ಜನವರಿ ತಿಂಗಳಲ್ಲಿ ಬಹುತೇಕರು ಹೊಸ ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಆಸೆ ಹೊಂದಿರುತ್ತಾರೆ. ಅದರಲ್ಲಿ ಮುಖ್ಯವಾದದ್ದು ಆರೋಗ್ಯಕರ ಲೈಫ್ ಸ್ಟೈಲ್ ಹೊಂದುವುದಾಗಿದೆ. ಈ ಕೊರೊನ ಬಂದ ಮೇಲಂತೂ ಬಹಳಷ್ಟು ಜನರು ಖಿನ್ನತೆಗೆ ಒಳಗಾಗಿದ್ದಾರೆ. ಇದರಿಂದ ಹೊರ ಬರಲು, ಉತ್ತಮ ಮುಂಜಾನೆಯ ಹವ್ಯಾಸ (Morning Habits) ಪ್ರಾರಂಭಿಸಬೇಕು. ಸಾಧ್ಯವಾದಷ್ಟು ಧನಾತ್ಮಕವಾಗಿ ಆಗಿ ದಿನವನ್ನು ಪ್ರಾರಂಭಿಸಿ. ಉತ್ತಮ ಸಂಗೀತ, ಆಹಾರವನ್ನು ದಿನಚರಿಯಲ್ಲಿ ಸೇರಿಸಿ. ಮಾನಸಿಕ ಆರೋಗ್ಯ ತಜ್ಞರ ಪ್ರಕಾರ ಈ 10 ಹವ್ಯಾಸಗಳನ್ನು ಬೆಳೆಸಿ, ಉತ್ತಮ ಲೈಫ್ ಸ್ಟೈಲ್ ಹೊಂದಬಹುದು.
- ನೀವು ಯಾವುದಕ್ಕೆ ಕೃತಜ್ಞರಾಗಿದ್ದೀರೋ ಅದರ ಕುರಿತು ಬರೆದಿಡಿ.
ಇದು ಯಾವುದರ ಬಗ್ಗೆಯೂ ಆಗಿರಬಹುದು. ಕೆಲವೊಮ್ಮೆ ನೀವು ಅನುಭವಿಸಿದ ಒಳ್ಳೆಯ ನಿದ್ರೆಗಾಗಿ, ನಿಮ್ಮಿಷ್ಟದ ಹಾಡು, ಉತ್ತಮ ವಾತಾವರಣ ಈಗಷ್ಟೇ ಓದಿದ ಪುಸ್ತಕಕ್ಕಾಗಿ ಕೃತಜ್ಞತೆ ಸಲ್ಲಿಸಿ.
ಹೀಗೆ ಬರೆದಿಡುವುದರಿಂದ ಮನಸ್ಸು ಖುಷಿಯಾಗುತ್ತದೆ. - ನೀರು ಕುಡಿಯಿರಿ
ಬೆಳಗ್ಗೆ ಎದ್ದ ತಕ್ಷಣ 1-2 ಗ್ಲಾಸ್ ನೀರು ಕುಡಿಯಿರಿ. ಮಲಗಿದಾಗ ದೇಹವು ಡಿ ಹೈಡ್ರೇಟ್ ಆಗಿರುತ್ತದೆ. ಇದು ಹಲವು ಸಮಸ್ಯೆಗಳಿಗೆ ಕಾರಣ ಆಗಬಹುದು. ಹಾಗಾಗಿ ಸಾಧ್ಯವಾದಷ್ಟು ನೀರು ಕುಡಿಯಿರಿ. ಇದು ದೇಹದಲ್ಲಿರುವ ಕೊಬ್ಬಿನ ಅಂಶ ಕಡಿಮೆ ಮಾಡಲು ಸಹಕಾರಿ. - ಧ್ಯಾನ ಮಾಡಿ.
