ನೋಡು ಶಿವ ಅಂತ ಕುಣಿದ್ರು ಮೇಘಾ ಶೆಟ್ಟಿ…! ಅಲ್ಬಂಸಾಂಗ್ ನಲ್ಲಿ ಅನುಸಿರಿಮನೆ ಬೋಲ್ಡ್ ಡ್ಯಾನ್ಸ್ ಗೆ ಮನಸೋತ ಪ್ರೇಕ್ಷಕರು…!!

ಜೊತೆ ಜೊತೆಯಲಿ ಅಂತ ಅನಿರುದ್ಧ ಜೊತೆ ಕನ್ನಡ ಕಿರುತೆರೆ ಲೋಕಕ್ಕೆ ಬಂದ ಕರಾವಳಿ ಬೆಡಗಿ ಮೇಘಾ ಶೆಟ್ಟಿ ಮೊದಲನೇ ಸಿರೀಯಲ್ ನಲ್ಲೇ ಭರವಸೆ ಮೂಡಿಸಿದ ಪ್ರತಿಭೆ. ಒಂದು ಧಾರಾವಾಹಿಯಿಂದಲೇ ಸ್ಯಾಂಡಲ್ ವುಡ್ ಹಾಗೂ ಅಲ್ಬಂ ಸಾಂಗ್ ಗೂ ಎಂಟ್ರಿ ಕೊಟ್ಟ ಮೇಘಾ ಶೆಟ್ಟಿ ನೋಡು ಶಿವ ಅಂತ ಬೋಲ್ಡಾಗಿ ಮೈಬಳುಕಿಸಿ ವೀಕ್ಷಕರ ಮನಗೆದ್ದಿದ್ದಾರೆ.

ಕನ್ನಡದ ರ್ಯಾಪರ್ ಚಂದನ ಶೆಟ್ಟಿ ಸಂಗೀತ ಸಂಯೋಜಿಸಿ ಕುಣಿದಿರುವ ನೋಡು ಶಿವ ಅಲ್ಬಂ ಸಾಂಗ್ ರಿಲೀಸ್ ಆಗಿದ್ದು,  ಯೂಟ್ಯೂಬ್ ನಲ್ಲಿ ದಾಖಲೆಯ ವೀವ್ಸ್ ಪಡೆದುಕೊಳ್ಳುತ್ತಿದೆ. ಎಂಕೆ ಆರ್ಟ್ಸ್ ಲಾಂಛನದಲ್ಲಿ ಮೋನಿಕಾ ಕಲ್ಲೂರಿ ನಿರ್ಮಿಸಿರುವ ಈ ಅದ್ದೂರಿ ಅಲ್ಬಂ ಸಾಂಗ್ ನಲ್ಲಿ ಮೇಘಾ ಶೆಟ್ಟಿ ಹೊಸ ಗೆಟಪ್ ನಲ್ಲಿ ಮಿಂಚಿದ್ದಾರೆ.

ಸುಮಿತ್ ಎಂಕೆ ಜೊತೆ ಸಖತ್ ಮಾಡರ್ನ್ ಡ್ರೆಸ್ ಹಾಗೂ ಲುಕ್ ನಲ್ಲಿ ಮೈಬಳುಕಿಸಿ ಕುಣಿದ ಮೇಘಾ ಶೆಟ್ಟಿ ನೋಡಿದ ಪ್ರೇಕ್ಷಕರು ಸದಾ ಗೌರಮ್ಮನಂತೆ ಕಾಣಿಸಿಕೊಳ್ಳೋ ಅನು ಸಿರಿಮನೆ ಇವಳೇನಾ ಅಂತ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಆನಂದ ಆಡಿಯೋ ರಿಲೀಸ್ ಮಾಡಿರೋ ಈ ಅಲ್ಬಂ ಸಾಂಗ್ ಈಗಾಗಲೇ ನಾಲ್ಕು ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ.

ಬನ್ನೇರುಘಟ್ಟ ರಸ್ತೆಯ ಎಎಂಸಿ ಕಾಲೇಜಿನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದ್ದು, ಅದ್ದೂರಿಯಾಗಿ ಮೂಡಿಬಂದಿದೆ. 60 ನೃತ್ಯ ಕಲಾವಿದರು, 150ಕ್ಕೂ ಅಧಿಕ ಸಹಕಲಾವಿದರು ಈ ಅಲ್ಬಂ ಸಾಂಗ್ ನಲ್ಲಿ ಕುಣಿದಿದ್ದು, ಅದ್ದೂರಿಯಾಗಿ ಚಿತ್ರೀಕರಣ ಮಾಡಲಾಗಿದೆ. ಭಜರಂಗಿ ಮೋಹನ ಮನಸೆಳೆಯುವ ನೃತ್ಯ ನಿರ್ದೇಶನ ಮಾಡಿದ್ದು ಹೆಬ್ಬುಲಿ ಖ್ಯಾತಿಯ ಕರುಣಾಕರ್ ಛಾಯಾಗ್ರಹಣವಿದೆ.

ಸಧ್ಯ ನೋಡು ಶಿವ ಅಲ್ಬಂ ರಿಲೀಸ್ ಖುಷಿಯಲ್ಲಿಯೋ ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಚಿತ್ರದಲ್ಲೂ ನಟಿಸುತ್ತಿದ್ದು, ಜೊತೆ ಜೊತೆಯಲಿ ಸೀರಿಯಲ್ ಮೂಲಕವೂ ಪ್ರೇಕ್ಷಕರ ಮನಗೆಲ್ಲುತ್ತಿದ್ದಾರೆ. ರ್ಯಾಪರ್ ಚಂದನ ಶೆಟ್ಟಿ ಹಾಗೂ ಮೇಘಾ ಸಂಗಡಿಗರ ಈ ಅಲ್ಬಂ ಸಾಂಗ್ ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಬರೆಯೂ ಭರವಸೆ ಮೂಡಿಸಿದೆ.

Comments are closed.