ಸೋಷಿಯಲ್ ಮೀಡಿಯಾದಲ್ಲಿ ಅಪ್ಪನನ್ನು ಮೀರಿಸಿದ ಮಗ…! ಯಶ್ ಪುತ್ರನ ಒಂದೇ ಮಾತಿಗೆ 14 ಲಕ್ಷ ವಿವ್ಸ್….!!

ಕೆಜಿಎಫ್,ಕೆಜಿಎಫ್-2 ಮೂಲಕ ರಾಕಿಂಗ್ ಸ್ಟಾರ್ ಯಶ್ ಸೋಷಿಯಲ್ ಮೀಡಿಯಾ ಹಾಗೂ ಸಿನಿಮಾ ರಂಗದಲ್ಲಿ ಸಾಧನೆಗೈಯ್ಯುತ್ತಿದ್ದರೇ, ಅಪ್ಪನನ್ನು ಮೀರಿಸುವಂತೆ ಯಶ್ ಪುತ್ರ ಯಥರ್ವ್ ಸೋಷಿಯಲ್ ಮೀಡಿಯಾ ಸ್ಟಾರ್ ಆಗ್ತಿದ್ದಾನೆ. ಪುಟಾಣಿ ಯಥರ್ವ್ ನ ಒಂದು ಮಾತು ಬರೋಬ್ಬರಿ 14 ಲಕ್ಷ ವೀಕ್ಷಣೆ ಪಡೆದುಕೊಂಡಿದೆ.

ರಾಕಿಂಗ್ ಸ್ಟಾರ್ ಯಶ್ ಎಷ್ಟೇ ಬ್ಯುಸಿ ಇದ್ದರೂ ಕುಟುಂಬದ ಜೊತೆ ಸಮಯ ಕಳೆಯುವುದನ್ನು ತಪ್ಪಿಸಿಕೊಳ್ಳೋದಿಲ್ಲ. ಮೊನ್ನೆ ಮೊನ್ನೆಯಷ್ಟೇ ಫ್ಯಾಮಿಲಿ ಜೊತೆ ಮಾಲ್ಡೀವ್ ಟ್ರಿಪ್ ಹೋಗಿ ಬಂದ ಯಶ್ ಈಗ ಕೆಜಿಎಫ್-2 ಪ್ರಮೋಶನ್ ವರ್ಕ್ಸ್ ನಡುವೆಯೂ ಪುತ್ರ ಯಥರ್ವ್ ನ ಜೊತೆ ತುಂಟಾಟವಾಡುತ್ತ ಟೈಂಪಾಸ್ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಮಗನ ಜೊತೆ ಆಟವಾಡುವ ವಿಡಿಯೋವೊಂದನ್ನು ರಾಧಿಕಾ-ಯಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/p/CMCjm4cHXD4/?igshid=19ftenqketdy7

ಇದರಲ್ಲಿ ಕೆನ್ನೆ ಉಬ್ಬಿಸುವ ಯಶ್ ಗೆ ಮುಖದ ಮೇಲೆ ಯಥರ್ವ್ ಮೆತ್ತಗೆ ಹೊಡೆಯುವ ದೃಶ್ಯವಿದೆ. ಅಷ್ಟೇ ಅಲ್ಲ ಯಶ್ ಪುತ್ರ ಅಪಾಪೀನ್ ಅಪಾಪೀನ್ ಎಂದು ಪದೇ ಪದೇ ಹೇಳಿದ್ದಾನೆ.

ಮಗನ ಶಬ್ದ ಅರ್ಥವಾಗದೇ ಯಶ್ ಅಪಾಪೀನ್ ಎಂದ್ರೇ ಏನೋ ಮಗನೇ ಎಂದು ಪ್ರಶ್ನಿಸಿದ್ದಾರೆ. ಕೊನೆಗೆ ಯಥರ್ವ್ ಅಪ್ಪನಿಗೆ ಏರೋಪ್ಲೇನ್ ಹಾರಾಡೋದನ್ನು ಆಕ್ಟ್ಯ್ ಮಾಡಿ ತೋರಿಸಿದ್ದಾನೆ.  ಈ ವಿಡಿಯೋ ಇನ್ ಸ್ಟಾಗ್ರಾಂ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಶೇರ್ ಆದ ಕೆಲವೇ ಗಂಟೆಗಳಲ್ಲಿ 14 ಲಕ್ಷ ವೀವ್ಸ್ ಪಡೆದುಕೊಂಡಿದೆ.

ಯಶ್ ಮತ್ತು ರಾಧಿಕಾ ಆಗಾಗ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಯಥರ್ವ್ ಮತ್ತು ಆಯ್ರಾ ವಿಡಿಯೋ ಮತ್ತು ಪೋಟೋಗಳನ್ನು ಹಂಚಿಕೊಳ್ಳೋ ಮೂಲಕ ಮಕ್ಕಳ ತುಂಟಾಟದ ಅಪ್ಡೇಟ್ ನೀಡುತ್ತಲೇ ಇರುತ್ತಾರೆ. ಹೀಗಾಗಿ ಯಥರ್ವ್ ಮತ್ತು ಆಯ್ರಾ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಸೃಷ್ಟಿಸಿದ್ದು, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

Comments are closed.