Save Mysore ಕ್ಯಾಂಪೇನ್ ಗೆ ಕೈ ಜೋಡಿಸಿದ ಸಲಗ…! ಮರ ಕಡಿಯುವ ಆಭಿವೃದ್ಧಿ ಯೋಜನೆಗೆ ದುನಿಯಾ ವಿಜಯ್ ವಿರೋಧ…!!

ಸ್ಯಾಂಡಲ್ ವುಡ್ ನಟ-ನಟಿಯರು ಹಿಂದೆಂದಿಗಿಂತಲೂ ಹೆಚ್ಚು ಜನಪರವಾದ  ಹೋರಾಟಗಳಲ್ಲಿ ಪಾಲ್ಗೊಳ್ಳುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಮೊನ್ನೆ ಮೊನ್ನೆ ಕನ್ನಡ ಶಾಲೆ ಉಳಿವಿಗಾಗಿ ಪ್ರಣೀತಾ ಸುಭಾಶ್ ಹೋರಾಡಿದ್ರೇ ಈಗ ಮೈಸೂರಿನ ಲಲಿತ್ ಮಹಲ್ ಎದುರಿನ ಮರ ಕಡಿಯೋದಿಕ್ಕೆ ದುನಿಯಾ ವಿಜಯ್ ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಹೆಲಿ ಟೂರಿಸಂ ನಿರ್ಮಾಣಕ್ಕಾಗಿ ಲಲಿತ ಮಹಲ್ ಹೊಟೇಲ್ ಮುಂಭಾಗದ ಮರಗಳನ್ನು  ಕತ್ತರಿಸಲು ರಾಜ್ಯ ಸರ್ಕಾರ  ನಿರ್ಧರಿಸಿದೆ ಎನ್ನಲಾಗಿದೆ. ಈ ಯೋಜನೆಗೆ  ರಾಜ್ಯ ಸರ್ಕಾರ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಜನರು ಯೋಜನೆಗೆ ವಿರೋಧಿಸಿದ್ದು, ಸೇವ್ ಮೈಸೂರು ಅಭಿಯಾನ ಆರಂಭಿಸಿದ್ದಾರೆ.

ಸೇವ್ ಮೈಸೂರು ಅಭಿಯಾನಕ್ಕೆ  ಬೆಂಬಲ ಸೂಚಿಸಿರುವ ನಟ ದುನಿಯಾ ವಿಜಯ್ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ನಾವು ಮರಗಳನ್ನು ಬೆಳೆಸಲು ಸಾಧ್ಯವಾಗದಿದ್ದರೂ ಮರಗಳನ್ನು ಕಡಿಯಬಾರದು.  ಆ ಜಾಗ ಅಷ್ಟು ಸುಂದರವಾಗಿ ಇರೋದಿಕ್ಕೆ ಅಲ್ಲಿರೋ ಮರಗಳೇ ಕಾರಣ. ಮರಗಳನ್ನು ಕಡಿಯುವ ನಿರ್ಧಾರವನ್ನು ಇನ್ನೊಮ್ಮೆ ಪರಿಶೀಲಿಸಬೇಕು.

ಮರ ಕಡಿಯೋದನ್ನು ಬಿಟ್ಟು ಪರ್ಯಾಯವಾಗಿ ಹೆಲಿಟೂರಿಸಂ ಮಾಡೋ ಫ್ಲ್ಯಾನ್ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಸರ್ಕಾರದ ಯೋಜನೆಗೆ ನಮ್ಮ ಬೆಂಬಲ ಹೇಗಿರುತ್ತೋ ಅದೇ ರೀತಿ ಪರಿಸರ ವಿರೋಧಿ ಯೋಜನೆಗೆ ನಮ್ಮ ವಿರೋಧವಿರುತ್ತದೆ. ಸೇವ್ ಮೈಸೂರು ಕ್ಯಾಂಪೇನ್ ಗೆ ನನ್ನ ಬೆಂಬಲವಿದೆ ಎಂದಿದ್ದಾರೆ.

ಇತ್ತೀಚಿಗೆ ಈ ಮರ ಕಡಿಯುವ ಪ್ರಸ್ತಾಪಕ್ಕೆ ಸಂಸದ ಪ್ರತಾಪ್ ಸಿಂಹ ಕೂಡ ವಿರೋಧ ವ್ಯಕ್ತಪಡಿಸಿದ್ದು,  ಪಕ್ಕದ ಅರಮನೆಗೆ ಸೇರಿದ ಹೆಲಿಪ್ಯಾಡ್ ನ್ನು ಬಳಸಿಕೊಳ್ಳುವುದು ಉತ್ತಮ.

ಕೇವಲ ಹೆಲಿಟೂರಿಸಂಗಾಗಿ ಮರಕಡಿಯುವುದು ಬೇಡ ಎಂದಿದ್ದರು. ಈಗ ನಟ ದುನಿಯಾ ವಿಜಯ್ ಕೂಡ ಯೋಜನೆ ವಿರೋಧಿಸಿದ್ದಾರೆ.  

Comments are closed.