ಬಿಗ್ ಬಾಸ್ ಚೈತ್ರಾ ಕೊಟೂರ್ ಮದುವೆ ಪ್ರಕರಣ…! ನಾಗಾರ್ಜುನ್ ಕುಟುಂಬಕ್ಕೆ ಪೋಟೋ, ವಿಡಿಯೋ ಸಾಕ್ಷಿ ಕೊಟ್ಟ ಚೈತ್ರಾ ….!!

ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ಚೈತ್ರಾ ಕೊಟೂರು ಮದುವೆ ವಿವಾದ ಸಧ್ಯಕ್ಕೆ ತಣ್ಣಗಾಗುವ ಲಕ್ಷಣವೇ ಇಲ್ಲ. ಬುಧವಾರ ಪೊಲೀಸರು ಎರಡು ಕುಟುಂಬದವರನ್ನು ಮಾತುಕತೆಗೆ ಕರೆದಿರುವ ಬೆನ್ನಲ್ಲೇ, ಚೈತ್ರಾ ಕೊಟೂರು ತಮ್ಮ ಹಾಗೂ ನಾಗಾರ್ಜುನ್ ಲವ್ ಸ್ಟೋರಿಯ ಪೋಟೋಗಳನ್ನು ಹರಿಬಿಟ್ಟಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ಚೈತ್ರಾ ಕೊಟೂರು  ಮೊನ್ನೆ ಧಿಡೀರ್ ತಮ್ಮ ಪ್ರೇಮಿ ನಾಗಾರ್ಜುನ್  ಜೊತೆ ಹೊಸ ಬದುಕಿಗೆ ಕಾಲಿರಿಸಿದ್ದಾರೆ. ಆದರೆ ಮದುವೆಯಾದ ದಿನವೇ ಇವರ ಲವ್ ಸ್ಟೋರಿ ಹಾಗೂ ಮದುವೆ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ನಮ್ಮ ಮಗನಿಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಚೈತ್ರಾ ಕೊಟೂರು ಅವರನ್ನು ವಿವಾಹವಾಗಿದ್ದಾರೆ ಎಂದು ನಾಗಾರ್ಜುನ್ ಪೋಷಕರು ಆರೋಪಿಸಿ ಮಗನನ್ನು ಮನೆಗೆ ಕರೆದೊಯ್ದಿದ್ದಾರೆ. ‘

ಇನ್ನೊಂದೆಡೆ ಗಂಡನ ಮನೆಯವರ ಆರೋಪಗಳಿಗೆ  ಬೇರೆಯದೇ ಕಾರಣ ನೀಡಿರುವ ಚೈತ್ರಾ ನಾಗಾರ್ಜುನ್ ನನ್ನನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದ. ಆದರ ಆತನ ಹೆತ್ತವರು ನಾನು ಸಿನಿಮಾದವಳು, ಬಣ್ಣ ಹಚ್ಚುವವಳು ಎಂಬ ಕಾರಣ ಮುಂದಿಟ್ಟುಕೊಂಡು  ಮದುವೆಗೆ ನಿರಾಕರಿಸುತ್ತಿದ್ದು, ಇದೇ ಕಾರಣಕ್ಕೆ ಮಗನ ಬ್ರೇನ್ ವಾಶ್ ಮಾಡಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಇಷ್ಟೇ ಅಲ್ಲ, ನಾಗಾರ್ಜುನ್ ರನ್ನು ತಾನು ಬಲವಂತವಾಗಿ ಮದುವೆಯಾದ ಎಂಬ ಆರೋಪದ ಹಿನ್ನೆಲೆಯಲ್ಲಿ ತಾವು ಪ್ರೀತಿಸುತ್ತಿದ್ದಾಗಿನ ಪೋಟೋಗಳನ್ನು, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಾವಿಬ್ಬರು ಪ್ರೀತಿಸುತ್ತಿದ್ದೇವು. ಹಲವಾರು ಸ್ಥಳಗಳಿಗೆ ಹೋಗಿ ಬಂದಿದ್ದೇವೆ. ನಾನು ಅವನ ಬರ್ತಡೇ ಕೂಡ ಅದ್ದೂರಿಯಾಗಿ ಆಚರಿಸಿದ್ದೇ ಎಂದು ಚೈತ್ರಾ ಪೋಟೋಗಳ ವಿವರಣೆ ನೀಡಿದ್ದಾರೆ.

ಬುಧವಾರ ಮಂಡ್ಯ ಪೊಲೀಸರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯಲಿದೆ ಎನ್ನಲಾಗಿದ್ದು, ಸದ್ಯ ಚೈತ್ರಾ ಕೋಲಾರದಲ್ಲಿ ಪೋಷಕರೊಂದಿಗೆ ವಾಸವಾಗಿದ್ದರೇ, ನಾಗಾರ್ಜುನ್ ಮಂಡ್ಯದಲ್ಲಿ ತನ್ನ ಪೋಷಕರ ಜೊತೆ ವಾಸವಾಗಿದ್ದಾನೆ. ಈಗಾಗಲೇ ಒಂದು ಬಾರಿ ಮಾತುಕತೆ ನಡೆದಿದ್ದು, ಮಾತುಕತೆ ನೆಪದಲ್ಲಿ ನನ್ನ ಪೋಷಕರ ಮೇಲೆ ನಾಗಾರ್ಜುನ್ ಹೆತ್ತವರು ದೌರ್ಜನ್ಯ ಎಸಗಿದ್ದಾರೆ ಎಂದು ಚೈತ್ರಾ ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ಚೈತ್ರಾ ಕೊಟೂರು ವಿವಾಹ ಪ್ರಹಸನ ಮತ್ತಷ್ಟು ಜಟಿಲಗೊಳ್ಳುತ್ತಿದ್ದು, ನಾಗಾರ್ಜುನ್ ಪೋಷಕರು ಮಗನನ್ನು ಬಿಟ್ಟು ಕೊಡಲು ಸಿದ್ಧವಿಲ್ಲ. ಚೈತ್ರಾ ಕೂಡ ನಾಗಾರ್ಜುನ್ ತೊರೆಯಲು ಸಿದ್ಧವಿಲ್ಲ. ಹೀಗಾಗಿ ಪೊಲೀಸ್ ಮಧ್ಯಸ್ಥಿಕೆಯಲ್ಲಿ ಪ್ರಕರಣ ಯಾವ ಅಂತ್ಯ ಕಾಣುತ್ತೆ ಕಾದುನೋಡಬೇಕಿದೆ.

Comments are closed.