್ದಾಣದ ಬಳಿಯ ಅನಂತ ಪದ್ಮನಾಭ ಚೇಂಬರ್ಸ್ ನಲ್ಲಿ 7th Heaven ಗ್ರಾಹಕರ ಸೇವೆಗೆ ಸಜ್ಜುಗೊಂಡಿದೆ. ಪ್ರತಿನಿತ್ಯವೂ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೂ 7th Heaven ಕೇಕ್ ಶೋರೂಂ ಕಾರ್ಯ ನಿರ್ವಹಿಸಲಿದ್ದು, ಗ್ರಾಹಕರ ಸೇವೆಗೆ ಲಭ್ಯವಿರಲಿದೆ. ಇಂದು ಸಂಜೆ 4 ಗಂಟೆಗೆ 7th Heaven ಕುಂದಾಪುರ ಶಾಖೆ ಉದ್ಘಾಟನೆ ಗೊಳ್ಳಲಿದೆ.

ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಹಲವು ಬಗೆಯ ಕೇಕ್ ಗಳನ್ನು ಕೇವಲ 7 ನಿಮಿಷ ಅವಧಿಯಲ್ಲಿ ತಯಾರಿಸಿ ನೀಡಲಾಗು ತ್ತಿದೆ. ಅದೂ ಗ್ರಾಹಕರ ಕಣ್ಣೇದುರಲ್ಲೇ ಸಿದ್ದವಾಗುತ್ತಿದೆ. Cakes, Dessert, Mug cakes, Chocolates, Macarons ಸೇರಿದಂತೆ ಹಲವು ವಿನ್ಯಾಸದ ಕೇಕ್ ಗಳನ್ನು 7th Heaven ಸಿದ್ದಪಡಿಸುತ್ತಿದೆ.

ಉಡುಪಿ ಜಿಲ್ಲೆಯ ಶಿರ್ವದವರಾಗಿರುವ ರೋನಾಲ್ಡ್ ರೈಮಂಡ್ ಫೆರ್ನಾಂಡಿಸ್ ಅವರು ಹೋಟೆಲ್ ಮ್ಯಾನೆಜ್ಮೆಂಟ್ ಪದವೀಧರರು. ದುಬೈನಲ್ಲಿ ಹೋಟೆಲ್ ವೊಂದರಲ್ಲಿ ಉದ್ಯೋಗದಲ್ಲಿದ್ದರು. ನಂತರದಲ್ಲಿ ಎತಿಸಲಾದ್ ನಲ್ಲಿ ಮ್ಯಾನೇಜರ್ ಆಗಿದ್ದ ಕೆಲಸ ಮಾಡಿದ ಅನುಭವವನ್ನು ಹೊಂದಿರುವ ರೋನಾಲ್ಡ್ ರೈಮಂಡ್ ಫೆರ್ನಾಂಡೀಸ್ ಅವರು 7th Heaven ಮೂಲಕ ಇದೀಗ ತಮ್ಮೂರಿನಲ್ಲಿಯೇ ಹೊಸ ಉದ್ಯಮವನ್ನು ಆರಂಭಿಸುತ್ತಿದ್ದಾರೆ.

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು ಮೂಲದ ಶೇಕ್ ರಿಮಾಜ್ ಅಹಮದ್ ಅವರು ಕೂಡ ಪಾಲುದಾರರಾಗಿ ಗುರುತಿಸಿಕೊಂಡಿದ್ದಾರೆ. ಹಲವು ವರ್ಷಗಳ ಕಾಲ ವಿದೇಶದಲ್ಲಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದು, ಇದೀಗ ಅಂತರಾಷ್ಟ್ರೀಯ ಬ್ರ್ಯಾಂಡ್ ನೊಂದಿಗೆ ತಮ್ಮ ವ್ಯವಹಾರವನ್ನು ಮುಂದುವರಿಸಿದ್ದಾರೆ.

ವೇಗವಾಗಿ ಬೆಳೆಯುತ್ತಿರುವ ಕುಂದಾಪುರದಲ್ಲಿ ಹೊಸ ಉದ್ಯಮಗಳು ಆರಂಭಗೊಳ್ಳುತ್ತಿವೆ. ಇದೀಗ 7th Heaven ಕುಂದಾಪುರದ ಜನರಿಗೆ ಹೊಸ ರುಚಿಯನ್ನು ಉಣಬಡಿಸಲಿದೆ. ಅಂತರಾಷ್ಟ್ರೀಯ ಗುಣಮಟ್ಟದ ಕೇಕ್ ಗಳು ಅತೀ ಕಡಿಮೆ ದರದಲ್ಲಿ ಲಭ್ಯವಾಗುತ್ತಿದೆ. ಅಲ್ಲದೇ ಉದ್ಘಾಟನೆಯ ಆಫರ್ ಆಗಿ ಒಂದು ಕೇಕ್ ಕೊಂಡಲ್ಲಿ ಮತ್ತೊಂದು ಕೇಕ್ ನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಆಫರ್ ಮೂರು ದಿನಗಳ ವರೆಗೆ ಚಾಲ್ತಿಯಲ್ಲಿರಲಿದೆ. ಹೆಚ್ಚಿನ ಮಾಹಿತಿ ಸಂಪರ್ಕಿಸಿ : 8217404768

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular