ರಾಮನಗರ: ನಾಟಕ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಬಂದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಕೈ ಕಾರ್ಯಕರ್ತರ ವಿರುದ್ಧ ಏಕವಚನದಲ್ಲಿ ಬೈಯ್ದಾಡಿದ ಘಟನೆ ತಡವಾಗಿ ವರದಿಯಾಗಿದೆ.

ಕಳೆದ ಮಂಗಳವಾರ ನಿಖಿಲ್ ಕುಮಾರಸ್ವಾಮಿ, ರಾಮನಗರದ ಚೀಲೂರು ಗ್ರಾಮಕ್ಕೆ ಭೇಟಿ ನೀಡಿದ್ದರು.ಗ್ರಾಮದಲ್ಲಿ ಪೌರಾಣಿಕ ನಾಟಕ ನಡೆದಿದ್ದು ಆ ವೇದಿಕೆ ಮೇಲೆ ನಿಖಿಲ್ ಕುಮಾರಸ್ವಾಮಿಯವರನ್ನು ಭಾಷಣಕ್ಕೆ ಆಹ್ವಾನಿಸಲಾಗಿತ್ತು.

ಈ ವೇಳೆ ಗ್ರಾಮಸ್ಥರ ಮನವಿ ಮೇರೆಗೆ ವೇದಿಕೆ ಏರಿದ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭಾಷಣ ಆರಂಭಿಸಿದ್ದರು ಎನ್ನಲಾಗಿದೆ. ಇದಕ್ಕೆ ಸ್ಥಳದಲ್ಲಿದ್ದ ಕೈ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೈಕಾರ್ಯಕರ್ತರ ಮಾತಿನಿಂದ ಮುಜುಗರಕ್ಕೊಳಗಾದ ನಿಖಿಲ್ ಕಾರ್ಯಕರ್ತರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು, ನಾನಿಲ್ಲಿ ರಾಜಕೀಯ ಮಾಡಲು ಬಂದಿಲ್ಲ.ಸಂಬಂಧ ಬೆಳೆಸಲು ಬಂದಿದ್ದೇನೆ ಎಂದಿದ್ದಾರೆ.
ಅಷ್ಟೇ ಅಲ್ಲ ನನ್ನ ತಂದೆ ತಾಯಿ ಈ ಜಿಲ್ಲೆಯ ಜೊತೆ ನಂಟು ಹೊಂದಿದ್ದಾರೆ. ಹೀಗಾಗಿ ಬಂದಿದ್ದೇನೆ.ನೀವೇ ಹೇಳಿ ನೀವಿಲ್ಲಿ ಏನು ಕಿತ್ತು ದಬ್ಬಾಕಿದ್ದೀರಾ ಎಂದು ಜೋರಾಗಿ ಪ್ರಶ್ನಿಸಿದ್ದಾನೆ.

ಇಲ್ಲಿರೋರು ನನ್ನ ಕುಟುಂಬದವರಿದ್ದಂತೆ ಅದಕ್ಕೆ ನಾನು ಮಾತನಾಡುತ್ತೇನೆ.ರಾಜಕೀಯ ಕ್ಕೆ ಬಂದಿಲ್ಲ ಎಂದು ಕಿರುಚಾಡಿದ್ದಾರೆ ಎನ್ನಲಾಗಿದೆ.

ಬಳಿಕ ತಾವು ಆವೇಶದಿಂದ ಮಾತನಾಡಿದ್ದಕ್ಕೆ ಗ್ರಾಮಸ್ಥರ ಬಳಿ ಕ್ಷಮೆಯಾಚಿಸಿದ ನಿಖಿಲ್, ನಾನು ಯುವಕ, ಬಿಸಿ ರಕ್ತ.ನಮಗೆ ಆವೇಶಾನೂ ಜಾಸ್ತಿ ಮತ್ತು ತಾಳ್ಮೆಯೂ ಇದೆ.ಇಂತಹದೊಂದು ಸನ್ನಿವೇಶ ನನ್ನಿಂದ ಸೃಷ್ಟಿಯಾಗಿದ್ದಕ್ಕೆ ಕ್ಷಮಿಸಿ ಎಂದು ಮನವಿಮಾಡಿದ್ದಾರೆ.

ಅಷ್ಟೇ ಅಲ್ಲಪೌರಾಣಿಕ ನಾಟಕ ಕಾರ್ಯಕ್ರಮ ಸರಿಯಾಗಿ ನಡೆಯಲಿ ಎಂದು ಹಾರೈಸಿದ್ದಾರೆ ಎನ್ನಲಾಗಿದೆ. ಇದೀಗ ಈ ಕ್ಲಿಪ್ಪಿಂಗ್ ವೈರಲ್ ಆಗಿದ್ದು ನಿಖಿಲ್ ವರ್ತನೆ ಚರ್ಚೆಗೆ ಗ್ರಾಸವಾಗಿದೆ.