ಸೋಮವಾರ, ಏಪ್ರಿಲ್ 28, 2025
HomeBreakingಹೈದ್ರಾಬಾದ್ ಬಳಿಕ ಮುಂಬೈ ಗೆ ಕೊಡಗಿನ ಕುವರಿ…! ಐಷಾರಾಮಿ ಪ್ಲ್ಯಾಟ್ ಖರೀದಿಸಿದ ರಶ್ಮಿಕಾ ಮಂದಣ್ಣ

ಹೈದ್ರಾಬಾದ್ ಬಳಿಕ ಮುಂಬೈ ಗೆ ಕೊಡಗಿನ ಕುವರಿ…! ಐಷಾರಾಮಿ ಪ್ಲ್ಯಾಟ್ ಖರೀದಿಸಿದ ರಶ್ಮಿಕಾ ಮಂದಣ್ಣ

- Advertisement -

ಮುಂಬೈ: ಸ್ಯಾಂಡಲ್ ವುಡ್ ಪೊಗರು ಬೆಡಗಿ ರಶ್ಮಿಕಾ ಮಂದಣ್ಣ ಚಂದನವನದ ಗಡಿ ದಾಟಿ ಕಾಲಿವುಡ್,ಟಾಲಿವುಡ್ ಹಾದು ಬಾಲಿವುಡ್ ತಲುಪಿದ್ದಾರೆ. ಅಷ್ಟೇ ಅಲ್ಲ ಬಾಲಿವುಡ್ ನಲ್ಲಿ ಐಷಾರಾಮಿ ಬಂಗಲೆ ಖರೀದಿಸಿ ಸುದ್ದಿಯಾಗಿದ್ದಾರೆ.

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸಧ್ಯ ತಮ್ಮ ಕೆರಿಯರ್ ನ ಉಚ್ಛ್ರಾಯ ಸ್ಥಿತಿಯಲ್ಲಿದ್ದಾರೆ. ಸಾಲು ಸಾಲು ಚಿತ್ರದಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಹೈದ್ರಾಬಾದ್ ಬಳಿಕ ಮುಂಬೈನಲ್ಲಿ ಮನೆ ಖರೀದಿಸಿದ್ದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಟಾಲಿವುಡ್ ನಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಮಂದಣ್ಣ ಇದರ ಜೊತೆ ಜೊತೆಗೆ ಬಾಲಿವುಡ್ ನಲ್ಲೂ ತಮ್ಮ ಕೆರಿಯರ್ ಶುರು ಮಾಡಿದ್ದಾರೆ. ಈಗಾಗಲೇ ಬಾಲಿವುಡ್ ನಲ್ಲಿ ಆಲ್ಬಮ್ ಸಾಂಗ್ ಗೆ ಹೆಜ್ಜೆ ಹಾಕಿ ಮನಗೆದ್ದಿರುವ ರಶ್ಮಿಕಾ ಮಿಷನ್ ಮಂಜು ಶೂಟಿಂಗ್ ಗೆ ಹಾಜರಾಗಿದ್ದಾರೆ.

ಟಾಲಿವುಡ್ ಸಿನಿಮಾಗಾಗಿ ಹೈದ್ರಾಬಾದ್ ನಲ್ಲಿ ಐಷಾರಾಮಿ ಮನೆ ಖರೀದಿಸಿದ್ದ ರಶ್ಮಿಕಾ ಮುಂಬೈನಲ್ಲಿ ಶೂಟಿಂಗ್ ಗಾಗಿ ಹೋದಾಗಲೆಲ್ಲ ಹೊಟೇಲ್ ನಲ್ಲೇ ಉಳಿದುಕೊಳ್ಳುತ್ತಿದ್ದರು. ಆದರೆ ಈಗ ಮಿಷನ್ ಮಂಜು ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ ಇದಾದ ಮೇಲೆ ಡೆಡ್ಲಿ ಸಿನಿಮಾದಲ್ಲೂ ನಟಿಸಲಿದ್ದಾರೆ.

ಹೀಗಾಗಿ ಅನಿವಾರ್ಯವಾಗಿ ಮುಂಬೈನಲ್ಲಿ ವಾಸ್ತವ್ಯಕ್ಕಾಗಿ ರಶ್ಮಿಕಾ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದಾರಂತೆ. ಡೆಡ್ಲಿ ಸಿನಿಮಾದಲ್ಲಿ ಅಮಿತಾಬ್ ಜೊತೆ ನಟಿಸುತ್ತಿರುವ ರಶ್ಮಿಕಾ ಇದಕ್ಕಾಗಿ ಹಿಂದಿ ಕೂಡ ಕಲಿಯುತ್ತಿದ್ದಾರಂತೆ.

ಮುಂಬೈನಲ್ಲಿ ರಶ್ಮಿಕಾ ಮಂದಣ್ಣ ಮನೆ ಖರೀದಿಸಿ ನೆಲೆಯಾಗುತ್ತಿದ್ದಂತೆ ಮತ್ತೆ ಕೊಡಗಿನ ಕುವರಿ ಸ್ಯಾಂಡಲ್ ವುಡ್ ಗೆ ಮರಳುತ್ತಾರೋ ಇಲ್ವೋ ಎಂಬ ಚರ್ಚೆ ಆರಂಭವಾಗಿದೆ. ಒಟ್ಟಿನಲ್ಲಿ ರಶ್ಮಿಕಾ ಹೊಸ ಮನೆ,ಹೊಸ ಕಾರು ಖರೀದಿಸಿ ಫುಲ್ ಜೋರಾಗಿ ಮುನ್ನಡೆಯುತ್ತಿರೋದಂತು ಸತ್ಯ.

RELATED ARTICLES

Most Popular