ಮುಂದಿನ ಜೂನ್ ವರೆಗೂ ಏಷ್ಯಾಕಪ್ ಮುಂದೂಡಿಕೆ

0

ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ನಲ್ಲಿ ನಡೆಯಬೇಕಾಗಿದ್ದ ಏಷ್ಯಾ ಕಪ್ ಟೂರ್ನಿಯನ್ನು ಮುಂದಿನ ವರ್ಷದ ಜೂನ್ ಗೆ ಮುಂದೂಡಲಾಗಿದೆ.

ಈ ಬಾರಿ ಪಾಕಿಸ್ತಾನ ಏಷ್ಯಾ ಕಪ್ ಅತಿಥ್ಯ ವಹಿಸಬೇಕಾಗಿತ್ತು. ಆದರೆ, ಭದ್ರತೆ ಕಾರಣ ಶ್ರೀಲಂಕಾದಲ್ಲಿ ಪಂದ್ಯಾವಳಿ ಆಯೋಜಿಸಲು ಸಿದ್ಧತೆ ನಡೆಸಲಾಗಿತ್ತು.

ಈ ನಡುವಲ್ಲೇ ಎಸಿಸಿ ಕಾರ್ಯಕಾರಿ ಮಂಡಳಿ ಸೆಪ್ಟೆಂಬರ್ ನಲ್ಲಿ ನಡೆಯಬೇಕಾಗಿದ್ದ ಏಷ್ಯಾ ಕಪ್ ಪಂದ್ಯಾವಳಿಯವನ್ನು ಕೊರೊನಾ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಮುಂದೂಡಲು ನಿರ್ಧರಿಸಿದೆ ಎಂದು ಏಷ್ಯನ್ ಕ್ರಿಕೆಟ್ ಸಮಿತಿ ಟ್ವೀಟ್ ಮಾಡಿದೆ.

ಏಷ್ಯನ್ ಕ್ರಿಕೆಟ್ ಸಮಿತಿಯ ನಿರ್ಧಾರ ಇದೀಗ ಐಪಿಎಲ್ ಪಂದ್ಯಾವಳಿಗೆ ಜೀವಕಳೆ ಬಂದಂತಾಗಿದೆ. ಬಿಸಿಸಿಐ ಸೆಪ್ಟೆಂಬರ್ ನಿಂದ ನವೆಂಬರ್ ವರೆಗೂ ಐಪಿಎಲ್ ನಡೆಸಲು ಪ್ರಯತ್ನಿಸುವ ಹಾದಿ ಸುಗಮವಾದಂತಾಗಿದೆ. .

Leave A Reply

Your email address will not be published.