Girl’s auction: ರಾಜಸ್ಥಾನದಲ್ಲಿ ಸಾಲ ತೀರಿಸದಿದ್ದರೆ ಹೆಣ್ಣುಮಕ್ಕಳ ಮೇಲೆ ನಡೆಯುತ್ತೆ ಇಂಥ ದೌರ್ಜನ್ಯ..!

ರಾಜಸ್ತಾನ: Girl’s auction: ಹಿಂದಿನ ಕಾಲದಲ್ಲಿ ಧಣಿಗಳಿಂದ ಪಡೆದ ಸಾಲ ತೀರಿಸಲಾಗಿದೇ ಇದ್ದ ಪಕ್ಷದಲ್ಲಿ ಅವರ ಮನೆಯಲ್ಲಿ ಜೀತದಾಳು ಆಗಿ ಜೀವನಪೂರ್ತಿ ಗುಲಾಮರಂತೆ ಬದುಕುವ ಅನಿಷ್ಟ ಪದ್ಧತಿ ಇತ್ತು. ಆದರೆ ಇದೀಗ ಅದಕ್ಕೂ ಹೀನಾಯವಾದ ಘಟನೆಯೊಂದು ರಾಜಸ್ತಾನದಲ್ಲಿ ವರದಿಯಾಗಿದ್ದು ದೇಶವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ.

ರಾಜಸ್ತಾನದಲ್ಲಿ ತೆಗೆದುಕೊಂಡ ಸಾಲ ತೀರಿಸಲಾಗದಿದ್ದರೆ ಹೆಣ್ಣುಮಕ್ಕಳನ್ನು ಹರಾಜಿಗೆ ಇಟ್ಟು ಮಾರಲಾಗುತ್ತಿದೆಯಂತೆ. ಅಷ್ಟೇ ಅಲ್ಲ ಅವರ ತಾಯಿಯಂದಿರ ಮೇಲೆ ಅತ್ಯಾಚಾರ ನಡೆಯುತ್ತಂತೆ. ಇತ್ತೀಚೆಗೆ ನಡೆದ ಒಂದು ಘಟನೆಯಿಂದ ಈ ಕೃತ್ಯ ಬಯಲಾಗಿದೆ. ಸ್ಟಾಂಪ್ ಪೇಪರ್ ಗಳ ಮೇಲೆ ಸಹಿ ಹಾಕಿಸಿಕೊಂಡು 8 ವರ್ಷದ ಬಾಲಕಿಯನ್ನು ಮಾರಾಟ ಮಾಡಲಾಗಿದೆ. ಬಳಿಕ ಗ್ರಾಮ ಜಾತಿ ಮಂಡಳಿಗಳ ಆದೇಶದ ಮೇರೆಗೆ ಆ ಬಾಲಕಿಯ ತಾಯಿಯ ಮೇಲೆಯೂ ಅತ್ಯಾಚಾರ ಎಸಗಲಾಗಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸಮಾಜವೇ ತಲೆ ತಗ್ಗಿಸಬೇಕಾದಂಥ ಇಂಥ ಕೃತ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಅಷ್ಟಕ್ಕೂ ಆ ಭಾಗದಲ್ಲಿ ನಡೆಯುತ್ತಿರುವುದೇನು..?

ರಾಜಸ್ತಾನದ ಬಿಲ್ವಾರದಂಥ ಪ್ರದೇಶಗಳಲ್ಲಿನ ಜನರು ತಮ್ಮ ವಿವಾದಗಳನ್ನು ಬಗೆಹರಿಸಿಕೊಳ್ಳಲು ಪೊಲೀಸ್ ಠಾಣೆ ಮೆಟ್ಟಿಲೇರುವುದಿಲ್ಲ. ಬದಲಾಗಿ ಜಾತಿ ಮಂಡಳಿಗಳ ಮೊರೆ ಹೋಗುತ್ತಾರಂತೆ. ಜಾತಿ ಮಂಡಳಿಯು ಇಂಥ ಅಮಾನವೀಯ ಕೃತ್ಯಗಳಿಗೆ ಪ್ರಚೋದನೆ ಕೊಡುತ್ತಾ ಬಂದಿದೆ. ಹೀಗಾಗಿ ಸಾಲ ಪಡೆದು ತೀರಿಸಲಾಗದ ವಿವಾದ ತನ್ನ ಅಂಗಳಕ್ಕೆ ಬಂದಾಗ ಜಾತಿ ಮಂಡಳಿಯವರು, ಅವರ ಹೆಣ್ಣು ಮಕ್ಕಳನ್ನು ಮಾರುವಂತೆ ಸೂಚಿಸುವುದಲ್ಲದೇ ಮಕ್ಕಳ ಅಮ್ಮಂದಿರ ಮೇಲೆ ಅತ್ಯಾಚಾರ ನಡೆಸಲು ಸೂಚಿಸುತ್ತದಂತೆ. ಅಂದಹಾಗೆ, ರಾಜಸ್ತಾನದಲ್ಲಿ ಇಂಥ ಕೆಟ್ಟ ಆಚರಣೆ ಇಂದು ನಿನ್ನೆಯದ್ದಲ್ಲ, ಬಹಳ ಅನಾದಿ ಕಾಲದಿಂದಲೂ ಜಾರಿಯಲ್ಲಿದೆ ಎನ್ನಲಾಗಿದೆ.

