2 ಸಾವಿರದ ನೋಟು ಕೊಟ್ಟು ವೋಟರ್ ಐಡಿ ಕೇಳ್ತಾರೆ…! ಮುನಿರತ್ನ ಗೆ ಶಾಸಕ ಜಮೀರ್ ಅಹ್ಮದ್ ಟಾಂಗ್…!!

ಬೆಂಗಳೂರು: ಆರ್.ಆರ್.ನಗರ ಬೈ ಎಲೆಕ್ಷನ್ ಅಖಾಡ್ ರಂಗೇರಿದ್ದು, ಒಂದು ಕಾಲದ ಕಾಂಗ್ರೆಸ್ ನಾಯಕ ಮುನಿರತ್ನ ಹಾಗೂ ಈಗಿನ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ನಡುವೆ ನೇರ ಹಣಾಹಣಿ ನಡೆಯೋ ಮುನ್ಸೂಚನೆ ಇದೆ. ಈ ಮಧ್ಯೆ ಕಾಂಗ್ರೆಸ್ ನಾಯಕರು ಮುನಿರತ್ನ ವಿರುದ್ಧ ಮುಗಿಬಿದ್ದಿದ್ದು, ಶಾಸಕ ಜಮೀರ್ ಮುನಿರತ್ನ ವೋಟರ್ ಐಡಿ ಹಗರಣ ಉಲ್ಲೇಖಿಸಿ ಟಾಂಟ್ ನೀಡಿದ್ದಾರೆ.

ಪ್ರಸ್ತುತ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಾಂಗ್ರೆಸ್ ನಲ್ಲಿದ್ದಾಗ ನಡೆದಿದ್ದ ವೋಟರ್ ಐಡಿ ಹಗರಣವನ್ನು ಮತ್ತೆ ಉಲ್ಲೇಖಿಸಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್, 2 ಸಾವಿರದ ನೋಟು ನೀಡಿ ನಿಮ್ಮ ವೋಟರ್ ಐಡಿ ಕೇಳ್ತಾರೆ. ಅಂತಹವರೂ ಇದ್ದಾರೆ. ಯಾರಿ ಗೂ ನಿಮ್ಮ ವೋಟರ್ ಐಡಿ ನೀಡಬೇಡಿ ಎನ್ನುವ ಮೂಲಕ ಮುನಿರತ್ನ ಕಾಲೆಳೆದಿದ್ದಾರೆ.

ಆರ್.ಆರ್.ನಗರ ಮಾರುಕಟ್ಟೆ ಭಾಗದಲ್ಲಿ ಕಾಂಗ್ರೆಸ್ ಪರ ಪ್ರಚಾರ ಕೈಗೊಂಡ ಜಮೀರ್ ಅಲ್ಲಿನ ಮಹಿಳಾ ವ್ಯಾಪಾರಿಗಳನ್ನು ಉದ್ದೇಶಿಸಿ ಈ ಮಾತನ್ನಾಡಿದ್ದು, ಯಾರೇ ಕೇಳಿದ್ರೂ ನಿಮ್ಮ ವೋಟರ್ ಐಡಿ ಮಾರಬೇಡಿ ಅಂತ ಮತದಾರರಿಗೆ ಕಿವಿಮಾತು ಹೇಳಿದ್ದಾರೆ. ಅಲ್ಲದೇ ಮುನಿರತ್ನ  ಹಣ ನೀಡಿ ಮತದಾರರ ಗುರುತಿನ ಪತ್ರ ಖರೀದಿಸಿದ್ದರೂ ಅಂತ ಪರೋಕ್ಷವಾಗಿ ಹೇಳಿದ್ದಾರೆ.

ಇದಕ್ಕೂ ಮೊದಲು ಮಾತನಾಡಿದ್ದ ಜಮೀರ್,ಕಾಂಗ್ರೆಸ್ ನ ಮುಂದಿನ ಸಿಎಂ ಸಿದ್ಧರಾಮಯ್ಯ ಎನ್ನುವ ಮೂಲಕ ಮೂಲ ಕಾಂಗ್ರೆಸ್ಸಿಗರ ಬಣಕ್ಕೆ ಟಾಂಗ್ ನೀಡಿದ್ದರು. ಆರ್.ಆರ್.ನಗರ ಚುನಾವಣೆ ಕಣಕ್ಕೆ ಮುನಿರತ್ನ ಬಿಜೆಪಿಯಿಂದ ಸ್ಪರ್ಧಿಸುತ್ತಿರುವಂತೆ ಕಾಂಗ್ರೆಸ್ ನಾಯಕರು ಮುನಿರತ್ನ ವಿರುದ್ಧ ಮುಗಿಬಿದ್ದಿದ್ದು, ಸಿದ್ಧರಾಮಯ್ಯ, ಡಿಕೆಶಿ ಸೇರಿದಂತೆ ಎಲ್ಲ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಮುನಿರತ್ನ ಕ್ರಿಮಿನಲ್ ಎಂಬಂತೆ ಬಿಂಬಿಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ  ಬಿಜೆಪಿ ರಾಜ್ಯ ಉಸ್ತುವಾರಿ ಸಿ.ಟಿ.ರವಿ, ಮುನಿರತ್ನ ನಿಮ್ಮ ಪಕ್ಷದಲ್ಲಿ ಇದ್ದರೇ ಸಂಭಾವಿತರು. ನಮ್ಮ ಪಕ್ಷಕ್ಕೆ ಬಂದಾಗ ಮಾತ್ರ ಕ್ರಿಮಿನಲ್ ನಂತೆ ಕಾಣುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಆರ್. ಆರ್. ನಗರ ಚುನಾವಣಾ ಕಣ ಕೊನೆಕ್ಷಣದ ಪರಸ್ಪರ ವಾಗ್ದಾಳಿಗಳಿಂದ ರಂಗೇರುತ್ತಿದ್ದು, ವಿಜಯಲಕ್ಷ್ಮಿ ಯಾರ ಕೈಹಿಡಿಯಲಿದ್ದಾಳೆ ಕಾದು ನೋಡಬೇಕಿದೆ.

Comments are closed.