ಕಂಬಳ ಓಟಗಾರನನ್ನು ಅವಮಾನಿಸಿತೇ ಸರಕಾರ ?

0

ಬೆಂಗಳೂರು : ಉಸೇನ್ ಬೋಲ್ಟ್ ದಾಖಲೆಯನ್ನೇ ಸರಿಗಟ್ಟಿದ ತುಳುನಾಡ ಕಂಬಳ ಓಟಗಾರನನ್ನು ರಾಜ್ಯ ಸರಕಾರ ಅವಮಾನಿಸಿದೆ. ಶ್ರೀನಿವಾಸ ಗೌಡರನ್ನು ಭರ್ಜರಿಯಾಗಿ ಸನ್ಮಾನಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕ್ರೀಡಾ ಸಚಿವ ಸಿ.ಟಿ.ರವಿ ಮಾಧ್ಯಮದವರ ಮುಂದೆ ಶ್ರೀನಿವಾಸ ಗೌಡರಿಗೆ ಸಹಕಾರ ಮಾಡಿದ್ದೇವೆ ಅಂತಾ ಘೋಷಣೆ ಮಾಡಿದ್ದರು. ಆದರೆ ಸರಕಾರದ ವತಿಯಿಂದ ನೀಡಿದ್ದು ಖಾಲಿ ಕವರ್ ಅನ್ನೋ ಮಾಹಿತಿ ಬಹಿರಂಗವಾಗಿದೆ.

ತುಳುನಾಡ ಜಾನಪದ ಕಲೆಯಾಗಿರೋ ಕಂಬಳದಲ್ಲಿ ಅತೀ ವೇಗವಾಗಿ ಓಡೋ ಮೂಲಕ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆಯನ್ನೇ ಸರಿಗಟ್ಟಿದ್ದ ಶ್ರೀನಿವಾಸ ಗೌಡ ವಿಶ್ವಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಕೇಂದ್ರ ಸರಕಾರ ಒಲಿಂಪಿಕ್ ತರಬೇತಿ ಆಹ್ವಾನ ನೀಡಿದೆ. ಈ ನಡುವಲ್ಲೇ ರಾಜ್ಯ ಸರಕಾರ ಕಂಬಳ ಓಟಗಾರಿಗೆ ವಿಧಾನಸೌಧದಲ್ಲಿಂದು ಸನ್ಮಾನಿಸಿದೆ. ಆದರೆ ಸನ್ಮಾನದ ವೇಳೆಯಲ್ಲಿ ಕಂಬಳ ಓಟಗಾರನಿಗೆ 3 ಲಕ್ಷ ರೂಪಾಯಿ ಚೆಕ್ ನೀಡುವುದಾಗಿ ಘೋಷಣೆಯನ್ನು ಮಾಡಲಾಗಿತ್ತು.

ಮಾಧ್ಯಮಗಳಲ್ಲಿಯೂ ಸುದ್ದಿ ಬಿತ್ತರವಾಗಿತ್ತು. ಆದರೆ ಸನ್ಮಾನಿಸೋ ವೇಳೆಯಲ್ಲಿ ಶ್ರೀನಿವಾಸ ಗೌಡರಿಗೆ ಖಾಲಿ ಕವರ್ ನೀಡಲಾಗಿತ್ತು. ಕವರ್ ನಲ್ಲಿ ಚೆಕ್ ಇರಲಿಲ್ಲಾ ಅನ್ನೋದು ಬಯಲಾಗಿದೆ. ಕೊನೆಗೆ ತನ್ನ ತಪ್ಪಿನಿಂದ ಎಚ್ಚೆತ್ತುಕೊಂಡಿರೋ ಸರಕಾರ ಸುಮಾರು 3 ಗಂಟೆಯ ನಂತರ ಶ್ರೀನಿವಾಸ ಗೌಡರಿಗೆ 3 ಲಕ್ಷ ರೂಪಾಯಿ ಚೆಕ್ ವಿತರಿಸಿದೆ.

Leave A Reply

Your email address will not be published.