ಮಂಗಳವಾರ, ಏಪ್ರಿಲ್ 29, 2025
HomeBreakingParenting Tips : ನಿಮ್ಮ ಮಗುವಿನ ಬೆಳವಣಿಗೆ ಸರಿಯಾಗಿ ಆಗುತ್ತಿದೆಯೇ? MEANS ಸೂತ್ರ ಹೇಳುವುದಾದರೂ ಏನು?

Parenting Tips : ನಿಮ್ಮ ಮಗುವಿನ ಬೆಳವಣಿಗೆ ಸರಿಯಾಗಿ ಆಗುತ್ತಿದೆಯೇ? MEANS ಸೂತ್ರ ಹೇಳುವುದಾದರೂ ಏನು?

- Advertisement -

ಕರೋನಾ ಸಾಂಕ್ರಾಮಿಕವು ಜನಸಾಮಾನ್ಯರ ದಿನಚರಿಗಳನ್ನು(Lifestyle) ಬದಲಾಯಿಸಿದೆ. ವಿಶೇಷವಾಗಿ ಪೋಷಕರು(Parenting) ಆತಂಕವನ್ನು ಎದುರಿಸುತ್ತಿದ್ದಾರೆ. ತಮ್ಮ ಮಕ್ಕಳ ಬೆಳವಣಿಗೆಯ ಮೇಲೆ ಹೆಚ್ಚು ಚಿಂತಿತರಾಗಿದ್ದಾರೆ (Parenting Tips Is your child growing). ಅಬಾಟ್‌ ಮತ್ತು ಮಾಮ್ಸ್‌ಪ್ರೆಸ್ಸೊ ನಡೆಸಿದ ಸಮೀಕ್ಷೆಯಲ್ಲಿ ಭಾರತದಾದ್ಯಂತ 2,500 ಕ್ಕೂ ಹೆಚ್ಚು ತಾಯಂದಿರು ಮಕ್ಕಳ ಆಹಾರ ಮತ್ತು ದೈಹಿಕ ಚಟುವಟಿಕೆಯಲ್ಲಿನ ಬದಲಾವಣೆಯ ಮೇಲೆ ಹೆಚ್ಚು ಆತಂಕಗೊಂಡಿದ್ದಾರೆ ಎಂಬುದು ಎತ್ತಿ ತೋರಿಸುತ್ತದೆ. ದೈಹಿಕ ಚಟುವಟಿಕೆ ಮತ್ತು ಬದಲಾದ ಆಹಾರ ಪದ್ಧತಿಗಳು ಮಕ್ಕಳ ಆರೋಗ್ಯಕರ ಬೆಳವಣಿಗೆಯ ಮೇಲೆ ಪರಿಣಾಮ ಉಂಟುಮಾಡಿದೆ.

ಸಮೀಕ್ಷೆಯಿಂದ ತಿಳಿದುಬಂದ ವಿಷಯವೆಂದರೆ 68% ತಾಯಂದಿರು ತಮ್ಮ ಮಕ್ಕಳ ಆಹಾರದ ಆಯ್ಕೆಗಳು ಸಮಪರ್ಕವಾಗಿಲ್ಲ ಮತ್ತು 84% ತಾಯಂದಿರು ಸಾಂಕ್ರಾಮಿಕವು ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡಿದೆ ಮತ್ತು ಡಿಜಿಟಲ್‌ ತಂತ್ರಜ್ಞಾನಗಳ ಬಳಕೆ ಅಧಿಕ ಮಾಡಿದೆ ಎಂದು ಭಾವಿಸುತ್ತಿದ್ದಾರೆ.

ಭಾರತದಲ್ಲಿ ಬಹುತೇಕ ಎಲ್ಲವೂ ರೀ–ಓಪನ್‌ ಆಗುತ್ತಿದೆ. ಶಾಲೆ ಮತ್ತು ಕಛೇರಿಗಳು ಪುನರಾರಂಭಗೊಂಡಿವೆ. ನಿರೀಕ್ಷಿತ ಮಟ್ಟದಲ್ಲಿ ಸಾಮಾನ್ಯ ಸ್ಥಿತಿಗೆ ವೇಗವಾಗಿ ಮರಳುತ್ತಿದೆ. ಆದರೆ 70% ತಾಯಂದಿರು ತಮ್ಮ ಮಗುವಿಗೆ ಬಾಹ್ಯ ಪರಿಸರದಲ್ಲಿ ಸುರಕ್ಷಿತವಾಗಿರಲು ಬೇಕಾಗುವ ರೋಗ ನಿರೋಧಕ ಶಕ್ತಿ ಪ್ರಬಲವಾಗಿಲ್ಲ ಎಂದು ಭಾವಿಸಿದ್ದಾರೆ. ಆದ್ದರಿಂದ ಮಕ್ಕಳಲ್ಲಿ ಆರೋಗ್ಯಕರ ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸಲು ಪೌಷ್ಠಿಕಾಂಶ ತಜ್ಞರು MEANS ಎಂಬ ಮಾರ್ಗಸೂಚಿಯನ್ನು ಹೇಳಿದ್ದಾರೆ.

