ನಿತ್ಯಭವಿಷ್ಯ : 26-02-2021

ಮೇಷರಾಶಿ
ಆರೋಗ್ಯದಲ್ಲಿ ಅಭಿವೃದ್ದಿ, ಶುಭಮಂಗಲ ಕಾರ್ಯಕ್ಕಾಗಿ ಓಡಾಟ, ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಆರ್ಥಿಕವಾಗಿ ಚೇತರಿಕೆ ಕಂಡು ಬಂದರೂ ಖರ್ಚುಗಳು ಚಿಂತೆಗೀಡು ಮಾಡಲಿದೆ, ನೆರೆ ಹೊರೆಯವರಲ್ಲಿ ಉತ್ತಮ ಬಾಂಧವ್ಯ.

ವೃಷಭರಾಶಿ
ಮನೆಯಲ್ಲಿ ಕಿರಿಕಿರಿ ವಾತಾವರಣ, ದೂರ ಪ್ರಯಾಣ ಸಾಧ್ಯತೆ, ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ, ಆರ್ಥಿಕವಾಗಿ ಅಭಿವೃದ್ದಿ ಕಂಡುಬರಲಿದೆ, ವೃತ್ತಿಯಲ್ಲಿ ಮುನ್ನಡೆ, ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಾಗಿರಿ, ದಿನಾಂತ್ಯಕ್ಕೆ ಶುಭಸುದ್ದಿ.

ಮಿಥುನರಾಶಿ
ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪ್ರಗತಿ, ಮಕ್ಕಳ ವಿಚಾರದಲ್ಲಿ ನೆಮ್ಮದಿ, ಅಡೆತಡೆಗಳ ನಡುವಲ್ಲೇ ಕಾರ್ಯಸಾಧನೆ, ಸಾಂಸಾರಿಕವಾಗಿ ನೆಮ್ಮದಿ, ಆಸ್ತಿ ವಿವಾದವೊಂದು ಬಗೆ ಹರಿಯಲಿದೆ, ಕಂಕಣ ಬಲ.

ಕಟಕರಾಶಿ
ರಾಜಕಾರಣಿಗಳಿಗೆ ಉತ್ತಮ ಸ್ಥಾನಮಾನ ಲಭ್ಯವಾಗಲಿದೆ, ದಕ್ಷತೆ ಹಾಗೂ ಪ್ರಯಾಣಿಕತೆಯಿಂದ ವೃತ್ತಿರಂಗದಲ್ಲಿ ಪ್ರಶಂಸೆ, ಇಚ್ಚಿತ ಕಾರ್ಯ ಸಿದ್ದಿ, ವೈವಾಹಿಕ ಮಾತುಕತೆಯಲ್ಲಿ ಯಶಸ್ಸು, ರಾಜಕಾರಣಿಗಳಿಗೆ ಬೆಂಬಲ.

ಸಿಂಹರಾಶಿ
ಅಧಿಕ ಖರ್ಚು ಇದ್ದರೂ ಆರ್ಥಿಕ ಚೇತರಿಕೆಯಿಂದ ನೆಮ್ಮದಿ, ಒಳಿತಾಗುವ ಮುನ್ಸೂಚನೆ ಲಭಿಸಲಿದೆ, ವಿರೋಧ, ಭಿನ್ನಾಪ್ರಾಯಗಳು ಹಂತ ಹಂತವಾಗಿ ಪರಿಹಾರವಾಗಲಿದೆ, ರಾಹುಬಲ ಚೆನ್ನಾಗಿದೆ, ವೃತ್ತಿರಂಗ, ವ್ಯವಹಾರದಲ್ಲಿಯೂ ಅಭಿವೃದ್ದಿ.

ಕನ್ಯಾರಾಶಿ
ಆತ್ಮವಿಶ್ವಾಸದಿಂದ ಕಾರ್ಯರಂಗದಲ್ಲಿ ಗೆಲುವು, ಯೋಚಿಸಿ ಮುಂದಡಿಯಿಟ್ಟರೆ ಯಶಸ್ಸು, ಗೃಹ ನಿರ್ಮಾಣದ ಕಾರ್ಯಕ್ಕೆ ಚಾಲನೆ, ಮೇಲಾಧಿಕಾರಿಗಳಿಂದ ಪ್ರಶಂಸೆ, ಸಾಂಸಾರಿಕವಾಗಿ ನೆಮ್ಮದಿ, ಯಾವುದೇ ಕೆಲಸಕ್ಕೂ ಮೊದಲು ಯೋಚಿಸಿ.

