Court Recruitment 2022 : 11 ಟೈಪಿಸ್ಟ್, ಟೈಪಿಸ್ಟ್-ಕಾಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ (Court Recruitment 2022)ಖಾಲಿರುವ 11 ಟೈಪಿಸ್ಟ್, ಟೈಪಿಸ್ಟ್-ಕಾಪಿಸ್ಟ್ ಹುದ್ದೆಗಳಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಚಾಮರಾಜನಗರ – ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನವೆಂಬರ್‌ 30,2022ರ ಮೊದಲು ಆನ್‌ಲೈನ್‌ನ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಹುದ್ದೆಗಳ ಸಂಪೂರ್ಣ ವಿವರ :

  • ಸಂಸ್ಥೆಯ ಹೆಸರು : ಚಾಮರಾಜನಗರ ಇಕೋರ್ಟ್ (ಚಾಮರಾಜನಗರ ಜಿಲ್ಲಾ ನ್ಯಾಯಾಲಯ)
  • ಹುದ್ದೆಗಳ ಸಂಖ್ಯೆ : 11
  • ಉದ್ಯೋಗ ಸ್ಥಳ : ಚಾಮರಾಜನಗರ – ಕರ್ನಾಟಕ
  • ಹುದ್ದೆಯ ಹೆಸರು : ಟೈಪಿಸ್ಟ್, ಟೈಪಿಸ್ಟ್-ಕಾಪಿಸ್ಟ್
  • ವೇತನ : ರೂ.21400-42000/- ಪ್ರತಿ ತಿಂಗಳು


ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿರುವ ಹುದ್ದೆಯ ಹೆಸರು ಮತ್ತು ಸಂಖ್ಯೆಯ ವಿವರ :

ಟೈಪಿಸ್ಟ್-ಕಾಪಿಸ್ಟ್ : 4 ಹುದ್ದೆಗಳು
ಬೆರಳಚ್ಚುಗಾರ : 7 ಹುದ್ದೆಗಳು

ವಿದ್ಯಾರ್ಹತೆ ವಿವರ :

ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿರುವ ಹುದ್ದೆಗಳಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ದ್ವಿತೀಯ ಪಿಯುಸಿ ಹಾಗೂ ವಾಣಿಜ್ಯ ಅಧ್ಯಾಯದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ವಯೋಮಿತಿ ವಿವರ :

ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳನ್ನು ನವೆಂಬರ್‌ 30, 2022 ರಂತೆ ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷ ವಯಸ್ಸಾಗಿರಬೇಕು.


ವಯೋಮಿತಿ ಸಡಿಲಿಕೆ ವಿವರ :
SC/ST/ಪ್ರವರ್ಗ-I ಅಭ್ಯರ್ಥಿಗಳು : 05 ವರ್ಷಗಳು
ಪ್ರವರ್ಗ-2A/2B/3A & 3B ಅಭ್ಯರ್ಥಿಗಳು : 03 ವರ್ಷಗಳು
PWD ಮತ್ತು ವಿಧವೆ ಅಭ್ಯರ್ಥಿಗಳು : 10 ವರ್ಷಗಳು

ಅರ್ಜಿ ಶುಲ್ಕದ ವಿವರ :

SC/ST/ಪ್ರವರ್ಗ-I & PH ಅಭ್ಯರ್ಥಿಗಳು : ಇಲ್ಲ
ಸಾಮಾನ್ಯ/ಪ್ರವರ್ಗ-2A/2B/3A & 3B ಅಭ್ಯರ್ಥಿಗಳು : ರೂ.200/-
ಪಾವತಿ ವಿಧಾನ : ಆನ್‌ಲೈನ್ ಮೂಲಕ

ಆಯ್ಕೆ ವಿಧಾನ :

ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ, ಟೈಪಿಂಗ್ ಪರೀಕ್ಷೆ, ಕನ್ನಡ ಭಾಷಾ ಪರೀಕ್ಷೆ ಹಾಗೂ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ :

ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ಹುದ್ದೆಗಳ ನೇಮಕಾತಿಯಲ್ಲಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ, ಗುರುತಿನ ಚೀಟಿ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್‌ ಹಾಗೂ ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆ) ಅಧಿಕೃತ ವೆಬ್‌ಸೈಟ್‌ ಆದ districts.ecourts.gov.in ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಗಮನಿಸಬೇಕಾದ ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27-10-2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-11-2022
ಆನ್‌ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 01-12-2022

ಇದನ್ನೂ ಓದಿ : UAS Dharwad Recruitment 2022 : ಧಾರವಾಡ ಕೃಷಿ ವಿವಿಯಲ್ಲಿ ಉದ್ಯೋಗಾವಕಾಶ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : RPSC FSO Recruitment 2022 : RPSC ಆಯೋಗದ FSO ಹುದ್ದೆಗೆ ನೇಮಕಾತಿ ಆರಂಭ ; 200 ಹುದ್ದೆಗಳಿಗೆ ಅರ್ಜಿ ಅಹ್ವಾನ

ಇದನ್ನೂ ಓದಿ : AHVS Karnataka recruitment 2022 : 250 ವೆಟರ್ನರಿ ಇನ್ಸ್ಪೆಕ್ಟರ್ ಹುದ್ದೆಗೆ ನೇಮಕಾತಿ : ನವೆಂಬರ್‌ 4 ಕೊನೆಯ ದಿನ

ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ – ಟೈಪಿಸ್ಟ್-ಕಾಪಿಸ್ಟ್ : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಬೆರಳಚ್ಚುಗಾರ : ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: districts.ecourts.gov.in

Court Recruitment 2022 11 Applications invited for the posts of Typist, Typist-Copyist

Comments are closed.