ಛತ್ತೀಸ್ ಗಢ : ಸ್ಪೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಅವರ ಅಬ್ಬರದ ಆಟದ ನೆರವಿನಿಂದ ರೋಡ್ ಸೇಪ್ಟಿ ಸೀರಿಸ್ ನಲ್ಲಿ ಬಾಂಗ್ಲಾದೇಶ ವಿರುದ್ದ ಭರ್ಜರಿ 10 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲ ದೇಶ ತಂಡಕ್ಕೆ ಆರಂಭಿಕರು ಉತ್ತಮ ಜೊತೆಯಾಟ ನೀಡಿದ್ರು 49 ರನ್ ಗಳಿಸಿ ಆಟವಾಡುತ್ತಿದ್ದ ನಿಜಾಮುದ್ದೀನ್ ಗೆ ಯುವರಾಜ್ ಸಿಂಗ್ ಪೆವಿಲಿಯನ್ ಹಾದಿ ತೋರಿಸಿದ್ರು. ನಂತರ ಪ್ರಗ್ಯಾನ್ ಓಜಾ, ಯುವರಾಜ್ ಸಿಂಗ್, ವಿನಯ್ ಕುಮಾರ್ ದಾಳಿಗೆ ತತ್ತರಿಸಿದ ಬಾಂಗ್ಲಾ 19.4 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 109 ರನ್‌ಗಳಿಸಿತು.
ನಂತರ ಬ್ಯಾಟಿಂಗ್ ಗೆ ಇಳಿದ ಭಾರತ ಲೆಜೆಂಡ್ಸ್ ಪರ ವೀರೇಂದ್ರ ಸೆಹವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಭರ್ಜರಿ ಆಟಕ್ಕೆ ಮುಂದಾದ್ರು. ಸೆಹವಾಗ್ 35 ಎಸೆತಗಳಲ್ಲಿ 10 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 80 ರನ್ ಸಿಡಿಸಿದ್ರೆ, ಸಚಿನ್ ತೆಂಡೂಲ್ಕರ್ 26 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 33 ರನ್ ಗಳಿಸುವ ಮೂಲಕ ವಿಕೆಟ್ ನಷ್ಟವಿಲ್ಲದೆ ಗೆಲುವಿನ ದಡ ಸೇರಿಸಿದ್ದಾರೆ.
