ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ ಸಮಂತಾ ರುತ್ ಪ್ರಭು(Samantha Ruth Prabhu). ಅವರು ಇತ್ತೀಚೆಗೆ ಮಯೋಸಿಟಿಸ್ (Myositis) ಎಂಬ ಅಪರೂಪದ ವೈದ್ಯಕೀಯ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅವರು ಸಂಪೂರ್ಣ ಗುಣಮುಖರಾಗುವ ವಿಶ್ವಾಸವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ಆದರೆ ಈ ಅಪರೂಪದ ಮಯೋಸಿಟಿಸ್ (Myositis) ಕಾಯಿಲೆ ಅಂದರೇನು? ರೋಗ ಲಕ್ಷಣಗಳೇನು ಎಂದು ತಿಳಿದುಕೊಳ್ಳುವ ಅಗತ್ಯವಿದೆ. ಮಯೋಸಿಟಿಸ್ ಎನ್ನುವುದು ರೋಗನಿರೋಧಕ ವ್ಯವಸ್ಥೆಯು ನಿಮ್ಮ ಸ್ನಾಯುಗಳ ಮೇಲೆ ಪರಿಣಾಮ ಬೀರುವ ಸ್ಥಿತಿಯಾಗಿದೆ. ಈ ಕಾಯಿಲೆಯಲ್ಲಿ ವಿಧಗಳು ಇವೆ.
ಮಯೋಸಿಟಿಸ್ ಕಾಯಿಲೆ ಎಂದರೇನು :
ಇದೊಂದು ಅಪರೂಪದ ಕಾಯಿಲೆಯಾಗಿದೆ. ಮಯೋಸಿಟಿಸ್ ಎನ್ನುವುದು ನಿಮ್ಮ ರೋಗನಿರೋಧಕ ವ್ಯವಸ್ಥೆಯು ನಿಮ್ಮ ಸ್ನಾಯುಗಳ ಮೇಲೆ ಪರಿಣಾಮ ಬೀರುವ ಸ್ಥಿತಿಯಾಗಿದೆ. ಇದು ದೀರ್ಘಕಾಲದ ಉರಿಯೂತವನ್ನು ಉಂಟುಮಾಡುತ್ತದೆ. ಕಾಲಕ್ರಮೇಣ ಊತವನ್ನು ಉಂಟುಮಾಡುತ್ತದೆ ಈ ಉರಿಯೂತವು ಅಂತಿಮವಾಗಿ ಸ್ನಾಯುಗಳನ್ನು ಹೆಚ್ಚು ದುರ್ಬಲಗೊಳಿಸುತ್ತದೆ. ಮೈಯೋಸಿಟಿಸ್ ಒಂದು ರೀತಿಯ ಮಯೋಪತಿ. ಮಯೋಪತಿ ಎಂದರೆ ಮೂಳೆಗಳನ್ನು ಸಂಪರ್ಕಿಸುವ ಸ್ನಾಯುಗಳ ಮೇಲೆ ಪರಿಣಾಮ ಬೀರುವ ರೋಗಗಳನ್ನು ಸೂಚಿಸುವ ಸಾಮಾನ್ಯ ಪದವಾಗಿದೆ. ಈ ಕಾಯಿಲೆಯು ಸಾಮಾನ್ಯವಾಗಿ ತೋಳು ಮತ್ತು ಭುಜಗಳು, ಕಾಲುಗಳು, ಸೊಂಟ, ಹೊಟ್ಟೆ ಮತ್ತು ಬೆನ್ನುಮೂಳೆಯ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ.
ಕಾರಣಗಳು:
ಮಯೋಸಿಟಿಸ್ ಕಾಯಿಲೆಗೆ ನಿರ್ದಿಷ್ಟ ಕಾರಣವೇನು ಎಂದು ವಿಜ್ಞಾನಿಗಳು ಖಚಿತಪಡಿಸಿಲ್ಲ. ಆದರೆ ಇದು ಆನುವಂಶಿಕ ಮತ್ತು ಪರಿಸರ ಅಂಶಗಳು ಬರುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಅಂಶಗಳ ಯಾವುದೆಂದರೆ: ವೈರಸ್, ಬ್ಯಾಕ್ಟೀರಿಯಾ, ನೇರಳಾತೀತ (UV) ವಿಕಿರಣ, ಧೂಮಪಾನ, ಮನರಂಜನೆಗಾಗಿ ಬಳಸುವ ಔಷಧಗಳು, ಪೌಷ್ಟಿಕಾಂಶದ ಪೂರಕಗಳು, ಧೂಳು, ಅನಿಲ, ಅಥವಾ ಹೊಗೆ ಮುಂತಾದವುಗಳು.
ಮಯೋಸಿಟಿಸ್ ಕಾಯಿಲೆಯ ವಿಧಗಳು :
ಮಯೋಸಿಟಿಸ್ ಕಾಯಿಲೆಯಲ್ಲಿ 5 ವಿಧಗಳಿವೆ.