ತುಲಾರಾಶಿ
ಪ್ರಾಮಾಣಿಕತೆಗೆ ತಕ್ಕ ಪ್ರತಿಫಲ, ಆತ್ಮವಿಶ್ವಾಸದಿಂದ ಮುನ್ನಡೆಯಿರಿ, ಸಹೋದ್ಯೋಗಿಗಳ ಮೇಲೆ ಅಪನಂಬಿಕೆ ಬೇಡ, ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ, ನಿರಾಸೆಯ ಮನೋಭಾವನೆ ಬೇಡ, ಎಚ್ಚರವಾಗಿರಿ.

ವೃಶ್ಚಿಕರಾಶಿ
ಸಾಮಾಜಿಕವಾಗಿ ಸಮ್ಮಾನ ದೊರೆಯಲಿದೆ, ದೈವಾನುಗ್ರಹ ನಿಮ್ಮ ಪರವಾಗಿದೆ, ಸಂಬಂಧಿಗಳ ಸಹಕಾರದಿಂದ ಕಾರ್ಯ ಸಿದ್ದಿ, ಆದಾಯದಲ್ಲಿ ಅಭಿವೃದ್ದಿ, ಚಿನ್ನಾಭರಣ ಖರೀದಿ ಯೋಗ, ಸ್ಥಿರಾಸ್ತಿ ಮಾರಾಟದಿಂದ ನೆಮ್ಮದಿ, ವಿವಾಹ ಭಾಗ್ಯ.

ಧನುರಾಶಿ
ಮನೆಯಲ್ಲಿ ಮಂಗಲ ಕಾರ್ಯದ ಬಗ್ಗೆ ಚಿಂತನೆ, ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ, ದೂರದ ಊರುಗಳಿಗೆ ಪ್ರಯಾಣ, ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಕಿರಿಕಿರಿ, ಯಾರನ್ನೂ ಕೀಳಾಗಿ ನೋಡಬೇಡಿ, ಪ್ರೇಮಿಗಳಿಗೆ ಶುಭದಿನ.

ಮಕರರಾಶಿ
ಕೆಲಸ ಕಾರ್ಯಗಳಲ್ಲಿ ತೊಡಕು, ಧನಾಗಮನವಿದ್ದರೂ ಖರ್ಚುಗಳು ಅಧಿಕವೆನಿಸಲಿದೆ, ಅವಿವಾಹಿತರಿಗೆ ವಿವಾಹ ಯೋಗ, ವಾಹನ ಸಂಚಾರದಲ್ಲಿ ಎಚ್ಚರವಿರಲಿ, ಮನಸಿಗೆ ಬೇಸರ, ಆತಂಕ, ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ, ಸಮಸ್ಯೆಯನ್ನು ಎದುರಿಸಿ ಗೆಲುವಿದೆ.

ಕುಂಭರಾಶಿ
ಆರ್ಥಿಕವಾಗಿ ನೆಮ್ಮದಿಯ ದಿನ, ವಾಹನ ಖರೀದಿ ಯೋಗ, ಅಧಿಕ ಖರ್ಚು, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಬಹುದಿನದ ಆಸೆಯೊಂದು ಈಡೇರಲಿದೆ, ಸ್ನೇಹಿತರಿಂದ ಸಹಕಾರ, ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಾಗಿರಿ.

ಮೀನರಾಶಿ
ವಾಹನ ಖರೀದಿ ಯೋಗ, ಪ್ರಾಮಾಣಿಕ ಪ್ರಯತ್ನದಿಂದ ಕಾರ್ಯಾನೂಕೂಲ, ಅವಿವಾಹಿತರಿಗೆ ಹೊಸ ಸಂಬಂಧಗಳು ಕೂಡಿಬರಲಿದೆ, ಗುತ್ತಿಗೆದಾರರಿಗೆ ಹೆಚ್ಚಿನ ಲಾಭ, ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಲು ಸಕಾಲ, ಹೊಸ ಉತ್ಸಾಹ ಕಂಡುಬರಲಿದೆ.

Comments are closed.