ಮಾರುಕಟ್ಟೆಗೆ ಬಂತು 3 ತಿಂಗಳ ಕೆಡದ ‘ನಂದಿನಿ ತೃಪ್ತಿ’ ಹಾಲು

0

ಬೆಂಗಳೂರು : ಗ್ರಾಹಕರ ಅನುಕೂಲಕ್ಕಾಗಿ ಮೂರು ತಿಂಗಳ ಕಾಲ ಕೆಡದಂತೆ ಇಡಬಹುದಾದ ನಂದಿನಿ ತೃಪ್ತಿ ಹಾಲು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಗುಡ್ ಲೈಪ್ ಮಾದರಿಯ ಈ ಹಾಲನ್ನು ರೆಫ್ರಿಜರೇಟರ್ ಸಹಾಯವಿಲ್ಲದೇ 90 ದಿನಗಳ ಕಾಲ ಈ ಹಾಲನ್ನು ಸಂಗ್ರಹಿಸಬಹುದಾಗಿದೆ.

ನಂದಿನಿ ಈಗಾಗಲೇ ಗುಡ್ ಲೈಫ್ ಮಾದರಿಯಲ್ಲಿ ಹಾಲನ್ನು ಮಾರುಕಟ್ಟೆಗೆ ಪರಿಚಿಯಿಸಿದೆ. ಸುಮಾರು 6 ತಿಂಗಳುಗಳ ಕಾಲ ಕೆಡದಂತಹ ಹಾಲಿಗೆ ಗ್ರಾಹಕರಿಂದ ಬಾರೀ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ 3 ತಿಂಗಳುಗಳ ಕಾಲ ಕೆಡದಂತಹ ನಂದಿನಿ ತೃಪ್ತಿ ಹಾಲನ್ನು ಪರಿಚಯಿಸಿದೆ.

90 ದಿನಗಳ ಕಾಲ ಹಾಲು ಕೆಡಂದಂತೆ ಇಡುವ ಸಲುವಾಗಿ ಐದು ಪದರಗಳಿರುವ ಫ್ಲೆಕ್ಸಿ ಪ್ಯಾಕ್ ನಲ್ಲಿ ಹಾಲನ್ನು ಸಂಗ್ರಹಿಸಲಾಗಿರುತ್ತದೆ. ನಂದಿನಿ ತೃಪ್ತಿ ಹಾಲು ಲೀಟರ್ ಗೆ 46 ರೂಪಾಯಿ, ಅರ್ಧ ಲೀಟರ್ ಗೆ 23 ರೂಪಾಯಿ ದರ ನಿಗದಿ ಪಡಿಸಲಾಗಿದೆ. ಗುಡ್ ಲೈಫ್ ಹಾಲಿಗೆ ಹೋಲಿಕೆ ಮಾಡಿದ್ರೆ ನಂದಿನಿ ತೃಪ್ತಿ ಹಾಲಿನ ಬೆಲೆ 4ರೂಪಾಯಿ ಕಡಿಮೆಯಾಗಲಿದೆ. ನಂದಿನಿಯ ಎಲ್ಲಾ ಪಾರ್ಲರ್ ಗಳಲ್ಲಿ ನಂದಿನಿ ತೃಪ್ತಿ ಹಾಲು ಲಭ್ಯವಾಗಲಿದೆ.

Leave A Reply

Your email address will not be published.