2019 ಕ್ಕೂ ಮೊದಲೇ ವುಹಾನ್ ನಲ್ಲಿ ಪತ್ತೆಯಾಗಿತ್ತಾ ಕೊರೊನಾ…! WHO ತಜ್ಞರ ತಂಡ ಹೇಳಿದ್ದೇನು ಗೊತ್ತಾ ..?

ವುಹಾನ್ : ವಿಶ್ವವನ್ನೇ ಇನ್ನಿಲ್ಲದಂತೆ ಕಾಡಿದ್ದ ಕೊರೊನಾ ಹೆಮ್ಮಾರಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಚೀನಾದ ವುಹಾನ್ ನಲ್ಲಿ. ಆದರೆ ವುಹಾನ್ ನಲ್ಲಿ ಯಾವಾಗ ಕೊರೊನಾ ಕಾಣಿಸಿಕೊಂಡಿರ ಬಹುದು ಅನ್ನೋದಕ್ಕೆ ಡಬ್ಲ್ಯುಎಚ್ ಓ ತಜ್ಞರ ತಂಡ ಉತ್ತರವನ್ನು ನೀಡಿದೆ. ಅಲ್ಲದೇ ಕೊರೊನಾ ಹೆಮ್ಮಾರಿ 2019ರ ಡಿಸೆಂಬರ್ ಗೂ ಮೊದಲೇ ಕಾಣಿಸಿಕೊಂಡಿಲ್ಲಾ ಅ್ನನೋದಕ್ಕೆ ಸಾಕ್ಷಾಧಾರಗಳ ಕೊರತೆಯಿದೆ ಎಂದಿದೆ.

ಕಳೆದ ಡಿಸೆಂಬರ್ ಅಂತ್ಯದಲ್ಲಿ ಚೀನಾದ ವುಹಾನ್ ನಲ್ಲಿ ಮೊದಲ ಬಾರಿಗೆ ಕೊರೊನಾ ಹೆಮ್ಮಾರಿ ಪತ್ತೆಯಾಗಿತ್ತು. ಚೀನಾ ಸರಕಾರ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ ವುಹಾನ್ ಪ್ರಾಂತ್ಯ ವೊಂದಲ್ಲೇ ಬರೋಬ್ಬರಿ 4000 ಕ್ಕೂ ಅಧಿಕ ಮಂದಿ ಕೊರೊನಾ ಹೆಮ್ಮಾರಿಗೆ ತುತ್ತಾಗಿದ್ದಾರೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಚೀನಾದಲ್ಲಿ ಲಾಕ್ ಡೌನ್ ಹೇರಿಕೆ ಮಾಡಲಾಗಿದ್ದು, ಬರೋಬ್ಬರಿ 76 ದಿನಗಳ ಕಾಲ ಜನರನ್ನು ಮನೆಯಲ್ಲಿಯೇ ಬಂದಿಯನ್ನಾಗಿಸಲಾಗಿತ್ತು. ಅಷ್ಟೇ ಅಲ್ಲಾ ವುಹಾನ್ ನಲ್ಲಿರುವ ಜೈವಿಕ ಲ್ಯಾಬೋರೇಟರಿಯಲ್ಲಿಯೇ ಕೊರೊನಾ ವೈರಸ್ ಸೃಷ್ಟಿಯಾಗಿದೆ ಅನ್ನೋ ಮಾತುಗಳು ಕೇಳಿಬಂದಿವೆ.

ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವದ 10 ರಾಷ್ಟ್ರಗಳ ತಜ್ಞರನ್ನೊಳಗೊಂಡ ವಿಶ್ವ ಆರೋಗ್ಯ ತಜ್ಞರ ತಂಡ ವುಹಾನ್ ನಲ್ಲಿರುವ ಆಸ್ಪತ್ರೆ, ಸಾಂಪ್ರದಾಯಿಕ ಮಾರುಕಟ್ಟೆ, ಮಾಂಸದ ಮಾರುಕಟ್ಟೆ, ಸಂಶೋಧನಾ ಸಂಸ್ಥೆ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿಯನ್ನು ನೀಡಿದೆ. 2019ರ ಡಿಸೆಂಬರ್ ತಿಂಗಳಿಗೂ ಮುಂಚೆ ಚೀನಾದ ಕೇಂದ್ರ ಭಾಗ ವುಹಾನ್ ನಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡಿದೆ ಎಂಬುದನ್ನು ನಿರ್ಧರಿಸುವ ಸಾಕ್ಷ್ಯಧಾರಗಳ ಕೊರತೆ ಇರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಚೀನಾದ ಎಕ್ಸ್ ಪರ್ಟ್ ಮಿಷನ್ ಹೇಳಿದೆ.

ಚೀನಾ ತಂಡದ ಮುಖ್ಯಸ್ಥ ಲಿಯಾಂಗ್ ವಾಲ್ನಿಯಾನ್ ಕೂಡ, 2019ರ ಡಿಸೆಂಬರ್ ತಿಂಗಳಿಗೂ ಮುಂಚಿನ ಅವಧಿಯಲ್ಲ ಕೋವಿಡ್ ಜನರಲ್ಲಿ ಹರಡುವಿಕೆಯ ಯಾವುದೇ ಅಂಶಗಳು ಕಂಡುಬಂದಿಲ್ಲ. ವುಹಾನ್ ನಗರದಿಂದ ಸೋಂಕು ಹರಡಿದೆ ಎಂಬುದನ್ನು ನಿರ್ಧರಿಸಲು ಸಾಕಷ್ಟು ಸಾಕ್ಷ್ಯಾಧಾರಗಳು ಕೂಡಾ ಸಿಕ್ಕಿಲ್ಲ ಎಂದಿದ್ದಾರೆ.

ಮೊದಲ ಅಲೆಯಿಂದ ತತ್ತರಿಸಿ ಹೋಗಿದ್ದ ಚೀನಾದಲ್ಲೀಗ ಎರಡನೇ ಕೊರೊನಾ ಅಲೆಯ ಅಬ್ಬರ ಶುರುವಾಗಿದೆ. ಅದ್ರಲ್ಲೂ ಈಶಾನ್ಯ ಚೀನಾ ಭಾಗದಲ್ಲಿ ಹೊಸ ಹೊಸ ಪ್ರಕರಣಗಳು ಹೆಚ್ಚುತ್ತಿದ್ದು, ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಹೇರಿಕೆಯಾಗಿದೆ. ಕೊರೊನಾ ವಿಚಾರದಲ್ಲಿ ಆರಂಭದಿಂದಲೂ ಸುಳ್ಳು ವರದಿಗಳನ್ನೇ ನೀಡುತ್ತಾ ಬಂದಿದ್ದ ಚೀನಾ ಇದೀಗ ಕೊರೊನಾ ಸೋಂಕಿನ ಹುಟ್ಟಿನ ಬಗ್ಗೆಯೂ ಗೊಂದಲನವನ್ನು ಸೃಷ್ಟಿಸುತ್ತಿದೆ ಚೀನಾ.

Comments are closed.