ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ ಆರ್ಬಿಐ…!

0

ನವದೆಹಲಿ : ಜನರ ಆರ್ಥಿಕ ಸಂಕಷ್ಟ ಆರಿತು ಈಗಾಗಲೇ ಬ್ಯಾಂಕ್ ಖಾತೆಗಳ ಆನ್ ಲೈನ್ ಹಣ ವರ್ಗಾವಣೆಯ ಮೇಲಿನ ಶುಲ್ಕ ಕಡಿತಗೊಳಿಸಿದ್ದ ಆರ್ಬಿಐ ಇದೀಗ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ದಿನದ 24 ಗಂಟೆಯೂ ಆರ್.ಟಿ.ಜಿಎಸ್ ಸೌಲಭ್ಯ ಪಡೆದುಕೊಳ್ಳುವ ಅವಕಾಶ ಕಲ್ಪಿಸಿದೆ.

ಆರ್ಬಿಐ ಗರ್ವನರ್ ಶಕ್ತಿದಾಸ್ ಗುಪ್ತಾ ಈ ವಿಚಾರವನ್ನು ಹಂಚಿಕೊಂಡಿದ್ದು, ಈ ಸೌಲಭ್ಯ ಡಿಸೆಂಬರ್ 1 ರಿಂದ ಲಭ್ಯವಾಗಲಿದೆ. ಇದರಿಂದ ದಿನದ 24 ಗಂಟೆಗಳಲ್ಲೂ ಆರ್ಟಿಜಿಎಸ್ ಮೂಲಕ ಹಣ ವರ್ಗಾವಣೆಯ ಸೌಲಭ್ಯ ಜನರಿಗೆ ಲಭ್ಯವಾಗಲಿದೆ.

ಪ್ರಧಾನಿಮೋದಿ ಅವರ ಆರ್ಥಿಕ ಸಲಹಾ ಸಮಿತಿ ಸದಸ್ಯರಾದ ಅಶಿಮಾ ಗೋಯಲ್, ಆರ್ಥಿಕ ಸಂಶೋಧನಾ ರಾಷ್ಟ್ರೀಯ ಕೌನ್ಸಿಲ್ ಹಿರಿಯ ಸಲಹೆಗಾರ ಶಶಾಂಕ ಭಿಡೆ ಸೇರಿದಂತೆ ಹಲವು ತಜ್ಞರ ಜೊತೆಗಿನ ಸಭೆ ಬಳಿಕ ಆರ್ಬಿಐ ಗೌವರ್ನರ್ ಈ ಆದೇಶ ಹೊರಡಿಸಿದ್ದಾರೆ.

ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್ ಮೂಲಕ ಗ್ರಾಹಕರು 2 ಲಕ್ಷ ರೂಪಾಯಿವರೆಗಿನ ಹಣ ಹಾಗೂ ಆರ್ಟಿಜಿಎಸ್ ಮೂಲಕ 2 ಲಕ್ಷಕ್ಕಿಂತ ಅಧಿಕ ಮೊತ್ತದ ಹಣ ವರ್ಗಾವಣೆಗೆ ಅವಕಾಶವಿದೆ. ಆದರೆ ಇಲ್ಲಿಯವರೆಗೆ ಬ್ಯಾಂಕ್ ಅವಧಿಯಲ್ಲಿ ಮಾತ್ರ ಆರ್ಟಿಜಿಎಸ್ ಬಳಕೆಗೆ ಅವಕಾಶವಿತ್ತು. ಈಗ ದಿನದ 24 ಗಂಟೆಯೂ ಬಳಕೆಗೆ ಅವಕಾಶ ನೀಡಲಾಗಿದೆ.

ಇದರಿಂದ ಹಣಕಾಸು ವ್ಯವಹಾರ ಸಂಪೂರ್ಣ ಡಿಜಿಟಲೀಕರ ಹಾಗೂ ಆನ್ ಲೈನ್ ವ್ಯವಹಾರಗಳಿಗೆ ಅನುಕೂಲವಾಗಲಿದ್ದು, ಈ ಕಾರಣಕ್ಕಾಗಿಯೇ ಆರ್ಬಿಐ ಇಂತಹದೊಂದು ಪ್ರಯತ್ನ ಆರಂಭಿಸಲು ಮುಂದಾಗಿದೆ ಎಂದು ಶಕ್ತಿಕಾಂತ್ ದಾಸ್ ವಿವರಣೆ ನೀಡಿದ್ದಾರೆ.

Leave A Reply

Your email address will not be published.