ಮುಂಜಾನೆಯ 10 ನಿಮಿಷ ಧ್ಯಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇದು ಸ್ಟ್ರೆಸ್, ಡಿಪ್ರೆಷನ್ ಕಡಿಮೆ ಮಾಡಿ ಪಾಸಿಟಿವ್ ಆಗಿರುವಂತೆ ಮಾಡುತ್ತದೆ. - ಬೆಡ್ ಸರಿಯಾಗಿ ಜೋಡಿಸಿ
ಎದ್ದ ಕೂಡಲೇ ಮಲಗಿದಂತಹ ಬೆಡ್ ಜೋಡಿಸಿಡುವುದು, ಒಂದು ಉತ್ತಮ ಹವ್ಯಾಸ ಆಗಿದೆ. ಇದು ನಮ್ಮನ್ನು ಖುಷಿ ಹಾಗೂ ಪಾಸಿಟಿವ್ ಆಗಿರುವಂತೆ ಮಾಡುತ್ತದೆ. - ಬಿಸಿಲಿಗೆ ಮೈಯೊಡ್ಡಿ
ಬೆಳಗ್ಗೆ 10 ಗಂಟೆ ಮೊದಲಿನ ಬಿಸಿಲು ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಬಿಸಿಲಿಗೆ ವಾಕಿಂಗ್ ಮಾಡುವುದು ಒಳ್ಳೆಯದು. ಇದು ಪ್ರಕೃತಿ ದತ್ತವಾಗಿ ವಿಟಮಿನ್ ಡಿ ನೀಡುತ್ತದೆ. - ಸಣ್ಣ ಪುಟ್ಟ ವ್ಯಾಯಾಮ ಮಾಡಿ
ಸ್ಟ್ರೇಚಿಂಗ್ ನಂತಹ ಸಣ್ಣ ಸಣ್ಣ 10 ನಿಮಿಷಗಳ ವ್ಯಾಯಾಮ ಮಾಡಿ. ಇದು ಖಿನ್ನತೆ ಹಾಗೂ ಇತರ ಮಾನಸಿಕ ನೆಮ್ಮದಿಗೆ ಅತೀ ಒಳ್ಳೆಯದು. - ಸ್ಟ್ರೇಚಿಂಗ್
ಕೈ, ಕಾಲು, ಕುತ್ತಿಗೆ ಸ್ಟ್ರೆಚ್ ಮಾಡುವುದರಿಂದ ಕೆಲವು ನೋವುಗಳನ್ನು ಕಡಿಮೆ ಮಾಡಬಹುದು. - ವಾಕ್ ಮಾಡಿ
ಬೆಳಗಿನ ಉಪಹಾರದ ಮೊದಲು ವಾಕಿಂಗ್ ಮಾಡಿ. ಇದು ಹಸಿವನ್ನು ಹೆಚ್ಚಿಸುತ್ತದೆ. ಹಾಗೆಯೇ, ಮನಸ್ಸು ಉಲ್ಲಾಸದಿಂದ ಇರುವಂತೆ ಮಾಡುತ್ತದೆ. - ನಿಮ್ಮ ಇಷ್ಟದ ಕೆಲಸವನ್ನು ಮಾಡಿ
ಉತ್ತಮ ಹಾಡು, ಪಾಡ್ ಕಾಸ್ಟ್ ಕೇಳುವುದು, ಅಥವಾ ಯಾವುದಾದರೂ ಕಾರ್ಯಕ್ರಮ ನೋಡುವುದು, ಪುಸ್ತಕ ಓದುವುದು ಇಲ್ಲವೇ ಗಾರ್ಡನಿಂಗ್ ಹೀಗೆ ನೀವು ಇಷ್ಟಪಡುವ ಕೆಲಸ ಮಾಡಿ. - ಉತ್ತಮ ರೀತಿಯಲ್ಲಿ ಡ್ರೆಸ್ ಮಾಡಿ
ನಿಮಗೆ ಇಷ್ಟವಿರುವ ಹಾಗೂ ಕಂಫರ್ಟಬಲ್ ಅನಿಸುವ ಬಟ್ಟೆ ಧರಿಸಿ. ಇದು ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಇದನ್ನೂ ಓದಿ: Millets Health Benefits: ರಾಗಿ ತಿಂದವ ನಿರೋಗಿ; ಮಕ್ಕಳ ಬೆಳವಣಿಗೆಗೆ ರಾಗಿ ಹೆಚ್ಚು ಪ್ರಯೋಜನಕಾರಿ ಎಂದ ಅಧ್ಯಯನ
(Morning habits can lead your day recomonded by doctors)