ಮುಂಬೈ : ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಇದೀಗ ಎಲ್ಲರ ಹಾಟ್ ಫೇವರೇಟ್. ಇದೀಗ ಚಿನ್ನದ ಹುಡುಗ ನೀರಜ್ ಚೋಪ್ರಾ ಮತ್ತೊಮ್ಮೆ ಜನರನ್ನು ಇಂಪ್ರೆಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಬಾರಿ ನೀರಜ್ ಜಾವೆಲಿನ್‌ನಲ್ಲಿ ಅಲ್ಲಾ ಬದಲಾಗಿ ನಟನೆಯಿಂದ.
ಹೌದು, ನೀರಜ್ ಚೋಪ್ರಾ ಇದೇ ಮೊದಲ ಬಾರಿಗೆ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ನೀರಜ್ ಚೋಪ್ರಾ ಮೊಟ್ಟ ಮೊದಲ ಬಾರಿಗೆ ಕ್ರೆಡ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನ ದೃಶ್ಯಾವಳಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೀರಜ್ ಶೇರ್ ಮಾಡಿದ್ದು ಬಾರೀ ಸದ್ದು ಮಾಡುತ್ತಿದೆ.
ಇದನ್ನೂ ಓದಿ:Viral Video : 2 ಸುರಂಗದೊಳಗೆ ಚಲಿಸಿತು ವಿಮಾನ : ವೈರಲ್ ಆಯ್ತು ಗಿನ್ನಿಸ್ ದಾಖಲೆಯ ವೀಡಿಯೋ
ಈ ಜಾಹಹೀರಾತಿನಲ್ಲಿ ನೀರಜ್ ಚೋಪ್ರಾ ನಟನೆ ಕಮಾಲ್ ಮಾಡುವಂತಿದೆ. ಇದನ್ನು ನೋಡಿದ ಹರ್ಷ್ ಬೆನಿವಾಲ್, ನಟನೆಯಲ್ಲೂ ನಿಮಗೆ ಬಂಗಾರದ ಪದಕವೇ ಸಿಗಬೇಕು ಎಂದಿದ್ದಾರೆ. ಇದು ಮಾತ್ರವಲ್ಲದೇ ನೀರಜ್ರ ನಟನೆಯನ್ನು ಹೊಗಳುವಂತಹ ಸಾಕಷ್ಟು ಕಮೆಂಟ್ಗಳು ಹರಿದಾಡುತ್ತಿವೆ.
ಇದನ್ನೂ ಓದಿ: ವಿಮಾನದೊಳಗೆ ಕಂಠಪೂರ್ತಿ ಕುಡಿದು ಗಲಾಟೆ ಮಾಡಿದ : ಮುಂದೇನಾಯ್ತು ಗೊತ್ತಾ ?
(Gold boy Neeraj Chopra’s first advertisement went viral)