ಚಿರು ತೊಡೆಯೇರಿ ಕುಳಿತ ಜ್ಯೂನಿಯರ್ ಚಿರು….! ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಪೋಟೋ…!!

ಮೇಘನಾ ರಾಜ್ ಸರ್ಜಾ  ತಮ್ಮ ಪುಟ್ಟ ಕಂದನ ಜೊತೆ ಬ್ಯುಸಿಯಾಗಿದ್ದು, ಮಗುವಿನ ತುಂಟಾಟಗಳನ್ನು ಎಂಜಾಯ್ ಮಾಡುತ್ತ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ-ಪೋಟೋ ಹಂಚಿಕೊಳ್ಳುತ್ತ ಖುಷಿಯಾಗಿದ್ದಾರೆ. ಈಗ ಅಭಿಮಾನಿಗಳೇ ಸಿದ್ಧಪಡಿಸಿದ ಪೋಟೋವೊಂದು ಎಲ್ಲರ ಗಮನ ಸೆಳೆಯುತ್ತಿದೆ.

ಸದ್ಯ 5 ತಿಂಗಳು ಮುಗಿಸಿ 6 ನೇ ತಿಂಗಳಿಗೆ ಕಾಲಿಟ್ಟಿರೋ ಜ್ಯೂನಿಯರ್ ಚಿರು ಎಲ್ಲರ ಪ್ರೀತಿ ಸುರಿಮಳೆಯೇ ಸುರಿಯುತ್ತಿದ್ದು, ಮೊನ್ನೆಯಷ್ಟೇ ಲಯನ್ ಕಿಂಗ್ ಕೇಕ್ ಕತ್ತರಿಸಿ 6 ತಿಂಗಳನ್ನು ಸ್ವಾಗತಿಸಿದ್ದಾನೆ. ಮಗನ ಆಟೋಟಗಳ ನಡುವೆ ಎಲ್ಲ ದಿನವೂ ಶನಿವಾರ ಭಾನುವಾರದಂತೆ ತೋರುತ್ತದೆ ಎಂದು ಮೇಘನಾ ಇತ್ತೀಚಿಗೆ ಪೋಸ್ಟ್ ಹಾಕಿದ್ದರು.

ಅಪ್ಪನ ರಾಜಾಮಾರ್ತಾಂಡ್ ಟ್ರೇಲರ್ ಲಾಂಚ್ ಮಾಡಿದ ಜ್ಯೂನಿಯರ್ ಚಿರು ಸ್ಯಾಂಡಲ್ ವುಡ್ ಗೆ ಬರೋದು ಫಿಕ್ಸ್ ಅಂತಾ ಅದಾಗಲೇ ಅಜ್ಜ ಸುಂದರ್ ರಾಜ್ ಹೇಳಾಗಿದೆ. ಈ ಮಧ್ಯೆ ಜ್ಯೂನಿಯರ್ ಚಿರುಗೂ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಇದ್ದು, ಜ್ಯೂ ನಿಯರ್ ಪೋಟೋಗಳನ್ನು ಎಡಿಟ್ ಮಾಡಿ ಹಂಚಿಕೊಳ್ಳೋ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.

ಜ್ಯೂನಿಯರ್ ಚಿರು ಯುವ ಸಾಮ್ರಾಟ್ ನಟ  ಹಾಗೂ ತಂದೆ ಚಿರಂಜೀವಿ ಸರ್ಜಾ ತೊಡೆ ಮೇಲೆ ಕೂತ ಪೋಟೋವೊಂದು ಈಗ ಸಖತ್ ವೈರಲ್ ಆಗಿದೆ. ಇದು ಅಭಿಮಾನಿಗಳೇ ಎಡಿಟ್ ಮಾಡಿದ ಪೋಟೋವಾಗಿದ್ದು, ನೋಡುಗರಿಗೆ ಥೇಟ್ ಚಿರುನೇ ಮಗನನ್ನು ಕಾಲಮೇಲೆ ಕೂರಿಸಿಕೊಂಡು ಕುಳಿತಿರುವಂತೆ ಭಾಸವಾಗುತ್ತಿದೆ.

ಇತ್ತೀಚಿಗಷ್ಟೇ, ಮೇಘನಾ ರಾಜ್ ಜ್ಯೂನಿಯರ್ ಚಿರು ತಂದೆಯಂತದ್ದೇ ಶರ್ಟ್ ಧರಿಸಿ ಟ್ವಿನ್ನಿಂಗ್ ಮಾಡ್ತಿರೋ ಪೋಟೋ ಹಂಚಿಕೊಂಡಿದ್ದರು. ಅಷ್ಟೇ ಅಲ್ಲ ಫೈಟಿಂಗ್ ಮೂಡ್ ನಲ್ಲಿರೋ ಜ್ಯೂನಿಯರ್ ಚಿರು ಜೊತೆ ಅರ್ಜುನ್ ಸರ್ಜಾ, ಚಿರು ಸರ್ಜಾ ಹಾಗೂ ತಮ್ಮ ಪೋಟೋ ಹಾಕಿಕೊಂಡು ಸರ್ಜಾ ಫ್ಯಾಮಿಲಿ ಟ್ವಿನ್ನಿಂಗ್ ಎಂದಿದ್ದರು.

ಮೇಘನಾ ರಾಜ್ ಕೂಡ ಸದಾಕಾಲ ಪತಿಯೊಂದಿಗಿನ ಒಂದೊಂದು ಪೋಟೋಗಳನ್ನು ಹಂಚಿಕೊಳ್ಳೋ ಜೊತೆಗೆ ಮಗನ ಆಕ್ಟಿವಿಟಿಸ್ ಪೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಅಭಿಮಾನಿಗಳು ಜ್ಯೂನಿಯರ್ ಚಿರು ಮೇಲಿಟ್ಟಿರೋ ಪ್ರೀತಿ ಪೋಟೋದ ಮೂಲಕ ಅಭಿವ್ಯಕ್ತಿಗೊಂಡಿದ್ದು, ಅಭಿಮಾನಿಗಳ ಮನಗೆಲ್ಲುತ್ತಿದೆ.  

Comments are closed.