Ash gourd Health Tips : ಪ್ರಕೃತಿ ನಮಗಾಗಿ ನಮ್ಮ ಆರೋಗ್ಯಕ್ಕಾಗಿ ಸಾಕಷ್ಟನ್ನು ನೀಡಿದೆ. ಆದ್ರೆ ಮನುಷ್ಯರಾದ ನಮಗೆ ಅದನ್ನು ಸರಿಯಾದ ರೀತಿಯಲ್ಲಿ ಬಳಸೋಕೆ ಬರೋದೇ ಇಲ್ಲ. ಅದಕ್ಕೆ ನಮ್ಮ ಹಿರಿಯರು ಆಹಾರ ಅಂದ್ರೆ ಆರೋಗ್ಯ ಅಂತ ಅಂತಿದ್ರು. ನಾವು ನಿಯಮಿತವಾಗಿ ಹಣ್ಣು ತರಕಾರಿಗಳನ್ನು ಸೇವಿಸುತ್ತಾ ಬಂದ್ರೆ ನಮ್ಮ ಆರೋಗ್ಯ ವೃದ್ದಿಯಾಗೋದ್ರದಲ್ಲಿ ಡೌಟೇ ಇಲ್ಲ. ಅದರಲ್ಲೂ ಕೆಲವು ಮ್ಯಾಜಿಕ್ ತರಕಾರಿಗಳನ್ನು ನಮ್ಮ ಪ್ರಕೃತಿ ನಮಗೆ ನೀಡಿದೆ. ಅದರಲ್ಲಿ ಬರುವ ಮೊದಲ ತರಕಾರಿ ಬೂದು ಕುಂಬಳಕಾಯಿ.

ಅಯ್ಯೋ ಬೂದು ಕುಂಬಳ ಕಾಯಿನಾ ಅಂತ ಮೂಗು ಮುರಿದು ಕೊಳ್ಳಬೇಡಿ. ಇದರ ಉಪಯೋಗವನ್ನು ಕೇಳಿದ್ರೆ ನಾಳೆನೇ ನೀವು ಬೂದು ಕುಂಬಳಕಾಯಿ ಯನ್ನು ತಿನ್ನೋಕೆ ಶುರು ಮಾಡ್ತೀರ . ಹೌದು ಇದು ತರಕಾರಿಗಳಲ್ಲೇ ತುಂಬಾ ಸ್ಪೆಷಲ್ ಅನ್ನಿಸಿಕೊಂಡಿರೋ ತರಕಾರಿ. ಇದರಲ್ಲಿ ಏನ್ನಿಲ್ಲ ಅನ್ನೋ ಹಾಗಿಲ್ಲ. ಎಲ್ಲಾ ರೋಗಗಳಿಗೆ ರಾಮ ಬಾಣ ಅಂದ್ರೂ ತಪ್ಪಾಗಲ್ಲ.
ನಿಗದಿತವಾಗಿ ಸೇವಿಸಿದ್ರೆ ಕ್ಯಾನ್ಸರ್ , ಬಿಪಿ , ಶುಗರ್, ಥೈರಾಯಿಡ್ , ವಾತ ಪಿತ್ತದಂತಹ ರೋಗನ್ನು ನಾಶ ಪಡಿಸುವ ಗುಣಗಳಿವೆ. ಇದರಲ್ಲಿ ಏನೆಲ್ಲಾ ಇದೆ ಅನ್ನೋದೇ ಆದ್ರೆ , ನೈಟ್ರಿಕ್ ಆಸಿಡ್ , ಆಂಟಿ ಆಕ್ಸಿಡೆಂಟ್ , ಐರನ್ , ಕ್ಯಾಲ್ಸಿಯಂ ನಂತಹ ಎಲ್ಲಾ ದೇಹಕ್ಕೆ ಬೇಕಾಗುವ ಅಂಶಗಳಿವೆ . ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿದ್ರೆ ಪಿತ್ತ ಅಂದ್ರೆ ಅಸಿಡಿಟಿ , ದೇಹದಲ್ಲಾಗುವ ನೋವು , ಸ್ನಾಯು ಸವೆತ ಮುಂತಾದುವುಗಳನ್ನು ಕಡಿಮೆ ಮಾಡುತ್ತೆ .
ಇದನ್ನೂ ಓದಿ : ಮಾಂಸಾಹಾರ ಊಟದ ಜೊತೆ ಹಾಲು ಕುಡಿದ್ರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಾ !
