ಲವ್ ಮಾಕ್ಟೆಲ್ ಜೋಡಿ ಕಲ್ಯಾಣೋತ್ಸವಕ್ಕೆ ದಿನಗಣನೆ…! ಮಿಲನಾ ನಾಗರಾಜ್ ಹಂಚಿಕೊಂಡ್ರು ಸ್ಪೆಶಲ್ ವಿಡಿಯೋ…!!

ಲವ್ ಮಾಕ್ಟೇಲ್ ನಂತಹ ಸುಂದರ ಲವ್ ಸ್ಟೋರಿ ಮೂಲಕ ಬೆಳಕಿಗೆ ಬಂದ ಸ್ಯಾಂಡಲ್ ವುಡ್ ಸ್ಟಾರ್ ಲವ್ ಸ್ಟೋರಿ ಫೆ.14 ರ ಪ್ರೇಮಿಗಳ ದಿನಾಚರಣೆಯಂದು ವಿವಾಹದಲ್ಲಿ ಒಂದಾಗಲಿದೆ. ಡಾರ್ಲಿಂಗ್ ಕೃಷ್ಣ ಹಾಗೂ  ಮಿಲನಾ ನಾಗರಾಜ್ ಫೆ.14 ರಂದು ಹೊಸಬದುಕಿಗೆ ಕಾಲಿಡಲಿದ್ದು, ಮದುವೆ ಶಾಸ್ತ್ರಗಳು ಆರಂಭವಾಗಿದೆ ಎಂದು ಮಿಲನಾ ನಾಗರಾಜ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ಮತ್ತೊಂದು ಜೋಡಿ ನಿಜಜೀವನದಲ್ಲೂ ಸಪ್ತಪದಿ ತುಳಿದು ಒಂದಾಗುತ್ತಿದೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ವಿಭಿನ್ನವಾಗಿ  ಸ್ವಿಮ್ಮಿಂಗ್ ಪೂಲ್ ನಲ್ಲಿ ನಿರ್ಮಿಸಲಾದ ಮಂಟಪದಲ್ಲಿ ಸಪ್ತಪದಿ ತುಳಿಯಲಿದ್ದು, ಇನ್ನೇನು ಮದುವೆಗೆ ದಿನಗಣನೆ ನಡೆದಿದೆ.

ಇನ್ನು ಮಿಲನಾ ಹಾಗೂ ಕೃಷ್ಣ ಅವರ ಮನೆಯಲ್ಲಿ ಮದುವೆ ಶಾಸ್ತ್ರಗಳು ಆರಂಭಗೊಂಡಿದೆ.

https://www.instagram.com/reel/CLBwf2qnTR8/?igshid=503xmxmwzddy

ಮಿಲನಾ ತಮ್ಮ ಕುಟುಂಬದ ಸಂಪ್ರದಾಯದಂತೆ ಮೊದಲ ಪೂಜೆ ಸಲ್ಲಿಸುತ್ತಿರುವ ವಿಡಿಯೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಮದುವೆಯ ಶಾಸ್ತ್ರಗಳು ಅಧಿಕೃತವಾಗಿ ಆರಂಭಗೊಂಡಿದೆ ಎಂದಿದ್ದಾರೆ.

10 ವರ್ಷಗಳಿಂದ ಪ್ರೀತಿಸುತ್ತಿದ್ದ  ಈ ಜೋಡಿ ಲವ್ ಮಾಕ್ಟೇಲ್ ಸಕ್ಸಸ್ ಮೀಟ್ ನಲ್ಲಿ ತಮ್ಮ ಪ್ರೀತಿ ವಿಚಾರವನ್ನು ಬಹಿರಂಗಪಡಿಸಿತ್ತು. ಈಗಾಗಲೇ ಸ್ಯಾಂಡಲ್ ವುಡ್ ಗಣ್ಯರನ್ನು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಸ್ವತಃ ಭೇಟಿ ನೀಡಿ ಆಹ್ವಾನಿಸಿದ್ದು, ಮದುವೆಗೆ ಎಲ್ಲರೂ ಸಾಕ್ಷಿಯಾಗಲಿದ್ದಾರೆ.

ಸದ್ಯ ಲವ್ ಮಾಕ್ಟೆಲ್ ಸಿಕ್ವೆನ್ಸ್ 2 ಸಿದ್ಧತೆಯಲ್ಲಿದ್ದ ಜೋಡಿ ಮದುವೆ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಲಿದೆ. ಮದುವೆಯಂದು ಲವ್ ಮಾಕ್ಟೇಲ್ ಸಿನಿಮಾದ ವಿಡಿಯೋ ಸಾಂಗ್ ಗಳ ಲಾಂಚ್ ಕೂಡ ನಡೆಯಲಿದ್ದು, ಅಭಿಮಾನಿಗಳು ಈ ಜೋಡಿಗೆ ಶುಭಹಾರೈಸಿ ಸಂಭ್ರಮಿಸುತ್ತಿದ್ದಾರೆ.  

Comments are closed.