- Advertisement -
ಮೈಸೂರು : ಬಿಗ್ ಬಾಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮೈಸೂರಿನ ಹೀನಕಲ್ ಸ್ಪೆಕ್ಟ್ರಾ ಕನ್ವನ್ಷನ್ ಹಾಲ್ ನಲ್ಲಿ ವಿವಾಹ ಸಮಾರಂಭ ನೆರವೇರಿತು. ಮೀನಾ ಲಗ್ನದಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ಗೌಡ ಹಾಗೂ ಶೆಟ್ಟಿ ಸಂಪ್ರದಾಯಗಳಲ್ಲಿ ಮದುವೆ ಶಾಸ್ತ್ರವನ್ನು ನೆರವೇರಿಸಲಾಗಿದೆ.

ವಿವಾಹ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಉದ್ಯಮಿಗಳು, ಸಂಬಂಧಿಕರು ಹಾಗೂ ಅಭಿಮಾನಿಗಳು ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.