ಲಾಕ್ ಡೌನ್ ಎಫೆಕ್ಟ್ : ದೇಶದಲ್ಲಿ ಮೇ ಅಂತ್ಯಕ್ಕೆ ನಾಪತ್ತೆಯಾಗುತ್ತೆ 4 ಕೋಟಿ ಮೊಬೈಲ್ !

0

ನವದೆಹಲಿ: ದೇಶದಾದ್ಯಂತ ಎರಡನೇ ಹಂತದ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಮೇ 3ಕ್ಕೆ ಲಾಕ್ ಡೌನ್ ಮುಗಿಯುತ್ತೆ ಅಂತಾ ಜನರು ಕಾಯುತ್ತಿದ್ದಾರೆ. ಆದ್ರೆ ಲಾಕ್ ಡೌನ್ ಮುಗಿಯೋದು ಅನುಮಾನ. ಒಂದೊಮ್ಮೆ ಲಾಕ್ ಡೌನ್ ಆದೇಶ ಮುಂದುವರಿದ್ರೆ ಮೇ ಅಂತ್ಯದ ವೇಳೆಗೆ ಭಾರತದ 4 ಕೋಟಿ ಜನರ ಕೈಯಲ್ಲಿ ಮೊಬೈಲ್ ಮಾಯವಾಗುತ್ತೆ.

ಕೊರೊನಾ ಲಾಕ್ ಡೌನ್ ಗೂ ಮೊಬೈಲ್ ಮಾಯವಾಗೋದಕ್ಕೂ ಏನು ಸಂಬಂಧ ಅಂತಾ ಆಶ್ಚರ್ಯಪಡಬೇಡಿ. ಯಾಕೆಂದ್ರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಾರಿಯಾಗಿರುವ ಲಾಕ್ ಡೌನ್ ಆದೇಶ ಮೊಬೈಲ್ ಕ್ಷೇತ್ರದ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ.

ಲಾಕ್ ಡೌನ್ ಆದೇಶ ಜಾರಿಯಾಗಿ ತಿಂಗಳು ಕಳೆದಿದೆ. ಈ ಸಂದರ್ಭದಲ್ಲಿ ಮೊಬೈಲ್ ಗಳು ಹಾಳಾಗಿದ್ದು, ನಾನಾ ಕಾರಣಗಳಿಂದಾಗಿ ಮುರಿದು ಹೋಗಿವೆ.

ಈಗಾಗಲೇ 2.5 ಕೋಟಿ ಗ್ರಾಹಕರ ಕೈಯಲ್ಲಿ ಮೊಬೈಲ್ ಇಲ್ಲದಂತಾಗಿದೆ. ಜೊತೆಗೆ ಮೊಬೈಲ್ ದುರಸ್ಥಿ ಮಾಡಲು ಅಗತ್ಯವಿರುವ ಕಾಂಪೋನೆಂಟ್ ಗಳು ಲಭ್ಯವಾಗುತ್ತಿಲ್ಲ. ಲಾಕ್ ಡೌನ್ ಆದೇಶದಿಂದ ಹೊಸ ಮೊಬೈಲ್ ಖರೀದಿಸಲು ಸಾಧ್ಯವಾಗುತ್ತಿಲ್ಲ.

ಹೀಗಾಗಿಯೇ ಲಾಕ್ ಡೌನ್ ಆದೇಶ ಮೇ 3ಕ್ಕೆ ಮುಕ್ತಾಯಗೊಳ್ಳದೇ ಇದ್ದಲ್ಲಿ ಮೇ ತಿಂಗಳಾಂತ್ಯಕ್ಕೆ ಮೊಬೈಲ್ ಇಲ್ಲದವರ ಸಂಖ್ಯೆ 4 ಕೋಟಿ ತಲುಪಲಿದೆ ಎಂದು ಇಂಡಿಯಾ ಸೆಲ್ಯುಲರ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ಐಸಿಇಎ) ಹೇಳಿದೆ.

ಭಾರತದಲ್ಲಿ ಪ್ರತಿಷ್ಠಿತ ಕಂಪೆನಿಗಳು ಪ್ರತೀ ತಿಂಗಳು ಸುಮಾರು 2.5 ಕೋಟಿಯಷ್ಟು ಮೊಬೈಲ್ ಮಾರಾಟ ಮಾಡುತ್ತಿದ್ದವು. ಮೊಬೈಲ್ ಹಳೆಯದಾಯಿತು ಅಥವಾ ಮೊಬೈಲ್ ಹಾಳಾಗಿದೆ ಅನ್ನೋ ಕಾರಣಕ್ಕಾಗಿಯೇ ಜನರು ಮೊಬೈಲ್ ಖರೀದಿ ಮಾಡುತ್ತಿದ್ದರು. ಇದೀಗ ಲಾಕ್ ಡೌನ್ ಆದೇಶ ಸರಿ ಸುಮಾರು ಒಂದು ತಿಂಗಳು ಕಳೆದು ಹೋಗಿದೆ. ಇದೇ ಕಾರಣದಿಂದಾಗಿಯೇ ಐಸಿಎಇ ಅಂದಾಜು ಮಾಡಿದೆ.

Leave A Reply

Your email address will not be published.