ಇನ್ನು ಪಿತ್ತದಿಂದ ಉಂಟಾಗುವ ಬ್ಲಾಕ್ ಗಳನ್ನು ಕರಗಿಸಿ ಹೃದಯಾಘಾತದ ಸಾದ್ಯತೆಯನ್ನು ಕಡಿಮೆ ಮಾಡುತ್ತೆ. ಇನ್ನು ನಮ್ಮ ಎಲ್ಲರ ದೇಹದಲ್ಲೂ ಎಲ್ಲಾ ಜೀವ ಕೋಶಗಳಂತೆ ಕ್ಯಾನ್ಸರ್ ಜೀವಕೋಶಗಳೂ ಇದ್ದೇ ಇರುತ್ತೆ. ಅದ್ಯಾವಾಗ ಜಾಸ್ತಿಯಾಗುತ್ತೋ ಆಗಲೇ ಅದೊಂದು ಖಾಯಿಲೆಯಾಗಿ ಬದಲಾಗೋದು . ಆದ್ರೆ ನೀವು ಬೂದು ಕುಂಬಳವನ್ನು ಸೇವಿಸಿದ್ರೆ ಇದರಲ್ಲಿರೋ ನೈಟ್ರಿಕ್ ಆಕ್ಷೈಡ್ ಹಾಗೂ ಆಂಟಿ ಆಕ್ಸಿಡೆಂಟ್ ಹೆಚ್ಷಿನ ಕ್ಯಾನ್ಸರ್ ಕಾರಕ ಜೀವ ಕೋಶವನ್ನು ಬೆಳೆಯದಂತೆ ನೋಡಿಕೊಳ್ಳುತ್ತೆ.ಇನ್ನು ಮಲಬದ್ಧತೆಗೂ ಇದು ರಾಮ ಬಾಣ ಅಂದ್ರೆ ತಪ್ಪಾಗಲ್ಲ.

ಸೇವಿಸೋದು ಹೇಗೆ
ಇದನ್ನು ಹಲವು ರೀತಿಯಲ್ಲಿ ಸೇವಿಸುತ್ತಾರೆ . ಅಡಿಗೆಯಲ್ಲಿ ಅಂದ್ರೆ ದೋಸೆಯಾಗಿ , ಸಾಂಬಾರ್ ಬೇರೆ ಬೇರೆ ರೀತಿಯಲ್ಲಿ ಸೇವಿಸಬಹುದು . ಆದ್ರೆ ಇದರ ಅಂಶವು ಪೂರ್ಣವಾಗಿ ಬಳಕೆಯಾಗಬೇಕಂದ್ರೆ ಬೆಳಗ್ಗೆ ಯಾವುದೇ ಆಹಾರ ಸೇವಿಸುವ ಮುನ್ನ ಜ್ಯೂಸ್ ರೀತಿಯಲ್ಲಿ ಸೇವಿಸೋದು ಉತ್ತಮ.
ಇದನ್ನೂ ಓದಿ : ಟೀ ಜೊತೆ ಸ್ನ್ಯಾಕ್ಸ್ ತಿನ್ನೋದ್ರಿಂದ ಇಷ್ಟೆಲ್ಲಾ ಸಮಸ್ಯೆಗಳಿವೆಯಾ ?
ಮಿಕ್ಸಿಯಲ್ಲಿ ಬೂದು ಕುಂಬಳಕಾಯಿಯನ್ನು ಹಾಕಿ ಸ್ವಲ್ಪ ನೀರನ್ನು ಹಾಕಿ ಮಿಕ್ಸಿ ಮಾಡಬೇಕು. ಆ ಜ್ಯೂಸ್ ನ್ನು 8 ಗಂಟೆ ಒಳಗೆ ಸೇವಿಸೋದು ಉತ್ತಮ . ಶೀತ ಪ್ರಕೃತಿಯವರು ಇದಕ್ಕೆ ಕಾಳುಮೆಣಸು ಅಥವಾ ನಿಂಬೆ ಹಾಕಿಯೂ ಸೇವಿಸಬಹುದು. ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿಯಲ್ಲಿ ಬೂದು ಕುಂಬಳಕಾಯಿಗೆ ಮಹತ್ವವಿದೆ . ದೃಷ್ಟಿ ತೆಗೆಯೋಕೆ ಅಥವಾ ಮನೆಯಲ್ಲಿ ಧನಾತ್ಮಕ ಶಕ್ತಿಗಾಗಿ ಬಳಕೆ ಮಾಡಗುತ್ತೆ. ಇದನ್ನು ನೋಡಿದ್ರೆ ಎಷ್ಟು ಪಾಸಿಟಿವ್ ಅಂಶ ಇದೆ ಅಂತ ಗೊತ್ತಾಗುತ್ತೆ. ಒಂದು ವೇಳೆ ಇದನ್ನು ನೀವು ಸೇವಿಸಿದ್ರೆ ಆಗುವ ಪರಿಣಾಮ ನೀವೆ ಯೋಚಿಸಿ.
ಇದನ್ನೂ ಓದಿ : ಸ್ನಾನ ಮಾಡಿದ ತಕ್ಷಣವೇ ಟವೆಲ್ ಸುತ್ತಿಕೊಳ್ಳಬೇಡಿ ! ಈ ಅಭ್ಯಾಸ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ
Panacea for All Diseases ash gourd in – Eating this way will not cause cancer