ಡಾರ್ಲಿಂಗ್ ಕೃಷ್ಣನಿಗೆ ಜೋಡಿಯಾದ ಡಿಂಪಲ್ ಹುಡುಗಿ…! ಮದುವೆ ಎದುರಲ್ಲೇ ಕೃಷ್ಣ ಕೊಟ್ರು ಮತ್ತೊಂದು ಸಿಹಿಸುದ್ದಿ..!!

ಸ್ಯಾಂಡಲ್ ವುಡ್ ನಲ್ಲಿ ಗಟ್ಟಿಮೇಳದ ಸದ್ದು ಮೂಡಿಸ್ತಿರೋ ಲವ್ ಬರ್ಡ್ಸ್ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಈಗಾಗಲೇ ಮದುವೆಗೆ ಗೆಸ್ಟ್ ಆಹ್ವಾನಿಸೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಈ ಮಧ್ಯೆಯೇ ಕೃಷ್ಣನ ಅಡ್ಡಾದಿಂದ ಸಿಹಿಸುದ್ದಿಯೊಂದು ಹೊರಬಿದ್ದಿದ್ದು, ಡಾರ್ಲಿಂಗ್ ಕೃಷ್ಣಾಗೆ ಡಿಂಪಲ್ ಬೆಡಗಿ ಸೈ ಎಂದಿದ್ದಾಳೆ.

ಸ್ಯಾಂಡಲ್ ವುಡ್ ನಲ್ಲಿ ತಾನು ನಟಿಸಿದ ಎಲ್ಲಾ ಚಿತ್ರಗಳಲ್ಲೂ ಅದೃಷ್ಟವಂತೆ ಎನ್ನಿಸಿದ ಡಿಂಪಲ್ ಬೆಡಗಿ ರಚಿತಾರಾಮ್ ಡಾರ್ಲಿಂಗ್ ಕೃಷ್ಣನ ಜೊತೆ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಸಧ್ಯ ಹೆಸರಿಡದ  ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಗುಳಿಕೆನ್ನೆಯ ಬೆಡಗಿ ರಚಿತಾರಾಮ್ ಜೊತೆಯಾಗಲಿದ್ದಾರೆ.

ದೀಪಕ್ ನಿರ್ದೇಶನದಲ್ಲಿ ಮೂಡಿಬರಲಿರೋ ಈ ಚಿತ್ರವನ್ನು ಮದನ್ ಅರಸ್ ಹಾಗೂ ಲಕ್ಷ್ಮೀನಾರಾಯಣ ನಿರ್ಮಿಸಲಿದ್ದು, ಸಧ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

ಇದೇ ಮೊದಲ ಬಾರಿಗೆ ಡಾರ್ಲಿಂಗ್ ಕೃಷ್ಣ ಹಾಗೂ ರಚಿತಾರಾಮ್ ಜೋಡಿಯಾಗುತ್ತಿದ್ದು, ಈ ಜೋಡಿ ನೋಡೋಕೆ ಅಭಿಮಾನಿಗಳು ಕಾಯ್ತಿದ್ದಾರೆ.

Comments are closed.