ಪ್ರೇಯಸಿಯ ಕೊಂದು ಅಪಾರ್ಮೆಂಟ್ ಗೋಡೆಯಲ್ಲಿ ಶವವನ್ನು ಬಚ್ಚಿಟ್ಟ ಕಿರಾತಕ..!

ಮುಂಬೈ : ಮದುವೆಯಾಗು ಎಂದು ಕೇಳಿದ ತಪ್ಪಿಗೆ ಪ್ರಿಯಕರನೋರ್ವ ತನ್ನ ಪ್ರೇಯಸಿಯನ್ನು ಕೊಲೆಗೈದು ತನ್ನ ಪ್ಲ್ಯಾಟಿನ ಗೋಡೆಯಲ್ಲಿ ಮೃತದೇಹವನ್ನು ಬಚ್ಚಿಟ್ಟ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿ ಕಳೆದೈದು ವರ್ಷಗಳಿಂದಲೂ 32 ವರ್ಷದ ಮಹಿಳೆಯ ಜೊತೆಯಲ್ಲಿ ಸಂಬಂಧವನ್ನು ಹೊಂದಿದ್ದ. ಮಹಿಳೆ ಆಗಾಗ ಆರೋಪಿಯ ಜೊತೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಳು. ಆದರೆ ಅಕ್ಟೋಬರ್ 21ರ ನಂತರ ಮಹಿಳೆ ನಾಪತ್ತೆಯಾಗಿದ್ದಾಳೆ. ಈ ಕುರಿತು ಮಹಿಳೆಯ ಮನೆಯವರು ಆರೋಪಿಯ ಬಳಿಯಲ್ಲಿ ಕೇಳಿದ್ರೆ ಗುಜರಾತ್ ಗೆ ಹೋಗಿದ್ದಾಳೆ ಅಂತಾ ಸುಳ್ಳು ಹೇಳಿದ್ದಾನೆ.
ಆದರೆ ಅಕ್ಟೋಬರ್ 21ರ ನಂತರ ಮಹಿಳೆಯ ಪೋನ್ ಕೂಡ ಸ್ವಿಚ್ ಆಫ್ ಆಗಿದ್ದು, ಮಹಿಳೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಈ ಕುರಿತು ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಕೊನೆಯ ಬಾರಿಗೆ ಮಹಿಳೆ ಆರೋಪಿಯ ಜೊತೆಯಲ್ಲಿ ಕಾಣಿಸಿಕೊಂಡಿರುವ ಕುರಿತು ತಿಳಿಸಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಗಿಳಿಯುತ್ತಿದ್ದಂತೆಯೇ ಶಾಕ್ ಎದುರಾಗಿತ್ತು. ಆರೋಪಿಯನ್ನು ತಾನು ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ಮಹಿಳೆಯ ಶವವನ್ನು ತನ್ನ ಪ್ಲ್ಯಾಟ್ ನ ಗೋಡೆಯಲ್ಲಿ ಹೂತಿಟ್ಟಿರುವುದಾಗಿಯೂ ಹೇಳಿಕೆ ನೀಡಿದ್ದಾನೆ.

ಪೊಲೀಸರು ಪ್ಲ್ಯಾಟ್ ಗೆ ಬಂದು ಪರಿಶೀಲನೆ ನಡೆಸಿದಾಗ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ. ಮಹಿಳೆ ತನ್ನನ್ನು ಮದುವೆಯಾಗು ವಂತೆ ಪದೇ ಪದೇ ಪೀಡಿಸುತ್ತಿದ್ದಳು. ಇದೇ ಕಾರಣಕ್ಕಾಗಿಯೇ ತಾನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪಾಲ್ಘಾರ್ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.ದ

Comments are closed.