ಜಾತಿ ಮಂಡಳಿಯು ತನ್ನ ಬಳಿ ದೂರು ತೆಗೆದುಕೊಂಡು ಬಂದ ವ್ಯಕ್ತಿಯೊಬ್ಬನಿಗೆ ಮೊದಲು ತನ್ನ ಸಹೋದರಿಯನ್ನು ಮಾರಾಟ ಮಾಡುವಂತೆ ಸೂಚಿಸಿತ್ತು. ಬಳಿಕ ಆತನ 12 ವರ್ಷದ ಮಗಳನ್ನು 15 ಲಕ್ಷ ರೂ. ಸಾಲಕ್ಕೆ ಬದಲಾಗಿ ಮಾರಾಟ ಮಾಡುವಂತೆ ಸೂಚಿಸಿತ್ತು. ಇನ್ನೋರ್ವ ಬಾಲಕಿಯನ್ನು ಆಕೆಯ ತಾಯಿ ಚಿಕಿತ್ಸೆಗಾಗಿ ತಂದೆ ಪಡೆದುಕೊಂಡ 6 ಲಕ್ಷ ರೂ.ಗೆ ಮಾರಾಟ ಮಾಡಿ ಆಗ್ರಾಕ್ಕೆ ಕರೆದೊಯ್ದು ಮೂರು ಬಾರಿ ಮಾರಾಟ ಮಾಡಲಾಗಿತ್ತು. ಆ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದರಿಂದ 4 ಬಾರಿ ಗರ್ಭಿಣಿ ಆಗಿದ್ದಳು. ಬಳಿಕ ನಿರಂತರ ದೌರ್ಜನ್ಯದಿಂದ ಆಕೆ ಸಾವನ್ನಪ್ಪಿದ್ದಳು.

ಸದ್ಯ ಈ ಹೀನ ಕೃತ್ಯಗಳ ಬಗ್ಗೆ ತನಿಖೆ ನಡೆಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಸರ್ಕಾರಕ್ಕೆ ವರದಿ ನೀಡಿದ್ದು, ವರದಿ ಪರಿಶೀಲಿಸಿದ ರಾಜ್ಯ ಸರ್ಕಾರ ನೋಟಿಸ್ ನೀಡಿದೆ.

NHRC ವರದಿಯಲ್ಲಿ ಏನಿದೆ..?

ಹಣಕಾಸಿನ ವಹಿವಾಟು ಮತ್ತು ಸಾಲ ವಿವಾದ ಸಂದರ್ಭದಲ್ಲಿ ಹಣವನ್ನು ವಸೂಲಿ ಮಾಡಲು ಬಾಲಕಿಯರ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಹೀಗೆ ಮಾರಾಟವಾಗುವ ಹೆಣ್ಣುಮಕ್ಕಳನ್ನು ವಿದೇಶಕ್ಕೆ ಸಾಗಿಸಲಾಗುತ್ತದೆ. ಅಲ್ಲಿ ಅವರ ಮೇಲೆ ದೈಹಿಕ ಕಿರುಕುಳ, ಲೈಂಗಿಕ ದೌರ್ಜನ್ಯ, ಚಿತ್ರಹಿಂಸೆ ನೀಡಲಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಗೊಂಡಿದೆ. ಆ ವರದಿಯ ವಿಷಯಗಳು ನಿಖರವಾಗಿದ್ದರೆ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾದಂತೆ ಎಂದಿರುವ ಎನ್‍ಹೆಚ್‍ಆರ್‍ಸಿ, 4 ವಾರಗಳಲ್ಲಿ ಕ್ರಮ ತೆಗೆದುಕೊಂಡು ವರದಿ ಸಲ್ಲಿಸುವಂತೆ ರಾಜಸ್ತಾನದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.

ಇದನ್ನೂ ಓದಿ: Parag Agrawal: ಟ್ವಿಟರ್​ ಸಿಇಓ ಸ್ಥಾನದಿಂದ ಕೆಳಗಳಿದ ಪರಾಗ್​ ಅಗರ್​ವಾಲ್​ಗೆ ಸಿಗುವ ಮೊತ್ತವೆಷ್ಟು ಗೊತ್ತಾ

ಇದನ್ನೂ ಓದಿ: MI Financial Services : ಭಾರತದಲ್ಲಿ Mi ಹಣಕಾಸು ಸೇವೆಗಳನ್ನು ಸ್ಥಗಿತಗೊಳಿಸಿದ Xiaomi

NHRC issues notice to Rajasthan govt over ‘auctioning of girls’ to settle financial disputes

Comments are closed.