ಯಶ್ ಬಾಲಿವುಡ್ ಎಂಟ್ರಿ ಬಹುತೇಕ‌ಖಚಿತ…! ಮತ್ತೊಂದು ಪ್ಯಾನ್ ಇಂಡಿಯಾ ಆಕ್ಷ್ಯನ್ ಮೂವಿಲೀ ರಾಕಿಬಾಯ್….!!

ಸದ್ಯ ಭಾರತದ ಸಿನಿ ಜಗತ್ತು ಕಾಯುವಂತೆ ಮಾಡಿರೋ ಸಿನಿಮಾ ಕೆಜಿಎಫ್-೨. ಇದರಷ್ಟೇ ಕುತೂಹಲ ಮೂಡಿಸಿರುವ ಇನ್ನೊಂದು ಸಂಗತಿ ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರ. ನೆಕ್ಸ್ಟ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಹುತೇಕ ಖಚಿತ ಎನ್ನಲಾಗ್ತಿದ್ದು ಇದಕ್ಕಾಗಿ ಯಶ್ ಬಾಲಿವುಡ್ ಅಂಗಳಕ್ಕೆ ಹಾರಲಿದ್ದಾರೆ.

ಬಾಲಿವುಡ್ ನ ಹಿರಿಯ ನಿರ್ಮಾಪಕ ವಿಷ್ಣುವರ್ಧನ್ ಇಂದೂರಿ ಜೊತೆ ಯಶ್ ಕೈಜೋಡಿಸೋದು ಬಹುತೇಕ ಫೈನಲ್ ಆಗಿದೆ. ಈಗಾಗಲೇ ವಿಷ್ಣುವರ್ಧನ್ ಹಾಗೂ ಯಶ್ ನಡುವೆ ಎರಡು ಸುತ್ತಿನ ಮಾತುಕತೆ ನಡೆದಿದೆ.

ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನ ಆಕ್ಷ್ಯನ್ ಓರಿಯಂಟೆಡ್ ಚಿತ್ರವೊಂದನ್ನು ನಿರ್ಮಿಸಲು ವಿಷ್ಣುವರ್ಧನ್ ಇಂದೂರಿ ಮನಸ್ಸು ಮಾಡಿದ್ದಾರೆ. ಇದಕ್ಕೆ ಯಶ್ ಕೂಡ ಆಸಕ್ತಿ ತೋರಿಸಿದ್ದಾರೆ. ಇನ್ನು ಅಧಿಕೃತವಾಗಿ ಮಾತುಕತೆ ಹಾಗೂ ಸೈನ್ ಮಾಡೋದು ಬಾಕಿ‌ ಇದೆ. ಆ ಬಳಿಕ ಸುದ್ದಿ ಅಧಿಕೃತಗೊಳ್ಳಲಿದೆ.


ಕೆಜಿಎಫ್-೨ ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಹಲವು ಕನ್ನಡ,ತೆಲುಗು ಹಾಗೂ ಬಾಲಿವುಡ್‌ ನಿರ್ದೇಶಕರನ್ನು ವಿಷ್ಣುವರ್ಧನ್ ಸಂರ್ಪಕಿಸಿದ್ದು ಹಲವು ನಿರ್ದೇಶಕರ ಸಮಾಗಮದಲ್ಲಿ ಚಿತ್ರ ತೆರೆಗೆ ಬರಲಿದೆ.

ಬೃಹತ ಬಜೆಟ್ ನ ಮತ್ತೊಂದು ಅದ್ದೂರಿ ಸಿನಿಮಾ ನಿರ್ಮಿಸುವ ವಿಷ್ಣು ಕನಸಿಗೆ ಯಶ್ ಕೈಜೋಡಿಸಿದ್ದು ಅಭಿಮಾನಿಗಳಿಗೆ ಖುಷಿ ತಂದಿದ್ದು ಎಲ್ಲ ಅಂದುಕೊಂಡಂತೆ ಆದಲ್ಲಿ ಯಶ್ ಕೆಜಿಎಫ್-೨ ರಿಲೀಸ್ ವೇಳೆಯೇ ತಮ್ಮ ಮುಂದಿನ ಅದ್ದೂರಿ ಪ್ರೊಜೆಕ್ಟ್ ಅನೌನ್ಸ್ ಮಾಡೋ ಸಾಧ್ಯತೆ ಇದೆ.

ಯಶ್ ರಾಕಿ ಬಾಯ್ ಆಗಿ ಮಿಂಚಿರುವ ಕೆಜಿಎಫ್-೨ ಜುಲೈ ೧೬ ರಂದು ಕನ್ನಡ,ತೆಲುಗು,ತಮಿಳ,ಮಲೆಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿದ್ದು ಸಂಜಯ್ ದತ್ತ,ರವೀನಾ ಟಂಡನ್,ಶ್ರೀನಿಧಿ ಶೆಟ್ಟಿ ಹಾಗೂ ಪ್ರಕಾಶ್ ರಾಜ್ ನಟಿಸಿದ್ದಾರೆ.

Comments are closed.