- ಡರ್ಮಟೊಮಿಯೊಸಿಟಿಸ್ : ಮುಖ, ಎದೆ, ಕುತ್ತಿಗೆ ಮತ್ತು ಬೆನ್ನಿನ ಮೇಲೆ ನೇರಳೆ-ಕೆಂಪು ದದ್ದುಗಳನ್ನು ಉಂಟುಮಾಡುತ್ತದೆ.
- ಇನ್ಕ್ಲೂಷನ್-ಬಾಡಿ ಮಯೋಸಿಟಿಸ್ (IBM) : ಇದು ಮಹಿಳೆಯರಿಗಿಂತ ಹೆಚ್ಚು ಪುರುಷರ ಮೇಲೆ ಪರಿಣಾಮ ಬೀರುತ್ತದೆ. 50 ವರ್ಷಕ್ಕಿಂತ ಮೇಲ್ಪಟ್ಟ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಮಸಲ್ ವೀಕ್‌ನೆಸ್, ಬಾಡಿ ಬ್ಯಾಲೆನ್ಸ್ ಪ್ರಾಬ್ಲಮ್, ಸ್ನಾಯು ಸೆಳೆತ ಇದರ ಲಕ್ಷಣವಾಗಿದೆ.
- ಜುವೆನೈಲ್ ಮಯೋಸಿಟಿಸ್ (ಜೆಎಂ) : ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎನ್ನುತ್ತಾರೆ. ಇದು ಹುಡುಗರಿಗಿಂತ ಹುಡುಗಿಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕೆಂಪು–ನೇರಳೆ ಗುಳ್ಳೆಗಳು, ಆಯಾಸ, ಹೊಟ್ಟೆ ನೋವು, ಸ್ನಾಯು ದೌರ್ಬಲ್ಯ ಮುಂತಾದವುಗಳು ಇದರ ಲಕ್ಷಣ.
- ಪಾಲಿಮೋಸಿಟಿಸ್: ಇದರಲ್ಲಿ ಪ್ರಾರಂಭದಲ್ಲಿಯೇ ಸ್ನಾಯು ದೌರ್ಬಲ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಈ ರೋಗವು ಮೊದಲು ಹೊಟ್ಟೆಗೆ ಹತ್ತಿರವಿರುವ ಸ್ನಾಯುಗಳ ಮೇಲೆ ದಾಳಿ ಮಾಡುತ್ತದೆ. ಸ್ನಾಯು ದೌರ್ಬಲ್ಯ ಮತ್ತು ನೋವು, ನುಂಗುವ ಸಮಸ್ಯೆಗಳು, ಬ್ಯಾಲೆನ್ಸ್ ನ ಸಮಸ್ಯೆಗಳು, ಒಣ ಕೆಮ್ಮು, ಕೈಗಳಲ್ಲಿ ದಪ್ಪನಾದ ಚರ್ಮ, ತೂಕ ಇಳಿಕೆ ಇದರ ಲಕ್ಷಣವಾಗಿದೆ.
- ಟಾಕ್ಸಿಕ್ ಮಯೋಪತಿ : ಇದನ್ನು ಟಾಕ್ಸಿಕ್ ಮಯೋಸಿಟಿಸ್ ಎಂದೂ ಕರೆಯುತ್ತಾರೆ. ಒಂದು ರೀತಿಯ ಮೈಯೋಸಿಟಿಸ್ ಕಾಯಿಲೆ ಆಗಿದೆ. ಇದು ಔಷಧಿಗಳು ಅಥವಾ ರಾಸಾಯನಿಕಗಳಿಂದ ಉಂಟಾಗುತ್ತದೆ ಎಂದು ಭಾವಿಸಲಾಗಿದೆ.
ಚಿಕಿತ್ಸೆ:
ಮಯೋಸಿಟಿಸ್‌ಗೆ ಯಾವುದೇ ಚಿಕಿತ್ಸೆ ಇಲ್ಲ. ದೈನಂದಿನ ಜೀವನದಲ್ಲಿ ರೋಗಲಕ್ಷಣಗಳಿಗನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಈ ಕಾಯಿಲೆ ಗುಣವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಾರೆ. ನೋವು ಮತ್ತು ಬಿಗಿತವನ್ನು ಕಡಿಮೆ ಮಾಡಲು ವೈದ್ಯರು ಸ್ಟ್ರೆಚ್‌ಗಳು ಮತ್ತು ವ್ಯಾಯಾಮಗಳನ್ನು ಸೂಚಿಸುತ್ತಾರೆ.
ಇದನ್ನು ಓದಿ : Google Play Store: ಪ್ಲೇ ಸ್ಟೋರ್‌ನಿಂದ 13 ಡೇಂಜರಸ್ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದ ಗೂಗಲ್
ಇದನ್ನು ಓದಿ : Gujarat Bridge Collapse: ಗುಜರಾತ್ ತೂಗು ಸೇತುವೆ ಕುಸಿತ ಪ್ರಕರಣ.. ಸಾವಿನ ಸಂಖ್ಯೆ 132ಕ್ಕೆ ಏರಿಕೆ
(Myositis what is the symptoms, causes and treatment of the disease)