ಓಡಿಸ್ಸಾ: ಕೊರೋನಾ ವೈರಸ್ ನಮ್ಮ ಬದುಕನ್ನು ಆವರಿಸಿಕೊಳ್ಳುತ್ತಿದ್ದಂತೆ ಅದರೊಂದಿಗೆ ಕೊರೋನಾಕ್ಕೆ ಔಷಧಿ, ಕೊರೋನಾ ಓಡಿಸುವ ಉಪಾಯ ಹೀಗೆ ಎಲ್ಲವೂ ಪ್ರಾಮುಖ್ಯತೆ ಪಡೆದುಕೊಂಡವು. ಇಂತಹುದೇ ಹೊತ್ತಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಟಿನ್ ವೊಂದು ನೆಟ್ಟಿಗರ ಗಮನ ಸೆಳೆದಿದ್ದು, ಕೊರೋನಾಕ್ಕೆ ಇಲ್ಲಿದೆ ಮದ್ದು ಎಂಬಂತೆ ವೈರಲ್ ಆಗ್ತಿದೆ.

ಕರೋನಾ ಓಡಿಸುವ ಕಷಾಯ, ಗುಳಿಗೆ,ಮಾತ್ರೆ,ಹಲ್ವಾ ಹೀಗೆ ಏನೇನೋ ಕಸರತ್ತುಗಳು ನಡೆಯುತ್ತಕೇ ಇದೆ. ಜನರು ಕೂಡ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಇಂತಹ ವಸ್ತುಗಳಿಗೆ ಹಣ ವ್ಯಯಿಸಿ ಮಂಗನಂತಾಗುತ್ತಲೇ ಇದ್ದಾರೆ. ಹೀಗಿರುವಾಗಲೇ ಓಡಿಸ್ಸಾದಲ್ಲಿ ಆರಂಭವಾದ ಟಿಫಿನ್ ಸೆಂಟರ್ ವೊಂದು ಕೊರೋನಾ ಕಾಲದಲ್ಲಿ ತನ್ನ ಹೆಸರಿನಿಂದಲೇ ಸಖತ್ ಫೇಮಸ್ ಆಗಿದ್ದು, ಇದರ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಓಡಿಸ್ಸಾದ ಬೆರ್ಹಾಪುರಂದ ಗಾಂಧಿನಗರ ಮುಖ್ಯರಸ್ತೆಯಲ್ಲಿರುವ ಟಿಫಿನ್ ಸೆಂಟರ್ ನ ಬೋರ್ಡ್ ಈಗ ಎಲ್ಲರ ಗಮನ ಸೆಳೆದಿದೆ. ಇಷ್ಟಕ್ಕೂ ಈ ಟಿಫನ್ ಸೆಂಟರ್ ಹೆಸರು ಆ್ಯಂಟಿ ವೈರಸ್ ಟಿಫಿನ್ ಸೆಂಟರ್. ಈ ಟಿಫಿನ್ ಸೆಂಟರ್ ಬೋರ್ಡ್ ನೋಡಿಯೇ ಜನರು ತಿಂಡಿ ತಿನ್ನುತ್ತಿದ್ದಾರಾ ಗೊತ್ತಿಲ್ಲ. ಆದರೆ ಪೋಟೋದಲ್ಲಿ ಟಿಫಿನ್ ಸೆಂಟರ್ ನಲ್ಲಿ ಸಾಕಷ್ಟು ಗ್ರಾಹಕರಿರುವ ದೃಶ್ಯವಂತೂ ಕಂಡು ಬರುತ್ತಿದೆ.

ಈ ಪೋಟೋವನ್ನು ಐಎಎಸ್ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದು, ದಿನಕ್ಕೊಂದು ಒಳ್ಳೆಯ ಆರಂಭ ಎಂದು ಟ್ವೀಟ್ ಮಾಡಿದ್ದಾರೆ. ಈ ಟಿಫಿನ್ ಸೆಂಟರ್ ಮೊದಲೇ ಇತ್ತಾ. ಅಥವಾ ಈಗ ಕೊರೋನಾ ಲಾಕ್ ಡೌನ್ ಬಳಿಕ ಆರಂಭವಾಗಿದ್ಯಾ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಈ ಕ್ಯಾಂಟಿನ್ ನ ಹೆಸರಿನಲ್ಲಿ ಆಂಟಿ ವೈರಸ್ ಟಿಫಿನ್ ಸೆಂಟರ್ ಎಂದಿದ್ದರೂ, ಟಿಫಿನ್ ಸೆಂಟರ್ ನಲ್ಲಿ ಮಾತ್ರ ಪೇಸ್ ಮಾಸ್ಕ್, ಸೋಷಿಯಲ್ ಡಿಸ್ಟನ್ಸ್ ಯಾವುದನ್ನು ಅನುಸರಿಸಲಾಗಿಲ್ಲ.

ಇನ್ನು ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಕಮೆಂಟ್ ಹರಿದು ಬರ್ತಿದ್ದು, ಇವರು ಊಟ ತಿಂಡಿಗೆ ಸ್ಯಾನಿಟೈಸರ್ ಸೇರಿಸುತ್ತಿಲ್ಲ ತಾನೇ? ಎಂದು ಕೆಲವರು ಕಾಲೆಳೆಯುತ್ತಿದ್ದಾರೆ.