ಸೋಮವಾರ, ಏಪ್ರಿಲ್ 28, 2025
HomeBreakingBiggboss: ರಣಾಂಗಣವಾದ ಬಿಗ್ ಬಾಸ್ ಅಂಗಳ…! ಮತ್ತೆ ಜಗಳವಾಡಿಕೊಂಡ ಚಂದ್ರಚೂಡ್ , ಪ್ರಿಯಾಂಕಾ…!!

Biggboss: ರಣಾಂಗಣವಾದ ಬಿಗ್ ಬಾಸ್ ಅಂಗಳ…! ಮತ್ತೆ ಜಗಳವಾಡಿಕೊಂಡ ಚಂದ್ರಚೂಡ್ , ಪ್ರಿಯಾಂಕಾ…!!

- Advertisement -

ಕನ್ನಡ ಬಿಗ್ ಬಾಸ್ ಸೀಸನ್ 8 ರಲ್ಲಿ ಜಗಳ,ಗಲಾಟೆ ಪರಸ್ಪರ ಆರೋಪ ಪ್ರತ್ಯಾರೋಪದ ಭರಾಟೆ ಜೋರಾಗಿದೆ. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ನಾಯಕತ್ವಕ್ಕಾಗಿ 10 ಸ್ಪರ್ಧಿಗಳು ಇನ್ನಿಲ್ಲದ ಸರ್ಕಸ್ ನಡೆಸಿದ್ದು, ದಿವ್ಯಾಸುರೇಶ್, ಪ್ರಿಯಾಂಕಾ ತಿಮ್ಮೇಶ್ ಹಾಗೂ ಚಂದ್ರಚೂಡ್ ನಡುವೆ ವಾಗ್ಯುದ್ಧವೇ ನಡೆದು ಹೋಗಿದೆ.

ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಒಡೆಯುವ ಟಾಸ್ಕ್ ನೀಡಲಾಗಿತ್ತು. ಮೊದಲು ಸ್ಪರ್ಧಿಗಳು ತಮ್ಮ ಮೇಲೆ ಮೊಟ್ಟೆ ಒಡೆದುಕೊಳ್ಳಬೇಕು ಇದರಿಂದ ಹಣ ಸಂಪಾದಿಸಬೇಕು. ಮತ್ತು ನೆಕ್ಸ್ಟ್ ಗೋಲ್ಡನ್ ಎಗ್ ರೌಂಡ್ ಗೆ ಆಯ್ಕೆಯಾದರೇ ಬೇರೆಯವರ ಮೇಲೆ ಮೊಟ್ಟೆ ಒಡೆದು ಹಣ ಸಂಪಾದಿಸಬೇಕು.

ಈ ಟಾಸ್ಕ್ ವೇಳೆ ಶಮಂತ ಮೊಟ್ಟೆ ಒಡೆಯುವುದನ್ನು ತಪ್ಪಿಸಿಕೊಳ್ಳುವುದಕ್ಕೆ ಪ್ರಿಯಾಂಕಾ ಬಾತ್ ರೂಮ್ ನಲ್ಲಿ ಅಡಗಿಕುಳಿತಿದ್ದರು. ಇದನ್ನು ಗಮನಿಸಿದ ಶಮಂತಾ ಬಾತ್ ರೂಂ ಗೆ ನುಗ್ಗಿ ಪ್ರಿಯಾಂಕಾ ಮೇಲೆ ಮೊಟ್ಟೆ ಒಡೆಯಲು ಪ್ರಯತ್ನಿಸಿದರು.

ಈ ವೇಳೆ ಶಮಂತ ನನಗೆ ಪರಚಿದ ಎಂದು ಪ್ರಿಯಾಂಕಾ ಕಿರುಚಾಡಿದ್ದು, ಬಳಿಕ ಸ್ವಿಮ್ಮಿಂಗ್ ಫೂಲ್ ನಲ್ಲಿ ಅಡಗಿಕೊಳ್ಳಲು ಹೋಗಿದ್ದಾರೆ. ಈ ವೇಳೆ ದಿವ್ಯಾ ಸುರೇಶ್ ಪ್ರಿಯಾಂಕಾ ತಲೆ ಮೇಲೆ ಮೊಟ್ಟೆ ಒಡೆದಿದ್ದು, ಇದರಿಂದ ನನಗೆ ನೋವಾಯ್ತು ಅಂತ ದಿವ್ಯಾ ಮೇಲೆ ಪ್ರಿಯಾಂಕಾ ಕೈ ಮಾಡಿದ್ದಾರೆ.

ಅಲ್ಲದೇ ನನಗೆ ಆಗಾಗ ಹುಚ್ಚು ಹಿಡಿಯುತ್ತೇ ಅಂತ ಶಮಂತ ಬಳಿ ಪ್ರಿಯಾಂಕಾ ಕಿರುಚಾಡಿ ಆಕ್ರೋಶ ತೋಡಿಕೊಂಡಿದ್ದಾರೆ. ಪ್ರಿಯಾಂಕಾ ತಲೆ ಮೇಲೆ ಮೊಟ್ಟೆ ಒಡೆಯಲು ದಿವ್ಯಾಸುರೇಶ್ ಗೆ ಚಕ್ರವರ್ತಿ ಚಂಧ್ರಚೂಡ್ ಕೆಲವು ಸಲಹೆ ನೀಡಿದ್ದರು.

ಇದನ್ನ ಗಮನಿಸಿದ ಪ್ರಿಯಾಂಕಾ ತಿಮ್ಮೇಶ್ ಚಂಧ್ರಚೂಡ್ ಬಳಿ ನನ್ನ ಹೆಸರು ತಗೊಂಡು ಯಾಕೆ ಮಾತಾಡಿದ್ರಿ ಅಂತ ಚಂದ್ರಚೂಡ್  ಜೊತೆ ಜಗಳವಾಡಿದ್ದಾರೆ. ಇಷ್ಟೇ ಇಲ್ಲ ಈ ಎಲ್ಲ ಘಟನೆಗೂ ಕಾರಣ ಶಮಂತ್ ಅಂತ ಪ್ರಿಯಾಂಕಾ ಆರೋಪಿಸಿದ್ದು ಜಗಳವಾಡಿದ್ದಾರೆ.

ಒಟ್ಟಿನಲ್ಲಿ ಬಿಗ್ ಬಾಸ್ ಅಂಗಳ ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕೆ ರಣಾಂಗಣವಾಗಿ ಬದಲಾಗುತ್ತಿದ್ದು, ಸ್ಪರ್ಧಿಗಳು ಒಂದಿಲ್ಲೊಂದು ಕಾರಣಕ್ಕೆ ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಲೇ ಇದ್ದಾರೆ.  

RELATED ARTICLES

Most Popular