ನೇಪಾಳದಲ್ಲಿ ಭಾರತೀಯ ಖಾಸಗಿ ಸುದ್ದಿ ವಾಹಿನಿಗಳ ಪ್ರಸಾರ ಬಂದ್

0

ನವದೆಹಲಿ : ಭಾರತ – ನೇಪಾಳ ಗಡಿವಿವಾದ ಕಾಣಿಸಿಕೊಂಡ ಬೆನ್ನಲ್ಲೇ ನೇಪಾಳದಲ್ಲಿ ಭಾರತೀಯ ಸುದ್ದಿ ವಾಹಿನಿಗಳ ಪ್ರಸಾರವನ್ನು ಬಂದ್ ಮಾಡಲಾಗಿದೆ. ಭಾರತದ ಸುದ್ದಿ ವಾಹಿನಿಗಳ ಪ್ರಸಾರ ಬಂದ್ ಮಾಡಲಾಗಿದೆ ಎಂದು ಕೇಬಲ್ ಆಪರೇಟರ್‌ಗಳು ಹೇಳಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರತ-ಚೀನಾ ನಡುವೆ ಶಾಂತಿ ಮಂತ್ರ ಜಪಿಸಿದ ನೇಪಾಳ ಸುಮಾರು ಆರು ತಿಂಗಳ ಹಿಂದೆ ಭಾರತ ಉತ್ತರಾಖಂಡ-ನೇಪಾಳ ಗಡಿ ಪ್ರದೇಶದಲ್ಲಿ ಬರುವ ಕಾಲಾಪಾನಿಯನ್ನು ತನ್ನ ವ್ಯಾಪ್ತಿಗೆ ಸೇರಿಸಿ ಪರಿಷ್ಕೃತ ಭೂಪಟ ಬಿಡುಗಡೆ ಮಾಡಿತ್ತು. ಭಾರತದ ಮೂರು ಭೂ ಪ್ರದೇಶವನ್ನು ತನ್ನದು ಎಂದು ಬಿಂಬಿಸಿ ಜೂನ್ 18ರಂದು ನೇಪಾಲ ಹೊಸ ನಕ್ಷೆಯನ್ನು ಸಂಸತ್‌ನಲ್ಲಿ ಮಂಡನೆ ಮಾಡಿತ್ತು. ಈ ನಡುವಲ್ಲೇ ಚೀನಾ – ಭಾರತ ವಿವಾದದಲ್ಲಿಯೂ ನೇಪಾಳ ಚೀನಾಕ್ಕೆ ಬೆಂಬಲ ನೀಡುತ್ತಿದೆಯೆಂಬ ಆರೋಪವು ಕೇಳಿಬಂದಿತ್ತು.

ನೇಪಾಳದ ಸಂಸತ್‌ನಲ್ಲಿ ಭಾರತದ ಪರವಾಗಿ ನಿಲುವು ಪ್ರಕಟಿಸಿದ್ದ ಸಂಸದೆ ಸರಿತಾ ಗಿರಿ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲಾಗಿತ್ತು. ಈ ನಡುವಲ್ಲೇ ನೇಪಾಳದಲ್ಲಿ ಭಾರತೀಯ ಸುದ್ದಿ ವಾಹಿನಿಗಳ ಪ್ರಸಾರವನ್ನೇ ಬಂದ್ ಮಾಡಿದೆ. ಆದರೆ ಈ ಕುರಿತು ಸರಕಾರ ಯಾವುದೇ ಅಧಿಕೃತ ಆದೇಶವನ್ನು ಹೊರಡಿಸಿಲ್ಲ. ಪ್ರಮುಖವಾಗಿ ಖಾಸಗಿ ಸುದ್ದಿ ವಾಹಿನಿಗಳನ್ನು ಮಾತ್ರವೇ ಬಂದ್ ಮಾಡಲಾಗಿದೆ ಎನ್ನಲಾಗುತ್ತಿದೆ.

Leave A Reply

Your email address will not be published.