ಎಪ್ರಿಲ್ 5ರ ರಾತ್ರಿ 9 ಗಂಟೆಗೆ ನಿಮ್ಮ 9 ನಿಮಿಷ ನನಗೆ ಬೇಕು : ಮೋದಿ

0

ನವದೆಹಲಿ : ಎಪ್ರಿಲ್ 5ರ ಭಾನುವಾರ ನಮಗೆ ಮಹತ್ವದ ದಿನ. ರಾತ್ರಿ 9 ಗಂಟೆಗೆ ನಿಮ್ಮ 9 ನಿಮಿಷ ನನಗೆ ಬೇಕು. ಈ ದಿನ ಎಲ್ಲರೂ ಒಗ್ಗಟ್ಟಾಗೋಣಾ. ಕೊರೊನಾ ಸಂಕಷ್ಟವನ್ನು ಅಂತ್ಯಗೊಳಿಸಲು ನಾಲ್ಕು ದಿಕ್ಕಿಗೆ ಬೆಳಕು ಹರಡಿಸಬೇಕಿದೆ. ಪ್ರತೀ ಮನೆಯ ದೀಪಗಳನ್ನು ಆರಿಸಿ ಮನೆಯ ಮುಂಭಾಗದಲ್ಲಿ ಮೊಂಬತ್ತಿ, ಮೊಬೈಲ್ ಲೈಟ್ ಅಥವಾ ಟಾರ್ಚ್ ಬೆಳಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಲಾಕ್ ಡೌನ್ ಜಾರಿ ಮಾಡಿ 9 ದಿನ ಕಳೆದು ಹೋಗಿದೆ. ಕೊರೊನಾ ವಿರುದ್ದದ ಹೋರಾಟಕ್ಕೆ ಎಲ್ಲರೂ ಬೆಂಬಲ ಕೊಟ್ಟಿದ್ದೀರಿ. ಈ ಮೂಲಕ ಭಾರತ ಪ್ರಪಂಚದ ಇತರ ದೇಶಗಳಿಗೆ ಮಾದರಿಯಾಗಿದೆ. ನಿಮ್ಮೆಲರ ಸಹಕಾರ ಅತ್ಯದ್ಬುತವಾಗಿದೆ. ನಮ್ಮ ದೇಶದ ಸಾಮೂಹಿಕ ಶಕ್ತಿಯನ್ನು ಬೇರೆ ದೇಶಗಳಿಗೆ ತೋರಿಸಿಕೊಟ್ಟಿದ್ದೀರಿ. ಕೋಟ್ಯಾಂತರ ಜನ ತಮ್ಮ ಮನೆಯಲ್ಲಿಯೇ ಇದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ದೇಶದ ಒಗ್ಗಟ್ಟು ಕಂಡುಬರುತ್ತಿದೆ. ನೀವು ನಿಮ್ಮ ಮನೆಯಲ್ಲಿಯೇ ಇರಬಹುದು, ಆದರೆ 130 ಕೋಟಿ ಜನರು ಒಟ್ಟಿಗೆ ಇದ್ದೇವೆ ಎಂದಿದ್ದಾರೆ.

ಯಾವುದೇ ಕಾರಣಕ್ಕೂ ಸಾಮಾಜಿಕ ಅಂತರದ ಲಕ್ಷ್ಮಣ ರೇಖೆಯನ್ನು ದಾಟಬೇಡಿ. ಬನ್ನಿ ದೀಪ ಹಚ್ಚಿ ಭಾರತವನ್ನು ಬೆಳಗಿಸಿ. 130 ಕೋಟಿ ಜನರು ಒಂದೇ ದೃಢಸಂಕಲ್ಪವನ್ನು ಮಾಡಿದೆ. ಮನೆಯ ಲೈಟ್ ಆರಿಸಿ ಮನೆಯ ಬಾಗಿಲಿನಲ್ಲಿ ಹೊಸ ದೀಪವನ್ನು ಬೆಳಗಿಸಿ. ಹೊಸ ದೀಪದಿಂದ ನಮ್ಮ ಮನಸ್ಸು ಗಟ್ಟಿಯಾಗುತ್ತದೆ. ಬೆಳಕಿನ ಶಕ್ತಿ ಏನು ಎಂಬುವುದನ್ನು ತೋರಿಸೋಣಾ. ಬೆಳಕು ನಮ್ಮ ಆತ್ಮ ವಿಶ್ವಾಸವನ್ನು ಗಟ್ಟಿಗೊಳಿಸುತ್ತದೆ. ಹೀಗಾಗಿ ಎಪ್ರಿಲ್ 5ರ ಭಾನುವಾರ ನಮಗೆ ಮಹತ್ವದ ದಿನವಾಗಿದೆ ಎಂದರು.

Leave A Reply

Your email address will not be published.