ಸುದೀಪ್ ಅಭಿಮಾನಿಗಳಿಗೆ ಡಬ್ಬಲ್ ಧಮಾಕಾ…! ಸಿಹಿಸುದ್ದಿ ನೀಡಿದ ಅನೂಪ್ ಭಂಡಾರಿ…!!

ಸ್ಯಾಂಡಲ್ ವುಡ್ ನ ಬಹುನೀರಿಕ್ಷಿತ ಸಿನಿಮಾ ಫ್ಯಾಂಟಮ್ ಚಿತ್ರತಂಡದಿಂದ ಅಭಿಮಾನಿಗಳಿಗೆ ಡಬ್ಬಲ್ ಧಮಾಕಾ ಸಿಕ್ಕಿದೆ. ಒಂದಲ್ಲ ಎರಡೆರಡು ಸಿಹಿಸುದ್ದಿ ನೀಡಿದ್ದಾರೆ.

ಕಿಚ್ಚ್ ಸುದೀಪ್ ಹಾಗೂ ಅನೂಪ್ ಭಂಡಾರಿ ಜೊತೆಯಾಗಿ ನಿರ್ಮಿಸುತ್ತಿರುವ ಫ್ಯಾಂಟಮ್ ಚಿತ್ರತಂಡ ಜನವರಿ 21 ರಂದು ಮಹತ್ವದ ಸುದ್ದಿಯೊಂದನ್ನು ಪ್ರಕಟಿಸುವುದಾಗಿ ಹೇಳಿತ್ತು.

ಹೇಳಿದಂತೆ ಎರಡೆರಡು ಸುದ್ದಿಪ್ರಕಟಿಸಿರುವ ಚಿತ್ರತಂಡ ಚಿತ್ರದ ಹೆಸರನ್ನು ಬದಲಾಯಿಸುವ ಊಹೆಯನ್ನು ನಿಜಮಾಡಿದೆ. ಚಿತ್ರದ ಟೈಟಲ್ ನ್ನು ಫ್ಯಾಂಟಮ್ ನಿಂದ ವಿಕ್ರಾಂತ್ ರೋಣ ಎಂದು ಬದಲಾಯಿಸಿದೆ.

ಫ್ಯಾಂಟಮ್ ಚಿತ್ರದಲ್ಲಿ ಸುದೀಪ್ ಪಾತ್ರದ ಹೆಸರು ವಿಕ್ರಾಂತ್ ರೋಣ. ಆದರೆ ಇದೇ ಹೆಸರು ಹೆಚ್ಚು ಆಕರ್ಷಕವಾಗಿರೋದರಿಂದ ಚಿತ್ರತಂಡ ಇದೇ ಹೆಸರನ್ನೇ ಚಿತ್ರಕ್ಕೆ ಇಡಲು ನಿರ್ಧರಿಸಿದೆ.

ಇದರ ಜೊತೆ ಸ್ಯಾಂಡಲ್ ವುಡ್ ನಲ್ಲಿ 25 ವರ್ಷಗಳನ್ನು ಪೊರೈಸಿದ ಕಿಚ್ಚ್ ಸುದೀಪ್ ಅವರನ್ನು ಗೌರವಿಸುವ ಸಲುವಾಗಿ ಜ.31 ರಂದು ಪ್ರಪಂಚದ ಅತಿ ಎತ್ತರದ ಕಟ್ಟಡ ಖ್ಯಾತಿಯ ದುಬೈನ ಬುರ್ಜ್ ಖಲೀಫದ ಮೇಲೆ ಕಿಚ್ಚ್ ಸುದೀಪ್ ಪೋಟೋ ಹಾಕಲು ನಿರ್ಧರಿಸಲಾಗಿದೆ.

ಫ್ಯಾಂಟಮ್ ಚಿತ್ರದ ಟೈಟಲ್ ಬದಲಾವಣೆಯಾಗಿರುವುದರಿಂದ ಬದಲಾದ ಲೋಗೋವನ್ನು ಬುರ್ಜ್ ಖಲೀಫ್ ಕಟ್ಟಡದ ಮೇಲೆ ಅನಾವರಣಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

ಜನವರಿ 31 ರಂದು ಲೋಗೋ ಅನಾವರಣ ನಡೆಯಲಿದ್ದು, ಈ ಕಾರ್ಯಕ್ರಮ ಕಿಚ್ಚ್ ಕ್ರಿಯೇಷನ್ಸ್ ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್, ರಜನಿಕಾಂತ್ ಸೇರಿದಂತೆ ಮೇರು ನಟರನ್ನು ಹೊರತುಪಡಿಸಿದರೇ ಬೇರೆ ಯಾವುದೇ ನಟರ ಪೋಟೋ ಬುರ್ಜ್ ಖಲೀಫ ಕಟ್ಟಡದ ಮೇಲೆ ಹಾಕಲಾಗಿಲ್ಲ.

ಕನ್ನಡ ನಟರೊಬ್ಬರ ಪೋಟೋ ಈ ಕಟ್ಟಡದ ಮೇಲೆ ಹಾಕಲ್ಪಡುತ್ತಿರುವುದು ಇದೇ ಮೊದಲಾಗಿದ್ದು ಕರುನಾಡಿನ ಪಾಲಿಗೆ ಇದು ಐತಿಹಾಸಿಕ ಘಟನೆಯಾಗಿದೆ.

Comments are closed.