ಆರ್.ಆರ್.ನಗರ ಕಾಂಗ್ರೆಸ್ ಅಭ್ಯರ್ಥಿ ವಿದ್ಯಾರ್ಹತೆ ಕಂಡು ಬೆಚ್ಚಿಬಿದ್ದ ಜನರು….!

0

ಚುನಾವಣೆ ಅನ್ನೋದು ಜಿದ್ದಾಜಿದ್ದಿನ ಹೋರಾಟದ ಜೊತೆಗೆ ಕೆಲವೊಮ್ಮೆ ಎಡವಟ್ಟುಗಳ ಮೂಲಕವೂ ಸುದ್ದಿಯಾಗುತ್ತೆ. ಇದೇ ಮೊದಲ ಬಾರಿಗೆ ಚುನಾವಣೆಯ ರಣಾಂಗಣಕ್ಕೆ ಧುಮುಕಿರುವ ಆರ್.ಆರ್.ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಇಂತಹದೊಂದು ಎಡವಟ್ಟಿನ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ನಗೆಪಾಟಲಿಗಿಡಾಗಿದ್ದಾರೆ.

ಬಹುದೊಡ್ಡ ರಾಜಕೀಯ ಲೆಕ್ಕಾಚಾರದ ಫಲವಾಗಿ ಕಾಂಗ್ರೆಸ್ ನಿಂದ  ಆರ್.ಆರ್.ನಗರದ ಚುನಾವಣಾ ಟಿಕೇಟ್ ಗಿಟ್ಟಿಸಿಕೊಂಡ ದಿ.ಐಎಎಸ್ ಅಧಿಕಾರಿ ಪತ್ನಿ ಕುಸುಮಾ ಹನುಮಂತರಾಯಪ್ಪ ಫುಲ್ ಜೋಶ್ ನಲ್ಲಿ ತಮ್ಮ ಪ್ರೊಫೈಲ್ ಸಿದ್ಧಪಡಿಸಿದ್ದಾರೆ. ಆದರೆ ಈ ಪ್ರೊಫೈಲ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕುಸುಮಾ ಮಾಡಿರೋ ತಪ್ಪು ನೋಡಿ ಜನ ನಗ್ತಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಸುಮಾ ಹನುಮಂತರಾಯಪ್ಪನವರ ಶೈಕ್ಷಣಿಕ ಹಿನ್ನೆಲೆ ಎಂಬ ತಲೆಬರಹದಡಿ ಎಲ್ಲ ವಿವರ ಮುದ್ರಿಸಲಾಗಿದ್ದು, ಇದರಲ್ಲಿ 2008 ರಲ್ಲಿ ಬೋಸ್ಟನ್ ವಿವಿಯಿಂದ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಎಂಎಸ್ ಎಂದು ಬರೆಯಲಾಗಿದೆ.

ಅದರ ಕೆಳಭಾಗದಲ್ಲಿ 2010 ರಲ್ಲಿ ಬೆಂಗಳೂರಿನ ಡಾ.ಅಂಬೇಡ್ಕರ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಬಿಇ ಪದವಿ ಎಂದು ನಮೂದಿಸಲಾಗಿದೆ. ಬಿಇ ಪದವಿ ಬಳಿಕ ಎಂಎಸ್ ಮಾಡೋದು ಕ್ರಮ. ಆದರೆ ಕುಸುಮಾ ಮಾತ್ರ ಎಂಎಸ್ ಬಳಿಕ ಬಿಇ ಮಾಡಿದ್ದಾರೆ. ಇದು ಹೇಗೆ ಸಾಧ್ಯ. ಇಷ್ಟು ಚಿಕ್ಕವಿಚಾರವನ್ನೆ ಸರಿಯಾಗಿ ನಮೂದಿಸಲಾಗದ ಇವರೆಲ್ಲ ಜನಪ್ರತಿನಿಧಿಯಾಗಿ ಅದೇನು ಸಾಧನೆ ಮಾಡ್ತಾರೋ ಅಂತ ನೆಟ್ಟಿಗರು ಟೀಕಿಸ್ತಿದ್ದಾರೆ.

Leave A Reply

Your email address will not be published.