ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ಸಂಜನಾ ಗಲ್ರಾನಿ….! ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸಂಜನಾ ವಿರುದ್ಧ FIR….!!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಬೇಲ್ ಮೇಲೆ ಹೊರಬಂದಿರುವ ಸಂಜನಾ ಗಲ್ರಾನಿಗೆ ಇನ್ನೂ ಸಂಕಷ್ಟ ಮುಗಿದಿಲ್ಲ. ಮತ್ತೊಮ್ಮೆ ಸಂಜನಾ ಗಲ್ರಾನಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ.

2019 ರಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾಡೆಲ್ ವಂದನಾ ಜೈನ್ ದೂರಿನ ಆಧಾರದ ಮೇಲೆ ನಟಿ ಸಂಜನಾ ಗಲ್ರಾನಿ ವಿರುದ್ಧ ಎಫ್ ಆಯ್ ಆರ್ ದಾಖಲಿಸಿಕೊಳ್ಳಲಾಗಿದೆ.

https://kannada.newsnext.live/priminister-narendra-modi-good-news-for-kissan/

2019 ರಲ್ಲಿ ಕ್ಲಬ್ ವೊಂದಕ್ಕೆ ಪಾರ್ಟಿಗಾಗಿ ವಂದನಾ ಜೈನ್ ತನ್ನ ಸ್ನೇಹಿತನೊಂದಿಗೆ ಬಂದಿದ್ದರು. ಈ ವೇಳೆ ಕ್ಲಬ್ ನಲ್ಲಿದ್ದ ಸಂಜನಾ ಹಾಗೂ ವಂದನಾ ನಡುವೆ ಮಾತುಕತೆ ನಡೆದಿದ್ದು, ಈ ವೇಳೆ ಜಗಳ ನಡೆದಿದೆ.

https://kannada.newsnext.live/sandalwood-bollywood-rashmikamandanna-tamilmarriage-boy/

ಮಾತಿಗೆ ಮಾತು ಬೆಳೆದು ಜಗಳ ನಡೆಯುತ್ತಿದ್ದಂತೆ ಸಂಜನಾ  ವಿಸ್ಕಿಯನ್ನು ವಂದನಾ ಮುಖಕ್ಕೆ ಎರಚಿದ್ದಾರೆ ಎನ್ನಲಾಗಿದೆ. ಇದಾದ ಮೇಲೆ ವಂದನಾ ಕಣ್ಣಿಗೆ ಗಾಯ ಕೂಡ ಆಗಿತ್ತು ಎನ್ನಲಾಗಿದೆ. ಆದರೆ ಈ ಬಗ್ಗೆ ದೂರು ನೀಡದಂತೆ ಸಂಜನಾ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ.

ಹೀಗಾಗಿ ವಂದನಾ ದೂರು ನೀಡದೆ ಸುಮ್ಮನಾಗಿದ್ದರಂತೆ. ಇದೀಗ ಕೋರ್ಟ್ ಸೂಚನೆ ಮೇರೆಗೆ ವಂದನಾ ಸಂಜನಾ ವಿರುದ್ಧ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದಾರೆ.ಈ ಹಿಂದೆಯೂ ಹಣಕಾಸು ಸೇರಿದಂತೆ ಸಾಕಷ್ಟು ವಿಚಾರಕ್ಕೆ ಸಂಜನಾ ಹಾಗೂ ವಂದನಾ ಜೈನ್ ವಿರುದ್ಧ ಗಲಾಟೆ ನಡೆದಿತ್ತು.

ಈಗಾಗಲೇ ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿದ್ದ ಸಂಜನಾ ಮೊನ್ನೆ ಮೊನ್ನೆಯಷ್ಟೇ ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದುಕೊಂಡಿದ್ದಾರೆ. ಆದರೆ ಮತ್ತೊಂದು ಹಲ್ಲೆ ಪ್ರಕರಣ ಸಂಜನಾ ಕೆರಿಯರ್ ಗೆ ಮುಳುವಾಗೋ ಸಾಧ್ಯತೆ ಇದೆ.

 

Comments are closed.