ಚುನಾವಣಾ ಪ್ರಚಾರ ಮುಕ್ತಾಯ ಬೆನ್ನಲ್ಲೇ ಕಠಿಣ ಮಾರ್ಗಸೂಚಿ ಪ್ರಕಟ : ಸರಕಾರದ ಕ್ರಮಕ್ಕೆ ಭಾರೀ ಆಕ್ರೋಶ

ಬೆಂಗಳೂರು : ರಾಜ್ಯದಲ್ಲಿ ಉಪ ಚುನಾವಣೆಯ ಪ್ರಚಾರ ಮುಗಿಯುವವರೆಗೂ ಸುಮ್ಮನಿದ್ದ ಸರಕಾರ ಇದೀಗ ಚುನಾವಣಾ ಪ್ರಚಾರ ಮುಗಿಯುತ್ತಿದ್ದಂತೆಯೇ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಮದುವೆ, ಅಂತ್ಯಕ್ರಿಯೆ ಸೇರಿದಂತೆ ಸಮಾರಂಭ, ಸಭೆ ಹಾಗೂ ಜನ‌ಸೇರುವ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿದೆ. ಧಾರ್ಮಿಕ ಆಚರಣೆಗಳನ್ನು ಸಂಪೂರ್ಣ ವಾಗಿ ನಿಷೇಧಿಸಲಾಗಿದ್ದು, ಆದೇಶ ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ಮತ್ತು 60 ಹಾಗೂ ಐಪಿಎಸ್ ಸೆಕ್ಷನ್ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಹೊರಡಿಸಿರುವ ಆದೇಶದ ಪ್ರಕಾರ, ತೆರೆದ ಪ್ರದೇಶದಲ್ಲಿ ನಡೆಯುವ ರಾಜಕೀಯ ಸಮಾರಂಭ ಗಳಲ್ಲಿ 200 ಮಂದಿಗೆ ಅನುಮತಿ ನೀಡಲಾಗಿದೆ. ಅಂತ್ಯಕ್ರಿಯೆ ಯಲ್ಲಿ 25 ಮಂದಿ ಹಾಗೂ ಇತರ ಸಮಾರಂಭಗಳು ತೆರೆದ ಪ್ರದೇಶದಲ್ಲಾದರೆ 50 ಮಂದಿ ಹಾಗೂ ಸಭಾಂಗಣ, ಹಾಲ್ ಸೇರಿ ಮುಚ್ಚಿದ ಪ್ರದೇಶದ ಲ್ಲಾದರೆ 25 ಮಂದಿ ಪಾಲ್ಗೊಳ್ಳಬಹುದಾಗಿ ದೆ. ಮದುವೆ ತೆರೆದ ಪ್ರದೇಶದಲ್ಲಿ ನಡೆಸುವುದಾದರೆ 200 ಮಂದಿ ಯನ್ನು ಸೇರಿಸಬಹುದು, ಮುಚ್ಚಿದ ಪ್ರದೇಶ ದಲ್ಲಿ 100 ಮಂದಿ ಸೇರಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ಆದರೆ ರಾಜ್ಯ ಸರಕಾರ ಉಪಚುನಾವಣಾ ಪ್ರಚಾರಕ್ಕೆ ತೆರೆಬಿದ್ದ ಬೆನ್ನಲ್ಲೇ ಕಠಿಣ ಕ್ರಮಕ್ಕೆ ಮುಂದಾಗಿರುವುದು ಸಾಮಾಜಿಕ ಜಾಲತಾಣ ಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕೊರೊನಾ ಮಿತಿಮೀರುತ್ತಿದ್ದರೂ ಕೂಡ ಚುನಾವಣಾ ವಿಚಾರಕ್ಕಾಗಿಯೇ ಸರಕಾರ ಇಷ್ಟು ದಿನ ಮೌನವಾಗಿತ್ತು ಅನ್ನೋ ಆರೋಪವೂ ಕೇಳಿಬಂದಿದೆ.

Comments are closed.