ಇದನ್ನೂ ಓದಿ : Dry Fruits : ನೀವು ಡ್ರೈ ಫ್ರುಟ್ಸ್‌ ಪ್ರಿಯರೇ? ಹಾಗಾದರೆ, ಡ್ರೈ ಫ್ರುಟ್ಸ್‌ ತಿನ್ನುವ ಸರಿಯಾದ ಕ್ರಮ ಇಲ್ಲಿದೆ ನೋಡಿ

M (ಮೆಶರಿಂಗ್‌) -ಬೆಳವಣಿಗೆಯ ಮಾಪನ ಮತ್ತು ಮೇಲ್ವಿಚಾರಣೆ
ಮಕ್ಕಳ ಬೆಳವಣಿಗೆಯನ್ನು ತಿಳಿದುಕೊಳ್ಳುವುದರ ಮೂಲಕ ಪೋಷಕರು ಮಕ್ಕಳಲ್ಲಿನ ಕೊರತೆಯನ್ನು ಗುರುತಿಸಬಹುದಾಗಿದೆ. ಇದರಿಂದ ಮಕ್ಕಳ ಮೇಲಾಗುವ ವ್ಯತಿರಿಕ್ತ ಪರಿಣಾಮವನ್ನು ತಡೆಗಟ್ಟಬಹುದಾಗಿದೆ.

E (ಈಟಿಂಗ್‌)-ಸರಿಯಾಗಿ ತಿನ್ನುವುದು
ಮಕ್ಕಳ ಸಮಗ್ರ ಬೆಳಣಿಗೆಗೆ ಪೋಶಕಾಂಶಯುಕ್ತ ಆಹಾರಗಳು ಅತಿ ಮುಖ್ಯ. ಇದು ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಬಲ್ಲದು. ದಿನದ ಆಹಾರವು ಬೇಳೆಕಾಳುಗಳು, ಹಾಲು, ಹಣ್ಣು, ತರಕಾರಿಗಳು, ಸಕ್ಕರೆ ಮತ್ತು ಫ್ಯಾಟ್‌ ಇವುಗಳಿಂದ ಸಮೃದ್ದವಾಗಿರುವಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ.

A (ಆಕ್ಟಿವಿಟಿ)-ಚಟುವಟಿಕೆ
ಚಟುವಟಿಕೆ ಮಕ್ಕಳ ಎಲುಬುಗಳ ಬೆಳವಣಿಗೆಗೆ ಅತಿ ಮುಖ್ಯ. ಇದು ಮಕ್ಕಳ ಸಂಪೂರ್ಣ ದೈಹಿಕ ಆರೋಗ್ಯ ಕಾಪಾಡುತ್ತದೆ. ಮತ್ತು ಮಕ್ಕಳಲ್ಲಿನ ಬೊಜ್ಜನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

N (ನ್ಯುಟರಿಂಗ್‌ ಆಂಡ್‌ ಡಿಸಿಪ್ಲೆನ್‌)-ಪೋಷಣೆ ಮತ್ತು ಶಿಸ್ತು
ಮಕ್ಕಳ ತಪ್ಪುಗಳಿಗೆ ಶಿಕ್ಷಿಸುವ ಬದಲು ಅವರ ಜೊತೆ ಪೋಷಕರು ಮುಕ್ತವಾಗಿ ಬೆರೆಯುವುದು ಉತ್ತಮ. ಇದು ಅವರ ಮಾನಸಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮಕ್ಕಳಿಗೆ ಶಿಸ್ತನ್ನು ರೂಢಿಸಿಕೊಳ್ಳುವಂತೆ ಮಾರ್ಗದರ್ಶನ ನೀಡುವುದು ಪೋಷಕರ ಜವಾಬ್ದಾರಿಯಾಗಿದೆ.

S (ಸ್ಲೀಪ್‌)-ನಿದ್ರೆ
ನಿದ್ರೆ ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಅತ್ಯಗತ್ಯ. ಮಕ್ಕಳು ಪ್ರತಿನಿತ್ಯ ನಿದ್ರೆಗೆ ಒಂದೇ ಸಮಯವನ್ನು ಪಾಲಿಸುವಂತೆ ಮಾಡಬೇಕು.

ಇದನ್ನೂ ಓದಿ : GST Price : ಜುಲೈ 18ರಿಂದ ದುಬಾರಿಯಾಗಲಿರುವ ದಿನಬಳಕೆ ವಸ್ತುಗಳು! ಯಾವುದು ಎಷ್ಟು ಹೆಚ್ಚಾಗಲಿದೆ ಗೊತ್ತಾ?

(Parenting Tips Is your child growing right and know the meaning of MEANS)

RELATED ARTICLES

Most Popular