ತಮಿಳು ಸಂಸ್ಕೃತಿ ಇಷ್ಟ…! ತಮಿಳರ ಮನೆ ಸೊಸೆಯಾಗೋ ಆಸೆ ಇದೆ…! ಹೊರಬಿತ್ತು ರಶ್ಮಿಕಾ ಮನದಾಳದ ಮಾತು…!!

ಸ್ಯಾಂಡಲ್ ವುಡ್ ನಿಂದ ತಮಿಳು,ತೆಲುಗು ಸಿನಿಮಾರಂಗಕ್ಕೆ ವಲಸೆ ಹೋಗಿ ಅಲ್ಲಿಂದ ಬಾಲಿವುಡ್ ಗೆ ಹಾರಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ನ್ಯಾಶನಲ್ ಕ್ರಶ್. ಇಂತಿಪ್ಪ ಕೊಡಗಿನ ಬೆಡಗಿಯ  ಮೊದಲ ತಮಿಳು ಚಿತ್ರ ಬಿಡುಗಡೆಯಾಗುತ್ತಿದ್ದಂತೆ  ಮನದಾಳದ ಮಾತು ಬಿಚ್ಚಿಟ್ಟಿದ್ದು, ನನಗೆ ತಮಿಳರ ಮನೆ ಸೊಸೆಯಾಗೋ ಆಸೆ ಇದೆ ಎಂದಿದ್ದಾರೆ.

https://kannada.newsnext.live/priminister-narendra-modi-good-news-for-kissan/

ಕಾರ್ತಿ ಜೊತೆ ತಮಿಳಿನಲ್ಲಿ ಚೊಚ್ಚಲ ಸಿನಿಮಾ ಸುಲ್ತಾನ್ ದಲ್ಲಿ ನಟಿಸಿದ್ದ ರಶ್ಮಿಕಾ ಮಂದಣ್ಣ, ಮೊದಲ ಚಿತ್ರದಲ್ಲಿ ತಮಿಳಿಗರ ಮನ ಗೆದ್ದಿದ್ದಾರೆ. ಏಪ್ರಿಲ್ 2 ರಂದು ರಿಲೀಸ್ ಆದ ಸಿನಿಮಾ ಬಾಕ್ಸಾಫೀಸ್ ನಲ್ಲಿ ಗೆದ್ದಿದೆ.

https://kannada.newsnext.live/26-persons-death-in-one-village-munahalli-kalaburagi/

ಒಂದೇ ಒಂದು ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಂತೆ ತಮಿಳರ ಸಂಸ್ಕೃತಿಗೆ ಮಾರು ಹೋಗಿರುವ ರಶ್ಮಿಕಾ, ನನಗೆ ತಮಿಳು ಸಂಸ್ಕೃತಿ ಎಂದರೇ ತುಂಬಾ ಇಷ್ಟ.

  ವಿಶೇಷವಾಗಿ ತಮಿಳರ ಆಹಾರ ಪದಾರ್ಥಗಳು ಇಷ್ಟ ಆಗುತ್ತವೆ. ತಮಿಳರ ಮನೆಯ ಸೊಸೆಯಾಗಬೇಕೆಂಬ ಆಸೆ ಇದೆ ಎಂದಿದ್ದಾರೆ.

ರಶ್ಮಿಕಾನ ಈ ಮಾತು ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹವಾ ಸೃಷ್ಟಿಸಿದ್ದು, ತೆಲುಗಿನ ಮಾಧ್ಯಮಗಳ ಈ ಸುದ್ದಿ ವರದಿ ಮಾಡಿದೆ. ತೆಲುಗಿನಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿರುವ ರಶ್ಮಿಕಾ ತೆಲುಗಿನಲ್ಲೂ ಜನ ಮೆಚ್ಚುಗೆ ಗಳಿಸಿದ್ದಾರೆ. ಆದರೆ ಕೊಡಗಿನ ಕುವರಿ ಮನಸೆಳೆದಿದ್ದು ಮಾತ್ರ ತಮಿಳರ ಸಂಸ್ಕೃತಿ .

ಈಗಾಗಲೇ ತಮ್ಮ ಮೊದಲ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ರಶ್ಮಿಕಾ ಅವರನ್ನೇ ಮದುವೆಯಾಗಲು ಸಿದ್ಧವಾಗಿದ್ದರು. ಆದರೆ ವೈಯಕ್ತಿಕ ಕಾರಣಕ್ಕೆ ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಮದುವೆ ಮುರಿದು ಹೋಗಿತ್ತು.

Comments are closed.